ಸುಖವ ಕೊಡುವುದ ಮರೆತರೂ ಕಷ್ಟ ಕೊಡುವುದ ಮರೆಯಲಿಲ್ಲ ನಿನ್ನನ್ನೇ ನಂಬಿದ್ದರೂ ನೀ ಉದಾರತೆ ಮೆರೆಯಲಿಲ್ಲ
ಒಂದಾದ ಮೇಲೆ ಒಂದರಂತೆ ಗಾಯದ ಮೇಲೇ ನೀ ಬರೆ ಎಳೆದೆ ಸೋತು ಸುಣ್ಣವಾದ ಮನವನ್ನು ಇನ್ನಷ್ಟು ಪಾತಾಳಕ್ಕೆ ತಳ್ಳಿದೆ
ಇನ್ನು ನಾ ಏನ ಮಾಡಲಿ
ಯಾರ ಕೂಗಿ ಕರೆಯಲಿ
ಇದ್ದ ಅಲ್ಪ ಸ್ವಲ್ಪ ನಂಬಿಕೆಗೂ ಹಾಕಿದೆ ನೀ ಕೊಡಲಿ
ಕರಗದೆ ಹೋದೆಯಲ್ಲ ನೀ ಈ ಕಂಬನಿಗೆ
ಮರುಗದೆ ಉಳಿದೆಯಲ್ಲ ನೀ ನನ್ನ ದುಃಖಕೆ ಆತ್ಮವಿಶ್ವಾಸವನ್ನು ಅಳಿಸಿ ಹಾಕಿದೆಯಲ್ಲ
ಅಂಬಿಗ ನೀನೆಂದು ತಿಳಿದು ಅರಿಯದ ದೋಣಿಗೆ ನಾ ಕಾಲಿಟ್ಟೆ
ಸುಳಿಗೆ ಸಿಕ್ಕಿ ನಾ ಬಳಲಿದಾಗ ತಿಳಿದು ತಿಳಿದು ಸುಮ್ಮನಿರುವೆಯಾ?
ಕತ್ತಲೇ ತುಂಬಿರುವ ಈ ಬಾಳಲಿ ಹೊಸಬೆಳಕ ನೀ ತಾರೆಯ? ಸರಿದಾರಿ ನನಗೆ ತೊರೆಯ? ಹೊಸ ಬದುಕಿಗೆ ನಾಂದಿ ಹಾಡೆಯ?
ಅನಿರೀಕ್ಷಿತ ಮಜಲುಗಳ ಸಂಗಮ ಈ ಬದುಕು ನೀನೇ ನೀಗಿಸಬೇಕು ಎಲ್ಲ ತೊಡುಕು
No comments:
Post a Comment