ಓ ಕಾಲವೇ,
ಒಮ್ಮೆ ನೀ ಹಿಂದಕ್ಕೆ ಹೋಗಬಾರದೆ?
ಆಗ,
ನಾ ಹಿಂದೆ ಆಯ್ದುಕೊಂಡ ಬದುಕಿನ ದಾರಿ ಬದಲಿಸುವೆ
ನನ್ನಿಂದಾದ ತಪ್ಪುಗಳನ್ನೆಲ್ಲ ಸರಿಪಡಿಸಿಕೊಳ್ಳುವೆ
ಕಳೆದುಹೋದ ಕೆಲವು ಮಧುರ ಕ್ಷಣಗಳ ಮತ್ತೆ ಪಡೆಯುವೆ
ಬದುಕನ್ನು ಇನ್ನಷ್ಟು ಸುಂದರವಾಗಿ ರೂಪಿಸಿಕೊಳ್ಳುವೆ
ಮುರಿದುಹೋದ ಸಂಬಂಧಗಳಿಗೆ ಬೆಸುಗೆ ಹಾಕುವೆ
ಇನ್ನೂ ಒಳ್ಳೆಯ ಕನಸು ಕಾಣುವೆ
ಮುಂದೆ ಅದನ್ನು ನನಸಾಗಿಸುವೆ
ಇಂದು ನಾ ಎಡವಲು ಕಾರಣವಾದ ಕಲ್ಲನ್ನು ಬದಿಗೆ ಸರಿಸುವೆ
ಓ ಕಾಲವೇ, ಇನ್ನೂ ಸಮಯವಿದೆ
ನೀ ಹಿಂದಕ್ಕೆ ಹೋಗಬಾರದೇ....
No comments:
Post a Comment