Thursday, June 11, 2020

ಸಾಹಸಿ

ಅವಳು ಹುಟ್ಟಿದಾಗ ಸಂತೋಷಪಟ್ಟವರಿಗಿಂತ ಸಂಕಟಪಟ್ಟವರೇ ಹೆಚ್ಚು. ಆದರೆ, ಅವಳ ತಾಯಿ ಅವಳನ್ನು ಯಾರಿಗೂ ಕಮ್ಮಿ ಇಲ್ಲದಂತೆ ಬೆಳೆಸಿದಳು.

ಆ ಊರಿನಲ್ಲಿ ಇತ್ತೀಚೆಗೆ ಸರಣಿ ಸರಗಳ್ಳತನ ಹೆಚ್ಚಾಗಿತ್ತು. ಪೊಲೀಸರು ಎಷ್ಟು ಪ್ರಯತ್ನಪಟ್ಟರೂ ಒಬ್ಬರನ್ನೂ ಹಿಡಿಯಲಾಗಿರಲಿಲ್ಲ. ಅಂದು, ಕಾಲೇಜಿನಿಂದ ಒಬ್ಬಳೇ ವಾಪಾಸಾಗುತ್ತಿದ್ದ ಅವಳ ಕುತ್ತಿಗೆಗೆ ಬೈಕಿನಲ್ಲಿ ಬಂದ ಇಬ್ಬರಲ್ಲಿ ಒಬ್ಬ ಕೈ ಹಾಕಿದ. ಇತ್ತೀಚಿನ ವಿದ್ಯಮಾನಗಳಿಂದ ಬಹಳ ಎಚ್ಚರಿಕೆಯಿಂದ ಇದ್ದ ಅವಳು ಕೂಡಲೇ ಅವನ ಕತ್ತಿನ ಪಟ್ಟಿ ಹಿಡಿದೆಳೆದು ಕೆಳಗೆ ಬೀಳಿಸಿ 'ಕಳ್ಳ ಕಳ್ಳ' ಎಂದು ಕೂಗಲು ಜನರೆಲ್ಲ ಜಮಾಯಿಸಿ ಅವನನ್ನು ಚೆನ್ನಾಗಿ ತದುಕಿ ಪೊಲೀಸರಿಗೆ ಒಪ್ಪಿಸಿದರು. ಮತ್ತೊಬ್ಬ ತಪ್ಪಿಸಿಕೊಂಡರೂ, ಕೆಲವೇ ದಿನಗಳಲ್ಲಿ ಇಡೀ ಗುಂಪನ್ನೇ ಹಿಡಿಯಲಾಯಿತು. ಊರ ಪ್ರಮುಖರಿಂದ ಅವಳಿಗೆ ಸನ್ಮಾನವೂ ಆಯಿತು.

ತಾನು ಬುದ್ಧಿವಂತೆ, ಧೈರ್ಯವಂತೆ ಮಾತ್ರವಲ್ಲದೆ ತೋಳ್ಬಲದಲ್ಲೂ ಯಾರಿಗೂ ಕಮ್ಮಿ ಇಲ್ಲ ಎಂದು ತನ್ನ ತಾಯಿ ಎದುರಿಗೆ ಅವಳು ಖುಷಿಪಟ್ಟಿದ್ದು ಹೀಗೆ.

No comments: