Wednesday, September 2, 2020

ಅಡಕತ್ತರಿ

ಹೊರಗೆ ತಂಗಾಳಿ ಬೀಸುತ್ತಿದ್ದರೂ ಏನು ಪ್ರಯೋಜನ?

ಒಳಗೆ ಮನವು ಕುದಿಯುತ್ತಿದೆ

ಏಕೋ ಕಸಿವಿಸಿ ಏನೋ ತಳಮಳ

ಹೇಳಲೂ ಬಾರದು ಹೇಳದೆ ಇರಲಾಗದು

ಈ ಸಂಕಟವೇ ಕಿತ್ತು ತಿನ್ನುತ್ತಿದೆ

ಏನೂ ಮಾಡಲು ದಾರಿ ತೋಚದು

ಆಗಿದೆ ಸ್ಥಿತಿಯು ಅಡಕತ್ತರಿಯಲ್ಲಿರುವ ಅಡಕೆಯಂತೆ

No comments: