Thursday, September 10, 2020

ಮಣ್ಣಿನಮಗ

ಮುಂಜಾನೆಯೇ ನೇಗಿಲೊಡಗೂಡಿ ಹೊರಟವ ದಿನವೆಲ್ಲಾ ದುಡಿದು ದಣಿದು ಮುಸ್ಸಂಜೆಗೆ ವಾಪಾಸಾಗುವವ

ಇವನೇ ರೈತ

ಅವನ ಸಣಕಲು ದೇಹಕ್ಕೆ ಪೈಪೋಟಿ ಆ ಬಡಕಲು ಎತ್ತುಗಳು ಮುರುಕಲು ಗುಡಿಸಲು

ತನ್ನ ಬಡತನಕ್ಕೆ ಸಾಕ್ಷಿಯಂತೆ

ತಾನು ಹೊಟ್ಟೆಗೆ ತಣ್ಣೀರು ಬಟ್ಟೆ ಕಟ್ಟಿ ನಮ್ಮೆಲ್ಲರ ಹೊಟ್ಟೆ ತುಂಬಿಸುವ

ಭೂತಾಯಿಯ ಸೇವೆಗೈಯುತ ಅವಳ ಋಣ ತೀರಿಸುವ

ಪ್ರತಿ ತಾಯಿ ತನ್ನ ಕಂದನಿಗೆ ನೀಡುವಳು ಕೈತುತ್ತು ಅಡಗಿದೆ ಅದರ ಹಿಂದೆ ರೈತನ ಶ್ರಮ ಕಸರತ್ತು

ಕೈಕೆಸರಾದರೆ ಬಾಯಿ ಮೊಸರು ಎಂಬುದು ಅವನ ಬೀಜಮಂತ್ರ

ಅದರಂತೆ ನಡೆಯುವನು ಕಷ್ಟಪಟ್ಟು ಆದರೂ ಇವನ ಬಾಳು ಅತಂತ್ರ

ಮಳೆಯಿರಲಿ ಚಳಿಯಿರಲಿ ಬಿರುಗಾಳಿ ಬೀಸಲಿ ರಣಬಿಸಿಲೇ ಬರಲಿ ಅಳುಕಿಲ್ಲ ಅಂಜಿಕೆಯಿಲ್ಲ ಮೈ ಬಗ್ಗಿಸಿ ದುಡಿಯುವುದ ನಿಲ್ಲಿಸುವುದಿಲ್ಲ

ತನ್ನ ಕಷ್ಟಕ್ಕೆ ಪ್ರತಿಫಲ ಸಿಗದಿದ್ದರೂ ನಂಬಿದ ಕಾಯಕ ತೊರೆಯುವುದಿಲ್ಲ

ವರುಣದೇವನ ಕೃಪೆ ಅಲ್ಪವಿದ್ದರೂ ಅವನ ನಂಬುವುದ ಮರೆಯುವುದಿಲ್ಲ

ಮಣ್ಣಿನ ಸೇವೆಗೈಯುತ್ತ ಮಣ್ಣಲ್ಲಿ ಮಣ್ಣಾಗುವ ಇವನೇ ನಿಜವಾದ ಮಣ್ಣಿನಮಗ

No comments: