Friday, September 4, 2020

ಸಮಯದ ಬೆಲೆ

ಮತ್ತೆ ಹಗಲು ಮತ್ತೆ ಇರುಳು ಕಾಲಚಕ್ರ ಹೀಗೇ ಉರುಳುತ್ತಿದೆ ಅತಿ ವೇಗದಿ ಸಾಗುತ್ತಿದೆ

ಹೀಗಿರಲು ಪ್ರತಿಯೊಂದು ಕ್ಷಣವೂ ಅಮೂಲ್ಯ ಕಳೆದುಹೋಗುತ್ತಿರುವ ಕ್ಷಣವ ತಡೆಯುವುದು ಅಸಾಧ್ಯ

ಆಗಲೇ ಕೈಜಾರಿದೆ ಭೂತಕಾಲ ಮುಂದೇನೋ ಯಾರು ಬಲ್ಲ ಈಗ ಕೈಯಲ್ಲಿರುವುದೊಂದೆ ಅದೇ ವರ್ತಮಾನ ಕಾಲ

ವಸಂತ ಗ್ರೀಷ್ಮ ಹೀಗೆ ಉರುಳುತ್ತಿವೆ ಋತುಮಾನಗಳು ಯಾರಿಗೂ ಕಾಯದೆ ಏನನೂ ಹೇಳದೆ

ಮುಂದಾಲೋಚನೆ ಇರದೆ ಕಾಲಹರಣ ಮಾಡಿದರೆ ಸಮಯವು ವ್ಯರ್ಥ ನಂತರ ಎಷ್ಟು ಪರಿತಪಿಸಿದರೂ ಅದಕ್ಕಿರದು ಅರ್ಥ

ಕಾಲ ಮಿಂಚಿಹೋದ ಮೇಲೆ ಬಾಳು ಬರಿ ಗೋಳೇ ಕಾಲದ ಜೊತೆಗೇ ಸಾಗಿದರೆ ಮಾತ್ರ ನಮ್ಮದು ನಾಳೆ

No comments: