ನನ್ನಲ್ಲಿ ನಾನಿಲ್ಲ ಎಲ್ಲಿ ಕಳೆದುಹೋದೆ ನಾನು? ಮನದ ತುಂಬಾ ತುಂಬಿದೆ ಬರೀ ಅಂಧಕಾರ
ಮೊದಲಿದ್ದ ಭಾವನೆಗಳು ಈಗಿಲ್ಲ ಮೊದಲಿದ್ದ ಆಸೆಗಳೂ ಇಲ್ಲ ಮೊದಲಿದ್ದ ಜೀವನೋತ್ಸಾಹ ಇರದೇ ಜೀವಸೆಲೆಯೇ ಬತ್ತಿ ಹೋಗಿದೆಯಲ್ಲ
ಜಡತ್ವ ತನು ಮನವ ಹಾಸುಹೊಕ್ಕು ಕ್ರಿಯಾಶೀಲತೆಯ ಹೊರ ತಳ್ಳಿದೆ ಎಲ್ಲಿ ಕಳೆದುಹೋದೆ ನಾ ಈ ಸ್ಪರ್ಧಾತ್ಮಕ ಯುಗದಿ?
ಕೀಳರಿಮೆಯ ಹುಳು ಮನವ ಕೊರೆಯುತಿರುವಾಗ ಹತಾಶೆಯ ಶರಧಿಯಲಿ ಎಲ್ಲಿ ಮುಳುಗಿಹೋದೆ ನಾ? ನನಗೇ ಅರಿಯದಂತೆ ಎಲ್ಲಿ ಕಳೆದುಹೋದೆ ನಾ? ಎಲ್ಲಿ ಕಳೆದು...
No comments:
Post a Comment