ಚಿಂತೆಯೇಕೆ ಮಾಡುವೆ ಮನವೇ ಚಿಂತಿಸಿದೊಡೆ ಒಡೆದ ಕನ್ನಡಿ ಒಂದುಗೂಡುವುದೇ? ಬಾಡಿದ ಹೂವರಳುವುದೇ? ಮಿಂಚಿ ಹೋದ ಕಾಲ ಮತ್ತೆ ಬರುವುದೇ? ಸುಮ್ಮನೆ ಚಿಂತಿಸುವೆಯೇಕೆ?
ಚಿಂತೆಯೆಂಬ ಬೆಂಕಿ ನಿನ್ನನ್ನು ಸುಟ್ಟು ಅದರ ಕಾವು ದೇಹಕ್ಕೆ ತಟ್ಟಿದೆ ನಿನಗೆ ನೆಮ್ಮದಿ ಶೂನ್ಯ ದೇಹಕ್ಕೆ ಅನಾರೋಗ್ಯ ಚಿಂತಿಸುವಿಯೇಕೆ?
ಚಿಂತಿಸಿ ಚಿಂತಿಸಿ ನೀ ಸಾಧಿಸಿದ್ದೇನು ನಿನ್ನ ಕೈಯಲ್ಲೇನೂ ಇಲ್ಲದಾಗ ಚಿಂತಿಸಿ ಫಲವೇನು?
ಹೆಚ್ಚು ಚಿಂತಿಸಿದಷ್ಟೂ ನೀ ಹಣ್ಣಾಗಬೇಕಷ್ಟೇ ಚಿಂತಿಸಿ ಸಿಗುವ ಫಲವಷ್ಟೇ ಚಿಂತೆಯ ಪಕ್ಕಕ್ಕೆ ದೂಡಿ ನೀ ನಿರಾಳವಾಗು ಅದರಿಂದ ನೀ ಮುಕ್ತವಾಗು
ಚಿಂತೆಯೆಂಬ ದಾವಾನಲದಲಿ ನೀ ಬೇಯದಿರು ಚಿಂತೆಯಿಂದ ಮಮ್ಮಲ ಮರುಗದಿರು ವಿಲಪಿಸದಿರು ಚಿಂತಿಸಿ ನೀ ಕ್ಷೋಭೆಗೊಳಗಾಗದಿರು
ಚಿಂತೆಯೇಕೆ ಮಾಡುವೆ ನೀ ಚಿಂತಿಸದಿರು ಮನವೇ ಎಲ್ಲ ನೋಡಲು ಮೇಲೆ ಅವನಿರುವಾಗ ನೀ ನಿಶ್ಚಿತೆಯಿಂದಿರಬಾರದೆ?
No comments:
Post a Comment