Wednesday, September 2, 2020

ಜಲದ ಬೆಲೆ

 ನೀರು ನೀರು ನೀರು 

ಎಲ್ಲೆಲ್ಲೂ ನೀರಿಗೆ ಹಾಹಾಕಾರ 

ನೀರೇ ಬದುಕಿಗೆ ಆಧಾರ

ನೀರಿಲ್ಲದೆ ಒಣಗಿವೆ ತರುಲತೆಗಳು

ವಲಸೆ ಹೋಗುತ್ತಿವೆ ಪಕ್ಷಿಗಳು 

ಪ್ರಾಣ ತ್ಯಜಿಸುತ್ತಿವೆ ಪ್ರಾಣಿಗಳು

ನೀರಿಗಾಗಿ ಅಗೆದು ಅಗೆದು ಭೂಮಿ ಬರಡು ಮಾಡಿದರು 

ಆಕಾಶಕ್ಕೂ ಹೋಗಿ ಮೋಡ

ಬಿತ್ತನೆ ಮಾಡಿದರು

ಆದರೆ ಮಳೆ ಬಂದಾಗ ನೀರು ಶೇಖರಿಸಲಿಲ್ಲ

ಮರ ಕಡಿಯುವುದನ್ನೂ ನಿಲ್ಲಿಸಲೇ ಇಲ್ಲ

ನೀರಿಲ್ಲದೆ ಆಗುವುದು ಜೀವನ ಅಸ್ತವ್ಯಸ್ತ

ಸುಮ್ಮನೆ ಎಷ್ಟು ಯೋಚಿಸಿದರೂ ಎಲ್ಲವೂ ವ್ಯರ್ಥ

ಮುಂದೊಂದು ದಿನ ನೀರನ್ನು ಎಲ್ಲೂ ಕಾಣದೆ

ಹಾಕುವನೇನೋ ಮನುಷ್ಯ ಬಾಯಿ ಸಮುದ್ರಕ್ಕೇ

ಇನ್ನಾದರೂ ಎಚ್ಚೆತ್ತುಕೋ ಭಂಡ ಮಾನವ

ಆಗದಿರು ಎಂದಿಗೂ ನೀ ದಾನವ

ನಿನ್ನ ಕೊಡುಗೆ ಮುಖ್ಯ ಮುಂದಿನ ಪೀಳಿಗೆಗೆ

ಇನ್ನು ಮುಂದಾದರೂ ದುಡಿ ನೀ ( ಭೂಮಿಯ) ಎಲ್ಲರ ಏಳಿಗೆಗೆ

No comments: