Thursday, September 3, 2020

ಕ್ಷಮಯಾಧರಿತ್ರಿ

ಹೆಣ್ಣು ಕ್ಷಮಯಾಧರಿತ್ರಿ ಎನಿಸಿಕೊಂಡ ಮಾತ್ರಕ್ಕೆ ಗಂಡು ಮಾಡುವ ಅನ್ಯಾಯಗಳನ್ನೆಲ್ಲ ಸಹಿಸಬೇಕೆ?

ತನ್ನೆಲ್ಲಾ ನೋವುಗಳನ್ನು ನುಂಗಬೇಕೆ?

ಅವನ ತಪ್ಪುಗಳನ್ನೆಲ್ಲ ಕ್ಷಮಿಸಬೇಕೆ?

ತನ್ನೆಲ್ಲಾ ಆಸೆಗಳನ್ನು ಚಿವುಟಿ ಸುಮ್ಮನಾಗಬೇಕೆ?

ಅವನ ತಾಳಕ್ಕೆ ತಕ್ಕಂತೆ ಕುಣಿಯಬೇಕೆ?

ತನ್ನ ಮೇಲಾದ ದೌರ್ಜನ್ಯಗಳನ್ನೆಲ್ಲ ಮರೆಯಬೇಕೆ?

ಸಾಕು ಸಾಕು!

ಆ ಒಂದು ಪಟ್ಟಕ್ಕೋಸ್ಕರ ಇಷ್ಟೆಲ್ಲ ತ್ಯಾಗ ಅಗತ್ಯವೇ?

ಹಾಗಾದರೆ ಹೆಣ್ಣಿಗೆ ಕ್ಷಮಯಾಧರಿತ್ರಿ ಎಂಬ ಆ ಹೊಗಳಿಕೆಯ ಹೊನ್ನಿನ ಶೂಲವೇ ಬೇಡ

No comments: