ಒಂದು ಆತ್ಮೀಯ ನೋಟ ಒಂದು ಆತ್ಮೀಯ ನಗು ಎಂಥವರನ್ನೂ ಸೆಳೆಯಬಲ್ಲದು
ಒಂದು ಆತ್ಮೀಯ ಸ್ಪರ್ಶ ಒಂದು ಆತ್ಮೀಯ ಅಪ್ಪುಗೆ ಮನದ ದುಗುಡ ದೂರ ತಳ್ಳುವುದು
ಒಂದು ಆತ್ಮೀಯ ಪತ್ರ ಒಂದು ಆತ್ಮೀಯ ಮಾತುಕತೆ ಸ್ನೇಹದ ಬುನಾದಿ ಭದ್ರಗೊಳಿಸುವುದು
ಒಂದು ಆತ್ಮೀಯ ಸಂಬಂಧ ಒಂದು ಆತ್ಮೀಯ ಅನುಬಂಧ ಎಲ್ಲ ಮೆಟ್ಟಿ ನಿಲ್ಲುವುದು
ಒಂದು ಆತ್ಮೀಯ ಭಾವನೆ ಒಂದು ಆತ್ಮೀಯ ಕಲ್ಪನೆ ಹೃದಯಾಂತರಾಳದಲಿ ಸ್ಥಾನ ಪಡೆಯುವುದು
No comments:
Post a Comment