Friday, September 4, 2020

ನಂಬಿಕೆ

ಗೆಳೆತನವೇ ಇರಲಿ ಪ್ರೀತಿ ಪ್ರೇಮವೇ ಇರಲಿ ಎಲ್ಲದಕ್ಕೂ ಅಡಿಪಾಯ ನಂಬಿಕೆ

ಏಕೆಂದರೆ ಸಂಬಂಧಗಳ ನಡುವೆ ಇರಕೂಡದೆಂದೂ ಅಪನಂಬಿಕೆ

ಎಲ್ಲಿ ನಂಬಿಕೆಯಿದೆಯೋ ಅಲ್ಲಿದೆ ಒಗ್ಗಟ್ಟು ಅದೇ ಇಲ್ಲದಿರೆ ಮಾತ್ರ ತಲೆದೂರುವುದು ಬಿಕ್ಕಟ್ಟು ನಂಬಿಕೆ ಇರದಿರೆ ಅನುಮಾನ ಎಂಬ ಒಂದು ಬಿರುಗಾಳಿಗೇ ಆಗುವುದು ಸಂಬಂಧಗಳ ಸಮಾಧಿ ಆದ್ದರಿಂದಲೆ ನಂಬಿಕೆಯೇ ಎಲ್ಲವನ್ನೂ ನೀಡುವ ನಿಧಿ ನಂಬಿಕೆಯಿಡುವಷ್ಟೇ ಮುಖ್ಯ ಅದನ್ನು ಉಳಿಸಿಕೊಳ್ಳುವುದು, ಉಳಿಸಿಕೊಳ್ಳುತ್ತ ಪ್ರೀತಿ ಸ್ನೇಹ ಎಲ್ಲವ ಹೆಚ್ಚು ಹೆಚ್ಚು ಗಳಿಸಿಕೊಳ್ಳುವುದು

ನಂಬಿಕೆ ಇರದಿರೆ ಮನಸುಗಳು ಕಹಿಯಾಗಿ ಸಂಬಂಧಗಳಾಗುವುದು ಕಗ್ಗಂಟು 

ನಂತರ ಇದು ಎಲ್ಲೆ ಮೀರಿ ಆಗುವುದು ಬಿಡಿಸಲಾಗದ ಒಗಟು

ಬಳ್ಳಿಗೆ ಮರದಂತೆ ಸಂಬಂಧಗಳಿಗೆ ನಂಬಿಕೆಯೇ ಎಂದಿಗೂ ಆಸರೆ

ಪ್ರೀತಿ ವಿಶ್ವಾಸಗಳ ಉಳಿಸಿಕೊಳ್ಳಲು ಹೋಗಬೇಕಾಗಿದೆ ನಂಬಿಕೆಯ ಮೊರೆ

ಇದರಿಂದ ತಿಳಿಯುವುದು ನಂಬಿಕೆಯೇ ಜೀವನ

ನಂಬಿಕೆ ಇರದ ಜೀವನದ ಪಯಣ

ನಮ್ಮನ್ನಾಗಿಸುವುದು ಹೈರಾಣ

No comments: