Wednesday, September 16, 2020

ದುರಂತ

ಕಣ್ಣುಗಳು ಮಂಜಾಗಿ ಹನಿಗೂಡಿ ಮುತ್ತಾಗಿ ಕಂಬನಿಯ ರೂಪದಲಿ ಜಾರಿ ಬೀಳುತ್ತಿದೆ

ಪ್ರೀತಿಯ ಸಿಂಚನವಿರದೆ ಬಾಡಿರುವ ಹೃದಯದಿಂದ ಹೊರಹೊಮ್ಮುತ್ತಿರುವ ವೇದನೆಯ ಮೂಕರಾಗ ಗಾಳಿಯಲಿ ತೇಲಿಹೋಗುತ್ತಿದೆ

ಕಂಡ ಕನಸುಗಳು ಬರಿ ಹಗಲುಗನಸಾಗಿ ಅತ್ತ ನನಸಾಗಲಾರದೆ ಇತ್ತ ಕನಸಾಗಿಯೂ ಉಳಿಯಲಾರದೆ ಪರಿತಪಿಸಿವೆ

ಮಾತುಗಳು ಎಂದೋ ಮರೆಯಾಗಿ ಮೌನವೇ ಮಾತಾಗಿ ಬದುಕು ನೀರಸವಾಗಿ ಬೇಸರ ತರಿಸಿ ಜೀವ ಹಿಂಡಿದೆ

ನೀರಿಂದ ಹೊರಬಂದ ಮೀನಂತೆ ರೆಕ್ಕೆ ಮುರಿದ ಹಕ್ಕಿಯಂತೆ ನೀನಿರದ ಈ ಬದುಕು ಬರಡಾಗಿದೆ

ಈ ನಿಸ್ತೇಜ ಕಣ್ಣುಗಳು ಕ್ಷೋಭೆಗೊಳಗಾದ ಮನ ಚಟುವಟಿಕೆ ಮರೆತ ತನು ನೆಮ್ಮದಿಯಿರದ ಬಾಳು ಈ ದುರಂತಕ್ಕೆ ಸಾಕ್ಷಿಯಾಗಿವೆ

No comments: