ನಿನ್ನ ನೋಡಿದ ತಕ್ಷಣ ಕಣ್ಣುಗಳೆರಡು ಅರಳುವವು ಆನಂದಬಾಷ್ಪ ಜಿನುಗುವುದು ಏಕಿರಬಹುದು?
ನಿನ್ನ ಮಧುರ ದನಿಯಲಿ ನನ್ನ ಹೆಸರು ಮೂಡಿದಾಗ ಕಿವಿಗಳು ನಿಮಿರುವುದು ಏಕಿರಬಹುದು?
ಯಾರೇ ನಿನ್ನ ಹೋಗಳಿದರೂ ಈ ತುಟಿಯಲಿ ತುಂಟ ಕಿರುನಗೆ ಮೂಡುವುದು ಏಕಿರಬಹುದು?
ನಿನ್ನ ಸ್ಪರ್ಶವಾದೊಡನೆ ರೋಮಾಂಚನವಾಗಿ ಮನಸಿಗೆ ಖುಷಿ ನೀಡುವುದು ಏಕಿರಬಹುದು?
ನೀ ಬಳಿ ಇದ್ದರೂ ನಿನ್ನದೇ ಯೋಚನೆ ನೀ ದೂರವಿದ್ದರೂ ನಿನ್ನದೇ ನೆನಪು ಏಕಿರಬಹುದು?
ನೀ ಜೊತೆ ಇದ್ದರೆ ನಿಧಿ ದೊರೆತಂತೆ ನೀ ದೂರವಿರೆ ಏನೋ ಕೈಜಾರಿದಂತೆ ಅನಿಸುವುದು ಏಕಿರಬಹುದು?
ಇವೆಲ್ಲಕ್ಕೂ ಕಾರಣ ಏನಿರಬಹುದು? ಇದೇ ಪ್ರೀತಿ ಇರಬಹುದೇ? ಈ ಮಧುರ ಅನುಭವಗಳೇ ಪ್ರೇಮವಿರಬಹುದೇ? ಏಕಿರಬಾರದು?
No comments:
Post a Comment