ಏಕೋ ಕಾಣೆ ಮನವಿಂದು ಬಾಡಿದೆ ಮೌನವು ಬಿಡದೆ ಕಾಡಿದೆ
ಹೆಚ್ಚಿರುವ ಒತ್ತಡದ ಪರಿಸ್ಥಿತಿ ಅದರಿಂದಲೇ ಇರಬಹುದು ಇಂಥ ದುಸ್ಥಿತಿ
ಮನುಷ್ಯರೆಂದರೇ ಮೂಡಿದೆ ಬೇಸರ ಎಲ್ಲ ಬಂಧನಗಳಿಂದಲೂ ದೂರ ಓಡಲು ಮನಕೆ ಆತುರ
ಈಗ ಅರಿವಾಗಿದೆ ಎಲ್ಲವೂ ನಶ್ವರ ಅನಿಸುತ್ತಿದೆ ದಿನದಿನಕ್ಕೂ ಜೀವನ ಬಹಳ ದುಸ್ತರ
ಆದಿ ಅಂತ್ಯವಿರದ ಈ ಜಂಜಾಟ ಇದರಿಂದ ನನ್ನ ಬಾಳಾಗಿದೆ ದೊಂಬರಾಟ
No comments:
Post a Comment