ಹದಿಹರೆಯದ ವಯಸ್ಸು ಚಂಚಲ ಮನಸ್ಸು ಸದಾ ಕಾಣುವುದು ಹಗಲುಗನಸು
ಹೃದಯದಿ ನೂರಾರು ಬಯಕೆಗಳು ಏನೇನೋ ಹುಚ್ಚು ಆಸೆಗಳು
ಅನಿಸುವುದು ಈ ಜಗತ್ತು ಎಷ್ಟು ಸುಂದರ ಎಲ್ಲವೂ ನಯನಮನೋಹರ
ಮನವು ರೆಕ್ಕೆ ಬಿಚ್ಚಿ ಆಸೆಯ ಬಾನಲಿ ಹಾರಿ ಕಲ್ಪನೆಯ ಲೋಕದಿ ತಾ ತೇಲುವುದು
ಏಕೋ ನಾಚಿಕೆ ಏನೋ ಕಾತರ ಉಡುಗೆ ತೊಡುಗೆಯಲ್ಲೂ ಏನೋ ವಯ್ಯಾರ
ಒಮ್ಮೆ ಉಕ್ಕಿ ಬಂದರೆ ನಗು ಮತ್ತೊಮ್ಮೆ ಉಕ್ಕಿ ಬರುವುದು ಕಂಬನಿಯ ಧಾರೆ
ಯಾವುದೀ ಮಾಯೆ ಏನಿದರ ಛಾಯೆ ಹದಿಹರೆಯದ ವಯಸಲಿ ಎಲ್ಲವೂ ಸೊಗಸು
No comments:
Post a Comment