ನಲ್ಲೆ, ಬಹಳ ದಿನಗಳಾಯ್ತು ನೀ ಕನಸಲ್ಲಿ ಬಾರದೆ ಮುಖವ ತೋರದೆ ಎತ್ತ ಹೋದೆ ನೀ ನನ್ನಿಂದ ಬಹುದೂರ
ನನಗಾಗುತ್ತಿರುವ ವಿರಹದ ಬಾಧೆ ನಿನಗಿಲ್ಲವೇ? ಈಗಂತು ನನಗಿದು ಹೊಸತಲ್ಲ ಅಗಲಿಕೆಯ ನೋವು ಹೃದಯದಲಿ ಮನೆ ಮಾಡಿರುವಾಗ
ನೀ ಹೇಗಿರುವೆಯೋ ನಾ ಅರಿಯೆ ನಿನ್ನ ರೂಪದ ಬಗ್ಗೆ ನಾ ತಿಳಿಯೆ ಆದರೂ ನೀ ಬಂದಾಗ ನಾ ಗುರುತಿಸುವೆ ಏಕೆಂದರೆ ನೀ ನನ್ನ ಕನಸಿನ ನಲ್ಲೆ, ಕೇವಲ ಕನಸಿನ ನಲ್ಲೆ
No comments:
Post a Comment