ಬಹಳ ದಿನಗಳಾಯ್ತು ನೀ ಕಾಣೆಯಾಗಿ ಈ ಮನದಿಂದ ನೀ ದೂರಾಗಿ ಎತ್ತ ಹೋದೆಯೋ ಕಾಣೆ ನೀನಿರದೆ ನನ್ನಾಣೆ ಈ ಬದುಕು ದುಸ್ತರ
ಅರ್ಧ ಆಯಸ್ಸು ಮುಗಿಯಿತು ನಿನ್ನ ಹುಡುಕಾಟದಲಿ ಈಗಲೂ ನಿನ್ನ ನಿರೀಕ್ಷೆಯಲ್ಲೇ ಈ ನೋಟ ಎತ್ತ ಹೂಡಿದೆಯೋ ನೀ ಓಟ
ನಿಜ! ನಿನಗಿದೆಲ್ಲವೂ ಹುಡುಗಾಟ
ಬಯಸಿದ್ದೆಲ್ಲವೂ ಬಳಿಯೇ ಇದ್ದರೂ ಮನಕೆ ನೀ ಇರದಿರೆ ಎಲ್ಲವೂ ವ್ಯರ್ಥ ನೀ ಇರದೇ ಸುಖವೂ ಕಳೆದುಕೊಳ್ಳುವುದು ತನ್ನ ಅರ್ಥ
ನೀ ಜೊತೆ ಇದ್ದಾಗ ಈ ಬಾಳು ಸುಂದರ ನಿನ್ನೊಂದಿಗೆ ಕಳೆದ ಕ್ಷಣಗಳು ಮಧುರಾತಿ ಮಧುರ ಆದರೆ ನೀ ಕೈಜಾರಿದ ಮೇಲಿಂದ ಎಲ್ಲವೂ ದುರ್ಬರ
ಎಲ್ಲಕ್ಕಿಂತ ಮಿಗಿಲಾದ ಸ್ಥಾನ ಈ ಮನದಲಿ ನಿನಗೆ ಆದರೂ ನೀ ಅದನು ಬಿಟ್ಟು ಹೊರ ನಡೆದೆ ಎಲ್ಲಿಗೆ? ನೀನಿರದೆ ನಾ ಒಂಟಿಯಾದೆ ಬೇಸರದಿಂದ ಹತಾಶಳಾದೆ ದಿಕ್ಕುತೋಚದೆ
ಈಗಲಾದರೂ ನೀ ಬಳಿಗೆ ಬಾರೆಯಾ ನನ್ನ ಮೇಲೊಂದಿಷ್ಟು ಅನುಕಂಪ ತೊರೆಯಾ
ನಿನಗಾಗಿ ನಾ ಕೊನೆವರೆಗೂ ಕಾಯುವೆ
ಓ ನೆಮ್ಮದಿಯೇ, ನೀ ಪುನಃ ಸಿಕ್ಕೇ ಸಿಗುವೆ ಎಂದು ನಂಬಿ
No comments:
Post a Comment