ಅಣೆಕಟ್ಟು ಕಟ್ಟಲಾದೀತೇ ಎಡಬಿಡದೆ ಸುರಿಯುತ್ತಿಹ ಈ ಕಣ್ಣೀರಿಗೆ ಹುಸಿ ಸಾಂತ್ವನದ ಮಾತುಗಳಿಂದ?
ಆಗಿಹೋದವು ಮಾಗಿಹೋದವು ದೇಹದ ಮೇಲಾದ ನೂರಾರು ಗಾಯಗಳು
ಮನದ ಮೇಲಾದ ಈ ಒಂದು ಗಾಯ ಮಾತ್ರ ಮಾಗದೆ ಒಣಗದೆ ಹಚ್ಚ ಹಸಿರಾಗಿದೆ
ಹಾಸು ಹೊಕ್ಕಿದೆ ನಿನ್ನ ಮನದಲ್ಲೊಂದು ಭೂತ
ಅದೇ ಅನುಮಾನ
ನಿನಗಾದರೂ ತಿಳಿಯದೇ?
ನಾನು ಪವಿತ್ರ ಅಗ್ನಿಗೆ ಸಮಾನ
ನಿಜವಾದ ಪ್ರೀತಿ ನಂಬಿಕೆಗಳೇ ಈ ಗಾಯಕ್ಕೆ ಮುಲಾಮು ಅದೇ ಔಷಧಿ
ನಿನಗೊಂದು ತಿಳಿಯಲಿ ಗೆಳೆಯ ನಿನ್ನ ಬಳಿಯೇ ಇದೆ ಆ ಔಷಧಿ ಎಂಬ ನಿಧಿ
No comments:
Post a Comment