Tuesday, September 22, 2020

ಬಿಸಿತುಪ್ಪ

ಏಕೆ ನೀಡಿದೆ ಈ ಜೀವನ ಕಲ್ಲು ಮುಳ್ಳುಗಳ ನೋವಿನ ಪಯಣ ಸಂತೋಷದ ಕ್ಷಣಗಳು ಕ್ಷಣಿಕ ದುಃಖವೇ ಶಾಶ್ವತ ಬಳಿಕ

ನೆಮ್ಮದಿಯಿರದ ಈ ಬಾಳು ನಿತ್ಯವೂ ಒಂದೊಂದು ಗೋಳು ಮನದಲ್ಲಿ ಎದ್ದಿದೆ ಅಶಾಂತಿಯ ಅಲೆ ಆನಂದವು ಕಳೆದುಕೊಂಡಿದೆ ತನ್ನ ನೆಲೆ

ಯಾರಿಗೆ ಬೇಕು ಈ ನೀರಸ ಬದುಕು ಸಂತಸವಿಲ್ಲಿ ಹರುಕು ಮುರುಕು ಸಾಯಲೂ ಸಾಲುತ್ತಿಲ್ಲ ಧೈರ್ಯ ದೇವರೇ ಸಾಕು ನಿನ್ನೀ ಕ್ರೌರ್ಯ

ಒಂದಾದ ಮೇಲೊಂದು ಕಷ್ಟಗಳು ಅನಿಸಿದೆ ಬಾಳು ನರಕ ಸಾಕಾಗಿದೆ ಈ ನರಕದ ಸಹವಾಸ ಇದಕ್ಕಿಂತ ವಾಸಿ ವನವಾಸ

ಎಲ್ಲವ ತೊರೆಯಲೂ ಆಗದೆ ಮರೆಯಲೂ ಬಾರದೆ ಬದುಕಲೂ ಆಗದೆ ಬಿಸಿತುಪ್ಪದಂತೆ ಈ ಬದುಕು

No comments: