Monday, September 14, 2020

ಕವಿ

ಮನಸ್ಸಿಗೆ ತೋಚಿದ್ದು ಗೀಚುತ್ತ ಕವಿಯಾದವನು 

ಓದುಗರ ಮನದಲ್ಲಿ ಚಿತ್ರ ಬರೆಯುವ ಚಿತ್ರಕಾರನಾದ

ಆ ಕ್ಷಣ ದುಃಖ ಮಾಯ ಮಾಡುವ ಜಾದೂಗಾರನಾದ

ನೋವನ್ನು ಗುಣಪಡಿಸುವ ಮನೋವೈದ್ಯನಾದ

ಯೋಚಿಸುವಂತೆ ಮಾಡುತ್ತ ತಲೆಗೆ ಕೆಲಸ ನೀಡುವ ಕಾರ್ಮಿಕ ಮುಖಂಡನಾದ

ಭಾವನೆಗಳಿಗೆ ಆಕಾರ ಕೊಡುತ್ತ ಶಿಲ್ಪಿಯಾದ

ಕನಸುಗಳ ಕಟ್ಟಲು ಕೈಜೋಡಿಸಿ ಅಭಿಯಂತರನಾದ

ಸಾರಾಂಶ ಮನದಲ್ಲಿ ನಿಲ್ಲುವಂತೆ ಮಾಡಿ ಛಾಯಾಗ್ರಾಹಕನಾದ

ಅಭಿಪ್ರಾಯಗಳ ಹದಗೊಳಿಸುವ ಚಮ್ಮಾರನಾದ

ಬದುಕಿನ ಪಾಠ ಕಲಿಸುತ್ತ ಶಿಕ್ಷಕನಾದ

ಮನದಲ್ಲಿ ಸಂತಸದ ಹೂವರಳಿಸಿ ಹೂಮಾಲಿಯಾದ

ಕನಸುಗಳ ಬಿತ್ತುವ ಕನಸುಗಾರನಾದ

ಏನೆಲ್ಲಾ ಆದ ಒಬ್ಬ ಕವಿಯು!

No comments: