ವರ್ಷದಲ್ಲಿ ೨ ಮುಖ್ಯ ರಜೆಗಾಗಿ ಮಕ್ಕಳು ಕಾತರದಿಂದ ಕಾಯುತ್ತಾರೆ. ಒಂದು ಬೇಸಿಗೆಯ ರಜೆ ಮತ್ತೊಂದು ದಸರಾ ರಜೆ. ಜೂನ್ ತಿಂಗಳಿನಲ್ಲಿ ಶಾಲೆ ಶುರುವಾದ ನಂತರ ಓದು, ಹೋಂವರ್ಕ್, ಹವ್ಯಾಸಿ ತರಗತಿಗಳಲ್ಲಿ ನಿರತರಾಗುವ ಮಕ್ಕಳಿಗೆ ಮಧ್ಯಂತರ ಪರೀಕ್ಷೆ ನಂತರ ಸಿಗುವ ದಸರಾ ರಜೆ ಒಂದು ರೀತಿಯ ರಿಲೀಫ್ ಕೊಡುತ್ತದೆ ಎಂದರೆ ತಪ್ಪಲ್ಲ.
ಪ್ರತಿ ವರ್ಷ ನಾವು ದಸರಾ ರಜೆಯಲ್ಲಿ ನವರಾತ್ರಿ ಆಚರಣೆಗೆ ನಮ್ಮೂರಿಗೆ ೪-೫ ದಿನಗಳಿಗೆ ಹೋಗುವುದಿದೆ. ಆದರೆ ಈ ಸಾರಿ ಪತಿರಾಯರು ೨-೩ ಹೆಚ್ಚುವರಿ ರಜೆ ಹಾಕಿದ್ದರು. ಅದರ ಉದ್ದೇಶ ನವರಾತ್ರಿ ಆಚರಣೆಗೆ ಊರಿಗೆ ಹೋಗುವ ಮುನ್ನ ಬೇರೆ ಎಲ್ಲಾದರೂ ಪ್ರವಾಸ ಹೋಗೋಣ ಎಂಬುದಾಗಿತ್ತು. ಮಕ್ಕಳಿಗಂತೂ ೧೦ ದಿನಗಳ ರಜೆ ಇದ್ದೇ ಇತ್ತು. ರಜೆಯ ಹೋಂವರ್ಕ್ ಕೂಡ ಊರಿಗೆ ಹೋಗುವ ಖುಷಿಯಲ್ಲಿ ಎರಡೇ ದಿನಗಳಲ್ಲಿ ಮುಗಿಸಿದರು. ಎಲ್ಲಿಗೆ ಹೋಗುವುದೆಂದು ಸಮಾಲೋಚಿಸಿ ಕೊನೆಗೆ ನಾವು ಶಿವಮೊಗ್ಗ ಜಿಲ್ಲೆಯ ಸುತ್ತಮುತ್ತ ಇರುವ ಪ್ರವಾಸಿ ತಾಣಗಳಿಗೆ ಹೋಗೋಣವೆಂದು ತೀರ್ಮಾನಿಸಿದೆವು. ನಮ್ಮ ಪ್ರವಾಸದ ಕಿರು ನೋಟ ಇಲ್ಲಿದೆ.
ಪ್ರವಾಸ ಶುರು ಆಗಿದ್ದು ಅಕ್ಟೋಬರ್ ೨ ೨೦೧೯ ರಂದು. ಅಂದು ಬೆಳಿಗ್ಗೆಯೇ ಕಾರಿನಲ್ಲಿ ಬೆಂಗಳೂರಿಂದ ಹೊರಟು ತುಮಕೂರಿನ ಕ್ಯಾತ್ಸಂದ್ರದ ಪ್ರಸಿದ್ಧ ತಟ್ಟೆ ಇಡ್ಲಿ ಹೋಟೆಲ್ ಒಂದರಲ್ಲಿ ಬೆಳಗ್ಗಿನ ಉಪಹಾರ ಮುಗಿಸಿ ಮಧ್ಯಾಹ್ನದ ವೇಳೆಗೆ ಶಿವಮೊಗ್ಗ ಜಿಲ್ಲೆಗೆ ಹೋಗಿ ಅಲ್ಲಿಯೇ ಇರುವ ನನ್ನ ದೊಡ್ಡಪ್ಪನ ಮಗಳ ಮನೆಯಲ್ಲಿ ತಂಗಿದೆವು. ಅಂದು ಸಂಜೆಯೇ ನಮ್ಮ ತಿರುಗಾಟ ಪ್ರಾರಂಭವಾಯಿತು. ಮೊದಲು ನಾವು ಹೋದದ್ದು ಹುಲಿ - ಸಿಂಹ ಧಾಮಕ್ಕೆ.
ತ್ಯಾವರೆಕೊಪ್ಪ ಹುಲಿ - ಸಿಂಹ ಧಾಮ
ತ್ಯಾವರೆಕೊಪ್ಪ ಹುಲಿ - ಸಿಂಹ ಧಾಮ ಶಿವಮೊಗ್ಗದಿಂದ ಸಾಗರಕ್ಕೆ ಹೋಗುವ ದಾರಿಯಲ್ಲಿ ಶಿವಮೊಗ್ಗದಿಂದ ಸುಮಾರು ೧೦ ಕಿ.ಮೀ ದೂರದಲ್ಲಿದೆ. ಇಲ್ಲಿ ಹುಲಿ, ಸಿಂಹ ಹಾಗೂ ಸಾಂಬಾರ್ ಜಿಂಕೆಗಳನ್ನು ಅರಣ್ಯದಲ್ಲೇ ನೋಡಲು ವಿಶೇಷ ವಾಹನದಲ್ಲಿ ಸಫಾರಿ ಕರೆದುಕೊಂಡು ಹೋಗಲಾಗುತ್ತದೆ. ಸಫಾರಿ ಅಲ್ಲದೆ ಪ್ರತ್ಯೇಕ ಪ್ರಾಣಿ ಸಂಗ್ರಹಾಲಯ ಕೂಡ ಇದ್ದು ಅಲ್ಲಿ ಕರಡಿ, ಜಿಂಕೆ, ಚಿರತೆ, ತೋಳ ಇನ್ನೂ ಹಲವಾರು ಪ್ರಾಣಿಗಳು ಹಾಗೂ ಆಸ್ಟ್ರಿಚ್, ಎಮು, ನವಿಲು, ಬಣ್ಣದ ಗಿಳಿಗಳು ಹೀಗೆ ಇನ್ನೂ ಅನೇಕ ರೀತಿಯ ಪಕ್ಷಿಗಳನ್ನು ಕಾಣಬಹುದು. ಸುಮಾರು ೨೦-೨೫ ವಿವಿಧ ಜಾತಿಯ ಪ್ರಾಣಿ ಪಕ್ಷಿಗಳನ್ನು ಕಂಡೆವು. ಇಲ್ಲಿ ಮಕ್ಕಳಿಗೆ ಆಟ ಆಡಲು ಪ್ರತ್ಯೇಕ ಪ್ಲೇ ಪಾರ್ಕ್ ಕೂಡ ಇದ್ದು, ಇಡೀ ಕಾಡಿನ ವೀಕ್ಷಣೆಗಾಗಿ ಒಂದು ವೀಕ್ಷಣಾ ಗೋಪುರ ಕೂಡ ಇದೆ. ಒಟ್ಟಿನಲ್ಲಿ ನಾವು ಅಲ್ಲಿದ್ದ ೨-೩ ಗಂಟೆಗಳೂ ನಮ್ಮ ಮಕ್ಕಳು ಬಹಳ ಖುಷಿ ಪಟ್ಟರು. ವಾಪಾಸು ಹೊರಡಲು ತಯಾರಿರಲಿಲ್ಲ.
ಮರುದಿನ ಅಕ್ಟೋಬರ್ ೩, ಮುಂಜಾನೆ ಬೇಗ ಎದ್ದು ತಯಾರಾಗಿ ಉಪಹಾರ ಮುಗಿಸಿ ನಾವು ಹೊರಟಿದ್ದು ಸಕ್ರೇಬೈಲಿಗೆ.
ಸಕ್ರೇಬೈಲು ಆನೆ ಬಿಡಾರ
ಇದೊಂದು ಆನೆ ತರಬೇತಿ ಶಿಬಿರ. ಇದು ಗಾಜನೂರು ಅಣೆಕಟ್ಟೆಯ ಸಮೀಪದಲ್ಲಿದೆ. ಇಲ್ಲಿ ಆನೆಗಳು ಪ್ರಶಾಂತವಾಗಿ ಹರಿಯುವ ತುಂಗಾನದಿಯಲ್ಲಿ ಆನಂದದಿಂದ ಜಲಕ್ರೀಡೆಯಾಡುತ್ತವೆ. ಮಾವುತರು ತಮ್ಮ ಮೈ ಉಜ್ಜಲು ಅನುವಾಗುವಂತೆ ನೀರಿನಲ್ಲಿ ಮಲಗುತ್ತವೆ. ಆನೆಗಳಿಗೆ ಮಾವುತರು ಸ್ನಾನ ಮಾಡುವುದನ್ನು ನಾವು ನೋಡಿದ್ದಲ್ಲದೆ ನಾವು ಕೂಡ ಅವರು ಕೊಡುವ ಬ್ರಶ್ಶಿನಿಂದ ಆನೆಯ ಮೈ ಉಜ್ಜಿ ಸಂತೋಷಪಟ್ಟೆವು. ಇದಾದ ನಂತರ ಆನೆ ಸವಾರಿ ಮಾಡಿದೆವು. ಅಲ್ಲಿನ ಪ್ರಕೃತಿ ಸೌಂದರ್ಯ ಮನಸ್ಸಿಗೆ ಮುದನೀಡಿತು. ಮಕ್ಕಳಂತೂ ಬಹಳ ಆನಂದಪಟ್ಟರು. ೩ ಗಂಟೆಗಳು ಅಲ್ಲೇ ಕಾಲ ಕಳೆದೆವು. ಹೊರಡುವ ಮುನ್ನ ಅಲ್ಲಿದ್ದ ೧೦-೧೨ ಆನೆಗಳೊಂದಿಗೆ ಫೋಟೋ ತೆಗೆಸಿಕೊಂಡೆವು. ಮಕ್ಕಳೊಂದಿಗೆ ಒಮ್ಮೆ ಭೇಟಿಕೊಡಲೇಬೇಕಾದ ಸ್ಥಳ.
ಮಂಡಗದ್ದೆ ಪಕ್ಷಿಧಾಮ
ಸಕ್ರೇಬೈಲಿನ ನಂತರ ನಾವು ಹೊರಟಿದ್ದು ಅಲ್ಲೇ ಸಮೀಪದ ಮಂಡಗದ್ದೆ ಪಕ್ಷಿಧಾಮಕ್ಕೆ. ಇಲ್ಲಿ ಮಕ್ಕಳಿಗೆ ಸ್ವಲ್ಪ ನಿರಾಸೆಯಾಯಿತು. ಕೇವಲ ಒಂದೇ ಜಾತಿಯ ಕೆಲವೇ ಪಕ್ಷಿಗಳು ನೋಡಲು ಕಾಣಸಿಕ್ಕವು. ತುಪ್ಪಳಹಕ್ಕಿ ಎಂಬ ಈ ಪಕ್ಷಿಯು ನೋಡಲು ಥೇಟ್ ಬೆಳ್ಳಕ್ಕಿಯಂತೆ ಇತ್ತು. ನದಿಯ ಮಧ್ಯೆ ಒಂದು ಸಣ್ಣ ನಡುಗಡ್ಡೆ ಇತ್ತು ಅದರ ಮೇಲಿದ್ದ ಕೆಲವು ಮರಗಳ ಮೇಲೆ ಇವುಗಳು ಕಂಡವು. ನಾವು ದಡದಲ್ಲೇ ನಿಂತು ಕೆಲವು ಫೋಟೋ ಕ್ಲಿಕ್ಕಿಸಿಕೊಂಡು ಮುಂದೆ ಸಾಗಿದ್ದು ಗಾಜನೂರು ಅಣೆಕಟ್ಟಿನ ಕಡೆಗೆ.
ಗಾಜನೂರು ಅಣೆಕಟ್ಟು
ಗಾಜನೂರು ಶಿವಮೊಗ್ಗದಿಂದ ಸುಮಾರು 12 ಕಿ.ಮೀ ದೂರ ಇರುವ ಒಂದು ಸಣ್ಣ ಹಳ್ಳಿ. ಇಲ್ಲಿ ಹರಿಯುವ ತುಂಗಾ ನದಿಗೆ ಅಡ್ಡಲಾಗಿ ಅಣೆಕಟ್ಟನ್ನು ನಿರ್ಮಿಸಲಾಗಿದೆ. ಡ್ಯಾಮ್‌ನ ಕೆಳಗಡೆಯ ಒಂದು ಕಚ್ಚಾ ರಸ್ತೆಯಲ್ಲಿ ಹತ್ತು ನಿಮಿಷ ನಡೆದು ಹೋದರೆ ಅಣೆಕಟ್ಟಿನ ನೀರು ನದಿಯಂತೆ ಹರಿದು ಹೋಗುವ ಜಾಗವಿದೆ. ಅಲ್ಲಿ ನೀರಿನಲ್ಲಿ ಸ್ವಲ್ಪ ಹೊತ್ತು ಆಟ ಆಡಿದೆವು. ಅಂದು ಅಣೆಕಟ್ಟಿನ ಕೇವಲ ಎರಡೇ ಗೇಟನ್ನು ತೆರೆದಿದ್ದರು. ಅಲ್ಲಿನ ವಾತಾವರಣ ಬಹಳ ಶಾಂತವಾಗಿತ್ತು.
ಅಲ್ಲಿಂದ ಸೀದಾ ಮನೆಗೆ ವಾಪಾಸು ಬಂದು ಊಟ, ವಿಶ್ರಾಂತಿ ಮುಗಿಸಿ ಪುನಃ ನಾವು ಹೊರಟಿದ್ದು ಕೂಡಲಿಗೆ.
ಕೂಡಲಿ - ತುಂಗಭದ್ರಾ ಸಂಗಮ ಕ್ಷೇತ್ರ
ಕೂಡಲಿ, ತುಂಗಾ ಹಾಗೂ ಭದ್ರಾ ನದಿಗಳು ಸಂಗಮವಾಗುವ ಪಾವನ ಕ್ಷೇತ್ರ. ಶಿವಮೊಗ್ಗದಿಂದ ಚನ್ನಗಿರಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿ ೧೩ರಲ್ಲಿ ಹೊಳೆಹೊನ್ನೂರಿಂದ ಸ್ವಲ್ಪ ಹಿಂದೆ ಎಡಕ್ಕೆ ತಿರುಗಿ ಎರಡು ಕಿ.ಮೀ. ಸಾಗಿದರೆ ಈ ಸ್ಥಳ ಸಿಗುತ್ತದೆ. ಇಲ್ಲಿ ತುಂಗಾ ಹಾಗೂ ಭದ್ರಾ ನದಿಗಳ ಸಂಗಮವನ್ನು ಸ್ಪಷ್ಟವಾಗಿ ಗುರುತಿಸಬಹುದಾಗಿದೆ. ತುಂಗೆಯು ತುಸು ಹಸಿರಾಗಿಯೂ ಭದ್ರೆಯು ತುಸು ಕೆಂಪಾಗಿಯೂ ಗೋಚರಿಸುವರು. ನಾವು ನದಿಯ ದಡದ ಮೆಟ್ಟಿಲುಗಳ ಮೇಲೆ ಬಹಳ ಹೊತ್ತು ಕುಳಿತು ಅಲ್ಲಿಯ ಪ್ರಕೃತಿ ಸೌಂದರ್ಯ ಆಸ್ವಾದಿಸಿದೆವು. ಅಲ್ಲದೆ ದಡದ ಮೇಲೆ ರಾಮೇಶ್ವರ ದೇವಸ್ಥಾನ ಹಾಗೂ ಶಾರದಾ ಪೀಠವಿದ್ದು ಒಮ್ಮೆ ಭೇಟಿ ಮಾಡಲೇಬೇಕಾದ ಸ್ಥಳ ಎನ್ನಬಹುದು. ಕೂಡಲಿಗೆ ಹೋಗುವ ದಾರಿಯಂತೂ ಬಲು ಸುಂದರ. ಅಕ್ಕಪಕ್ಕಗಳಲ್ಲಿ ಕೇವಲ ಹಸಿರು ಬತ್ತದ ಗದ್ದೆಗಳು, ಅಡಿಕೆ ತೆಂಗು ತೋಟಗಳನ್ನೇ ಕಾಣಬಹುದು.
ಕೂಡಲಿಯಿಂದ ಶಿವಮೊಗ್ಗೆಗೆ ವಾಪಾಸಾದ ನಮನ್ನು ಅಕ್ಕ ಚಾಟ್ಸ್ ತಿನ್ನಲು ಪೇಟೆಗೆ ಕರೆದುಕೊಂಡು ಹೋದಳು. ಸ್ಥಳೀಯ ವ್ಯಂಜನಗಳನ್ನು ಸವಿದು ಮನೆಗೆ ಹಿಂದಿರುಗಿದೆವು.
ಮರುದಿನ ಅಕ್ಟೋಬರ್ ೪ರಂದು ಬೆಳಗ್ಗಿನ ಉಪಹಾರ ಮುಗಿಸಿ ಅಕ್ಕನ ಮನೆಯಿಂದ ಬೀಳ್ಕೊಂಡ ನಾವುಗಳು ಜೋಗದ ಕಡೆಗೆ ಹೊರಟೆವು. ಆದರೆ ಜೋಗಕ್ಕೆ ಹೋಗುವ ದಾರಿಯಲ್ಲಿ ಎರಡು ಸುಂದರ ದೇವಸ್ಥಾನಗಳಿಗೆ ಭೇಟಿ ಕೊಟ್ಟೆವು.
ಇಕ್ಕೇರಿ ಅಘೋರೇಶ್ವರ ದೇವಸ್ಥಾನ
ಇಕ್ಕೇರಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿದೆ. ಇದು ಸಾಗರ ಪಟ್ಟಣದಿಂದ ಆರು ಕಿಲೋಮೀಟರ್ ದೂರದಲ್ಲಿದೆ. ಇಲ್ಲಿನ ಅಘೋರೇಶ್ವರ ದೇವಸ್ಥಾನ ಬಹಳ ಪ್ರಸಿದ್ಧವಾಗಿದೆ. ದೇವಸ್ಥಾನವು ಹೊಯ್ಸಳ-ಕದಂಬ ಶೈಲಿಯಲ್ಲಿದ್ದು ಕೆಳದಿ ಅರಸರ ಆಳ್ವಿಕೆಯ ಕಾಲದಲ್ಲಿ ಇದನ್ನು ಕಟ್ಟಲಾಗಿದೆ. ಈ ದೇವಾಲಯದಲ್ಲಿ ೩೨ ಕೈಗಳ ಅಘೋರೇಶ್ವರನ ಉತ್ಸವ ಮೂರ್ತಿಯಿದೆ ಹಾಗೂ ಗರ್ಭಗೃಹದಲ್ಲಿ ಕಲ್ಲಿನ ಶಿವಲಿಂಗವಿದೆ. ದೇವಸ್ಥಾನದ ಎದುರು ಕಲ್ಲಿನ ಬೃಹತ್ ಬಸವನ ವಿಗ್ರಹ ಬಹಳ ಸುಂದರವಾಗಿದೆ. ಹೊರ ಆವರಣವು ಹಚ್ಚ ಹಸುರಿನ ಹುಲ್ಲು ಹಾಸಿನಿಂದ ಕಂಗೊಳಿಸುತ್ತದೆ. ಇಲ್ಲಿನ ಶಿಲ್ಪಕಲಾ ವೈಭವ ಕಂಡು ನಾವೆಲ್ಲಾ ಮೂಕವಿಸ್ಮಿತರಾದೆವು.
ಕೆಳದಿ ರಾಮೇಶ್ವರ ದೇವಾಲಯ
ಕೆಳದಿಯು ಸಾಗರ ತಾಲೂಕಿನಿಂದ ೮ ಕಿ.ಮೀ. ದೂರದಲ್ಲಿರುವ ಗ್ರಾಮ. ಸ್ವಾತಂತ್ರ್ಯ ಹೋರಾಟಗಾರ್ತಿ ಕೆಳದಿ ಚೆನ್ನಮ್ಮನ ಬಗ್ಗೆ ಯಾರಿಗೆ ತಿಳಿದಿಲ್ಲ? ಕೆಳದಿ ಪ್ರವೇಶಿಸುತ್ತಿದ್ದಂತೆ ಚೆನ್ನಮ್ಮ ಕುದುರೆಯ ಮೇಲೆ ಕುಳಿತಿರುವ ಕಂಚಿನ ವಿಗ್ರಹವೊಂದು ದಾರಿಯಲ್ಲಿ ಕಂಡು ಆಕೆಯ ಊರಿನಲ್ಲಿದ್ದೇವೆ ಎಂದು ರೋಮಾಂಚನವಾಯಿತು. ಇಲ್ಲಿರುವ ರಾಮೇಶ್ವರ ದೇವಸ್ಥಾನ ಪ್ರಸಿದ್ಧವಾಗಿದೆ. ಮೊದಲಿಗೆ ಕಾಣುವುದು ಹೊರ ಆವರಣ. ದೊಡ್ಡ ಕಂಬಗಳು, ಮುಚ್ಚಿಗೆಯ ಛಾವಣಿಯಿದ್ದು ಹಳೇಕಾಲದ ಕೇರಳ ಶೈಲಿಯ ದೊಡ್ಡ ಮನೆಯಂತೆ ಕಾಣುತ್ತದೆ. ಒಳಗೆ ಪ್ರವೇಶಿಸಿದರೆ ಮುಖ್ಯವಾಗಿ ಮಧ್ಯದಲ್ಲಿ ರಾಮೇಶ್ವರ ದೇವಸ್ಥಾನ ಅದರ ಎಡಭಾಗದಲ್ಲಿ ಪಾರ್ವತಿ, ಬಲಭಾಗದಲ್ಲಿ ವೀರಭದ್ರನ ಗುಡಿಗಳಿವೆ. ಇವುಗಳೆಲ್ಲಾ ಹೊಯ್ಸಳ-ದ್ರಾವಿಡ ಶೈಲಿಯಲ್ಲಿ ಬಹಳ ಅಂದವಾಗಿವೆ.
ಭೋಜನದ ನಂತರ ನಮ್ಮ ಮುಂದಿನ ಪಯಣ ಸಾಗಿದ್ದು ಜೋಗದ ಗುಂಡಿಗೆ.
ಜೋಗ ಜಲಪಾತ
ಜೋಗ ಜಲಪಾತದ ಬಗ್ಗೆ ತಿಳಿಯದವರು ಯಾರು. ವಿಶ್ವ ವಿಖ್ಯಾತ ನಮ್ಮ ಕರ್ನಾಟಕದ ಜೋಗ ಜಲಪಾತ. 'ಸಾಯೋದ್ರೊಳಗೆ ಒಮ್ಮೆ ನೋಡು ಜೋಗಾದ್ ಗುಂಡಿ' ಎಂಬ ಡಾ|ರಾಜಕುಮರ್ ಅವರ ಹಾಡು ಅಲ್ಲಿಗೆ ಹೋದಾಗ ನೆನಪಾಗದೇ ಇರದು. ಅಂದು ಜಲಪಾತದಲ್ಲಿ ನೀರು ಕಡಿಮೆ ಇದ್ದರೂ ಕೂಡ ಜೋಗದ ಸೌಂದರ್ಯವನ್ನು ನೋಡುತ್ತಲೇ ನಮ್ಮ ಪ್ರಯಾಣದ ಆಯಾಸವೆಲ್ಲಾ ಮಾಯವಾಯಿತು. ರಾಜ ರಾಣಿ ರೋರರ್ ರಾಕೆಟ್ ಕಂಡು ಮಕ್ಕಳ ಉತ್ಸಾಹ ಇಮ್ಮಡಿಯಾಯಿತು. ಎಷ್ಟೋ ಹೊತ್ತು ಜಲಪಾತದ ಸೊಬಗನ್ನು ಕಣ್ತುಂಬಿಕೊಳ್ಳುವುದರಲ್ಲೇ ಕಳೆದೆವು. ನಂತರ ಅಲ್ಲಿ ಜಲಪಾತದ ಬುಡವರೆಗೂ ಹೋಗಲು ನೂರಾರು ಮೆಟ್ಟಿಲುಗಳಿರುವುದನ್ನು ಕಂಡೆವು. ಕೆಲವು ಪ್ರವಾಸಿಗರ ಜೊತೆಯಲ್ಲಿ ನನ್ನ ಗಂಡ ಹಾಗೂ ದೊಡ್ಡ ಮಗಳು ಅಲ್ಲಿಗೆ ಹೋಗಿಬಂದರು. ಅದಲ್ಲದೆ ೧-೨ ವೀಕ್ಷಣಾ ಗೋಪುರಗಳು ಇದ್ದು ಅಲ್ಲಿಗೆ ಎಲ್ಲಾರೂ ಒಟ್ಟಿಗೆ ಹೋದೆವು. ಅವುಗಳಲ್ಲಿ ೧ ವೀಕ್ಷಣಾ ಗೋಪುರಕ್ಕೆ ಹೋಗಲು ಸುಂದರವಾದ ತೂಗುಸೇತುವೆ ಇದ್ದು ಅದರ ಮೇಲೆ ನಡೆಯಲು ಬಹಳ ಮಜವಾಗಿತ್ತು. ಜೋಗದ ಸೌಂದರ್ಯ ನೋಡುತ್ತಾ ಸಮಯ ಕಳೆದದ್ದೇ ತಿಳಿಯಲಿಲ್ಲ.
ಜೋಗದ ನಂತರ ನಾವು ಹೊರಟಿದ್ದು ನಮ್ಮ ಕೊನೆಯ ಗಮ್ಯಸ್ಥಾನಕ್ಕೆ. ಅದೇ ನನ್ನ ಗಂಡನ ಅಜ್ಜನ ಮನೆಗೆ. ಮಲೆನಾಡಿನ ಆ ಪುಟ್ಟ ಹಳ್ಳಿಯಲ್ಲಿ ನಮ್ಮ ನವರಾತ್ರಿ ಆಚರಣೆ ಬಹಳ ವಿಜೃಂಭಣೆಯಿಂದ ನಡೆಯಿತು.
ಈ ಸಾರಿಯ ದಸರಾ ರಜೆ ನಮ್ಮ ಪಾಲಿಗೆ ಅವಿಸ್ಮರಣೀಯವಾಯಿತು ಎಂದರೆ ಉತ್ಪ್ರೇಕ್ಷೆಯಲ್ಲ. ಕೋಶ ಓದಿ ನೋಡು ದೇಶ ಸುತ್ತಿ ನೋಡು ಎಂಬ ಮಾತು ಎಷ್ಟು ನಿಜ. ಒಂದು ಉತ್ತಮ ಪುಸ್ತಕ ಓದಿದಾಗ ಸಿಗುವ ಜ್ಞಾನ ಹೇಗೆ ಅಮೂಲ್ಯವೋ ಹಾಗೆ ಬೇರೆ ಬೇರೆ ಊರುಗಳನ್ನು ಸುತ್ತಿ, ಅಲ್ಲಿಯ ಕಲೆ, ಸಂಸ್ಕೃತಿ, ಆಚಾರ, ವಿಚಾರ, ಆಹಾರ ಮುಂತಾದವುಗಳ ಬಗ್ಗೆ ಪಡೆಯುವ ಜ್ಞಾನವೂ ಅಮೂಲ್ಯ. ಅದರಲ್ಲೂ ಮಕ್ಕಳೊಡನೆ ವರ್ಷಕ್ಕೆ ಒಮ್ಮೆಯಾದರೂ ಈ ರೀತಿ ಪ್ರವಾಸ ಹೋಗಲೇಬೇಕು. ಈ ವರ್ಷದ ದಸರಾ ರಜೆಯು ಪ್ರತಿ ವರ್ಷದಂತೆ ನವರಾತ್ರಿ ಹಬ್ಬದ ಆಚರಣೆಗೆ ಮಾತ್ರ ಸೀಮಿತವಾಗದೆ, ಪ್ರವಾಸದ ರೂಪ ಪಡೆದಿದ್ದು ನಿಜಕ್ಕೂ ವಿಶೇಷ ಮತ್ತು ಆ ನೆನಪುಗಳು ನಮ್ಮ ಮನದಲ್ಲಿ ಶಾಶ್ವತವಾಗಿ ಅಚ್ಚೊತ್ತಿವೆ.
ಪ್ರತಿ ವರ್ಷ ನಾವು ದಸರಾ ರಜೆಯಲ್ಲಿ ನವರಾತ್ರಿ ಆಚರಣೆಗೆ ನಮ್ಮೂರಿಗೆ ೪-೫ ದಿನಗಳಿಗೆ ಹೋಗುವುದಿದೆ. ಆದರೆ ಈ ಸಾರಿ ಪತಿರಾಯರು ೨-೩ ಹೆಚ್ಚುವರಿ ರಜೆ ಹಾಕಿದ್ದರು. ಅದರ ಉದ್ದೇಶ ನವರಾತ್ರಿ ಆಚರಣೆಗೆ ಊರಿಗೆ ಹೋಗುವ ಮುನ್ನ ಬೇರೆ ಎಲ್ಲಾದರೂ ಪ್ರವಾಸ ಹೋಗೋಣ ಎಂಬುದಾಗಿತ್ತು. ಮಕ್ಕಳಿಗಂತೂ ೧೦ ದಿನಗಳ ರಜೆ ಇದ್ದೇ ಇತ್ತು. ರಜೆಯ ಹೋಂವರ್ಕ್ ಕೂಡ ಊರಿಗೆ ಹೋಗುವ ಖುಷಿಯಲ್ಲಿ ಎರಡೇ ದಿನಗಳಲ್ಲಿ ಮುಗಿಸಿದರು. ಎಲ್ಲಿಗೆ ಹೋಗುವುದೆಂದು ಸಮಾಲೋಚಿಸಿ ಕೊನೆಗೆ ನಾವು ಶಿವಮೊಗ್ಗ ಜಿಲ್ಲೆಯ ಸುತ್ತಮುತ್ತ ಇರುವ ಪ್ರವಾಸಿ ತಾಣಗಳಿಗೆ ಹೋಗೋಣವೆಂದು ತೀರ್ಮಾನಿಸಿದೆವು. ನಮ್ಮ ಪ್ರವಾಸದ ಕಿರು ನೋಟ ಇಲ್ಲಿದೆ.
ಪ್ರವಾಸ ಶುರು ಆಗಿದ್ದು ಅಕ್ಟೋಬರ್ ೨ ೨೦೧೯ ರಂದು. ಅಂದು ಬೆಳಿಗ್ಗೆಯೇ ಕಾರಿನಲ್ಲಿ ಬೆಂಗಳೂರಿಂದ ಹೊರಟು ತುಮಕೂರಿನ ಕ್ಯಾತ್ಸಂದ್ರದ ಪ್ರಸಿದ್ಧ ತಟ್ಟೆ ಇಡ್ಲಿ ಹೋಟೆಲ್ ಒಂದರಲ್ಲಿ ಬೆಳಗ್ಗಿನ ಉಪಹಾರ ಮುಗಿಸಿ ಮಧ್ಯಾಹ್ನದ ವೇಳೆಗೆ ಶಿವಮೊಗ್ಗ ಜಿಲ್ಲೆಗೆ ಹೋಗಿ ಅಲ್ಲಿಯೇ ಇರುವ ನನ್ನ ದೊಡ್ಡಪ್ಪನ ಮಗಳ ಮನೆಯಲ್ಲಿ ತಂಗಿದೆವು. ಅಂದು ಸಂಜೆಯೇ ನಮ್ಮ ತಿರುಗಾಟ ಪ್ರಾರಂಭವಾಯಿತು. ಮೊದಲು ನಾವು ಹೋದದ್ದು ಹುಲಿ - ಸಿಂಹ ಧಾಮಕ್ಕೆ.
ತ್ಯಾವರೆಕೊಪ್ಪ ಹುಲಿ - ಸಿಂಹ ಧಾಮ

ಸಕ್ರೇಬೈಲು ಆನೆ ಬಿಡಾರ

ಮಂಡಗದ್ದೆ ಪಕ್ಷಿಧಾಮ

ಗಾಜನೂರು ಅಣೆಕಟ್ಟು

ಅಲ್ಲಿಂದ ಸೀದಾ ಮನೆಗೆ ವಾಪಾಸು ಬಂದು ಊಟ, ವಿಶ್ರಾಂತಿ ಮುಗಿಸಿ ಪುನಃ ನಾವು ಹೊರಟಿದ್ದು ಕೂಡಲಿಗೆ.
ಕೂಡಲಿ - ತುಂಗಭದ್ರಾ ಸಂಗಮ ಕ್ಷೇತ್ರ

ಕೂಡಲಿ, ತುಂಗಾ ಹಾಗೂ ಭದ್ರಾ ನದಿಗಳು ಸಂಗಮವಾಗುವ ಪಾವನ ಕ್ಷೇತ್ರ. ಶಿವಮೊಗ್ಗದಿಂದ ಚನ್ನಗಿರಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿ ೧೩ರಲ್ಲಿ ಹೊಳೆಹೊನ್ನೂರಿಂದ ಸ್ವಲ್ಪ ಹಿಂದೆ ಎಡಕ್ಕೆ ತಿರುಗಿ ಎರಡು ಕಿ.ಮೀ. ಸಾಗಿದರೆ ಈ ಸ್ಥಳ ಸಿಗುತ್ತದೆ. ಇಲ್ಲಿ ತುಂಗಾ ಹಾಗೂ ಭದ್ರಾ ನದಿಗಳ ಸಂಗಮವನ್ನು ಸ್ಪಷ್ಟವಾಗಿ ಗುರುತಿಸಬಹುದಾಗಿದೆ. ತುಂಗೆಯು ತುಸು ಹಸಿರಾಗಿಯೂ ಭದ್ರೆಯು ತುಸು ಕೆಂಪಾಗಿಯೂ ಗೋಚರಿಸುವರು. ನಾವು ನದಿಯ ದಡದ ಮೆಟ್ಟಿಲುಗಳ ಮೇಲೆ ಬಹಳ ಹೊತ್ತು ಕುಳಿತು ಅಲ್ಲಿಯ ಪ್ರಕೃತಿ ಸೌಂದರ್ಯ ಆಸ್ವಾದಿಸಿದೆವು. ಅಲ್ಲದೆ ದಡದ ಮೇಲೆ ರಾಮೇಶ್ವರ ದೇವಸ್ಥಾನ ಹಾಗೂ ಶಾರದಾ ಪೀಠವಿದ್ದು ಒಮ್ಮೆ ಭೇಟಿ ಮಾಡಲೇಬೇಕಾದ ಸ್ಥಳ ಎನ್ನಬಹುದು. ಕೂಡಲಿಗೆ ಹೋಗುವ ದಾರಿಯಂತೂ ಬಲು ಸುಂದರ. ಅಕ್ಕಪಕ್ಕಗಳಲ್ಲಿ ಕೇವಲ ಹಸಿರು ಬತ್ತದ ಗದ್ದೆಗಳು, ಅಡಿಕೆ ತೆಂಗು ತೋಟಗಳನ್ನೇ ಕಾಣಬಹುದು.
ಕೂಡಲಿಯಿಂದ ಶಿವಮೊಗ್ಗೆಗೆ ವಾಪಾಸಾದ ನಮನ್ನು ಅಕ್ಕ ಚಾಟ್ಸ್ ತಿನ್ನಲು ಪೇಟೆಗೆ ಕರೆದುಕೊಂಡು ಹೋದಳು. ಸ್ಥಳೀಯ ವ್ಯಂಜನಗಳನ್ನು ಸವಿದು ಮನೆಗೆ ಹಿಂದಿರುಗಿದೆವು.
ಮರುದಿನ ಅಕ್ಟೋಬರ್ ೪ರಂದು ಬೆಳಗ್ಗಿನ ಉಪಹಾರ ಮುಗಿಸಿ ಅಕ್ಕನ ಮನೆಯಿಂದ ಬೀಳ್ಕೊಂಡ ನಾವುಗಳು ಜೋಗದ ಕಡೆಗೆ ಹೊರಟೆವು. ಆದರೆ ಜೋಗಕ್ಕೆ ಹೋಗುವ ದಾರಿಯಲ್ಲಿ ಎರಡು ಸುಂದರ ದೇವಸ್ಥಾನಗಳಿಗೆ ಭೇಟಿ ಕೊಟ್ಟೆವು.
ಇಕ್ಕೇರಿ ಅಘೋರೇಶ್ವರ ದೇವಸ್ಥಾನ

ಕೆಳದಿ ರಾಮೇಶ್ವರ ದೇವಾಲಯ

ಭೋಜನದ ನಂತರ ನಮ್ಮ ಮುಂದಿನ ಪಯಣ ಸಾಗಿದ್ದು ಜೋಗದ ಗುಂಡಿಗೆ.
ಜೋಗ ಜಲಪಾತ

ಜೋಗದ ನಂತರ ನಾವು ಹೊರಟಿದ್ದು ನಮ್ಮ ಕೊನೆಯ ಗಮ್ಯಸ್ಥಾನಕ್ಕೆ. ಅದೇ ನನ್ನ ಗಂಡನ ಅಜ್ಜನ ಮನೆಗೆ. ಮಲೆನಾಡಿನ ಆ ಪುಟ್ಟ ಹಳ್ಳಿಯಲ್ಲಿ ನಮ್ಮ ನವರಾತ್ರಿ ಆಚರಣೆ ಬಹಳ ವಿಜೃಂಭಣೆಯಿಂದ ನಡೆಯಿತು.
ಈ ಸಾರಿಯ ದಸರಾ ರಜೆ ನಮ್ಮ ಪಾಲಿಗೆ ಅವಿಸ್ಮರಣೀಯವಾಯಿತು ಎಂದರೆ ಉತ್ಪ್ರೇಕ್ಷೆಯಲ್ಲ. ಕೋಶ ಓದಿ ನೋಡು ದೇಶ ಸುತ್ತಿ ನೋಡು ಎಂಬ ಮಾತು ಎಷ್ಟು ನಿಜ. ಒಂದು ಉತ್ತಮ ಪುಸ್ತಕ ಓದಿದಾಗ ಸಿಗುವ ಜ್ಞಾನ ಹೇಗೆ ಅಮೂಲ್ಯವೋ ಹಾಗೆ ಬೇರೆ ಬೇರೆ ಊರುಗಳನ್ನು ಸುತ್ತಿ, ಅಲ್ಲಿಯ ಕಲೆ, ಸಂಸ್ಕೃತಿ, ಆಚಾರ, ವಿಚಾರ, ಆಹಾರ ಮುಂತಾದವುಗಳ ಬಗ್ಗೆ ಪಡೆಯುವ ಜ್ಞಾನವೂ ಅಮೂಲ್ಯ. ಅದರಲ್ಲೂ ಮಕ್ಕಳೊಡನೆ ವರ್ಷಕ್ಕೆ ಒಮ್ಮೆಯಾದರೂ ಈ ರೀತಿ ಪ್ರವಾಸ ಹೋಗಲೇಬೇಕು. ಈ ವರ್ಷದ ದಸರಾ ರಜೆಯು ಪ್ರತಿ ವರ್ಷದಂತೆ ನವರಾತ್ರಿ ಹಬ್ಬದ ಆಚರಣೆಗೆ ಮಾತ್ರ ಸೀಮಿತವಾಗದೆ, ಪ್ರವಾಸದ ರೂಪ ಪಡೆದಿದ್ದು ನಿಜಕ್ಕೂ ವಿಶೇಷ ಮತ್ತು ಆ ನೆನಪುಗಳು ನಮ್ಮ ಮನದಲ್ಲಿ ಶಾಶ್ವತವಾಗಿ ಅಚ್ಚೊತ್ತಿವೆ.
No comments:
Post a Comment