Monday, September 14, 2020

ಕೋರಸ್ ಆಫ್ ಐಯಸ್ ಗರ್ಲ್ಸ್

ಬರುತ್ತಿರುವಳು ಹಂಸನಡಿಗೆಯಲಿ 

ಆ ಶ್ವೇತ ಸುಂದರಿ ಆ ರಮ್ಯ ಸುಂದರಿ

ಲತೆಯಂತೆ ಅವಳ ಮೈಮಾಟ

ಅವಳ ಕಣ್ಣುಗಳು ನುನುಜಾಕ್ಷಿ

ಬಹಳ ಸುಂದರ ಅವಳ ನೋಟ

ಯಾರೀ ರೂಪಸಿ?

ಅನುಪಮ ಸೌಂದರ್ಯರಾಶಿ

ಈ ಭೂಮಿಯಲಿ

ಬರುತ್ತಿರುವಳು ಹೆಜ್ಜೆಯ ಮೇಲೆ ಹೆಜ್ಜೆ ಇಕ್ಕುತ

ಶ್ರೀವಳ್ಳಿ ಜಗದಾಂಬೆಯರ ಮನದಲಿ ನೆನೆಯುತ್ತ

ತನ್ನ ಮೃದುಲ ವಾಣಿಯಲಿ ದೇವರ ನಾಮ ಹಾಡುತ್ತ

ಬರುತ್ತಿರುವಳು ಕೊಳದತ್ತ

ಸರೋಜ ಪುಷ್ಪವ ಹುಡುಕುತ್ತ

ಚೈತ್ರ ಮಾಸದ ಸಂಧ್ಯಾಕಾಲದ ಪೂಜೆಗಾಗಿ

ನದಿಯ ತಟದ ಭವ್ಯ ದೇಗುಲದ

ಶಿಲ್ಪ ಸೌಂದರ್ಯವ ಮೆಲುಕುತ್ತ

ನಿಧಾನಗತಿಯಲಿ ಹೆಜ್ಜೆ ಇಕ್ಕುತ್ತ

ಬರುತ್ತಿರುವಳು ನಿರುಪಮ ಸುಂದರಿ

ಪೂರ್ಣಿಮೆಯ ದಿನದ ಬೆಳದಿಂಗಳು ಎಲ್ಲೆಲ್ಲೂ

ಆ ಶ್ವೇತ ಸುಂದರಿ ಬರುತ್ತಿರಲು

ಹಂಸ ನಡಿಗೆಯಲಿ ಬರುತ್ತಿರಲು

1 comment:

ಶ್ವೇತ ಕೃಪಾನಿಧಿ ಉಡುಪ said...

This poem is special as it includes all my classmate girls names. That's why the title, chorus of IS. 2002 Information Science batch of SJCIT college. Mostly I had written this poem in the 3rd year of Engineering.