Wednesday, September 2, 2020

ವಾಸ್ತವ

 ನಾವೆಂದುಕೊಂಡಷ್ಟು ಸುಲಭ ಅಲ್ಲ ಜೀವನ

ಎಂದಿದ್ದರೂ ಇದು ಮಣ್ಣಿನ ದೋಣಿಯ ಮೇಲೆ ಪಯಣ

ಹಲವು ಬಾರಿ ತಲೆಕೆಳಗಾಗುವುದು ನಮ್ಮೆಲ್ಲಾ ಲೆಕ್ಕೆಚಾರಗಳು

ಗಾಳಿಗೆ ತೂರಿ ಹೋಗುವವು ಕಂಡ ಕನಸುಗಳು

ಬರುವಾಗ ಒಂಟಿ ಹೋಗುವಾಗ ಒಂಟಿ ಇವೆರಡರ ಮಧ್ಯೆ ಬರೀ ಕತ್ತಲು ನಮ್ಮ ಜಂಟಿ

ಪರಿಸ್ಥಿತಿಗಳು ಕೈಮೀರಿ ಆಗುವುದು ಕ್ಲಿಷ್ಟ

ಧೈರ್ಯವಿರದಿರೆ ಅವನ್ನೆಲ್ಲ ಎದುರಿಸುವುದು ಕಷ್ಟ

ಇರುವುದೆಲ್ಲವ ಬಿಟ್ಟು ಇಲ್ಲದರ ಕಡೆಗೇ ಒಲವು

ಇದೇ ಮುಂದುವರೆದರೆ ಅಸಾಧ್ಯ ಈ ಪಯಣದಿ ಗೆಲುವು

ಆಕಸ್ಮಿಕವಾಗಿ ಎದುರಾಗುವ ವಿಚಿತ್ರ ತಿರುವುಗಳು

ಬಿಡಿಸಲಾರದ ಕಗ್ಗಂಟುಗಳಾಗಿಯೇ ಉಳಿಯುವವು

ಇಷ್ಟೆಲ್ಲಾ ಅರಿವಾಗುವುದರೊಳಗೆ ಕಟ್ಟಬೇಕಾಗುವುದು ಗಂಟುಮೂಟೆ

ಮುಂದೇನು ಉಳಿಯುವುದು? ಬರೀ ಲೊಳಲೊಟ್ಟೆ

No comments: