ಪುಸ್ತಕ್ಕಿಂತ ಒಳ್ಳೆಯ ಸ್ನೇಹಿತ ಬೇಕೇ?
ಮೊಬೈಲ್ ಫೋನ್ಗಳು ಧಾಳಿ ಇಡುವ ಮುನ್ನ ಹೆಚ್ಚಿನವರಿಗೆ ಬಿಡುವಿನ ವೇಳೆಯಲ್ಲಿ ಪುಸ್ತಕವೇ ಮೆಚ್ಚಿನ ಸ್ನೇಹಿತ. ಹೊರಗಡೆ ಧೋ ಎಂದು ಮಳೆ ಸುರಿಯುತ್ತಿದ್ದಾಗ ಬೆಚ್ಚಗೆ ಕಂಬಳಿ ಹೊದ್ದುಕೊಂಡು ಒಂದು ಕೈಯಲ್ಲಿ ಕಾಫಿ ಇನ್ನೊಂದು ಕೈಯಲ್ಲಿ ಪುಸ್ತಕವಿದ್ದರೆ ಆಹಾ ಸ್ವರ್ಗಕ್ಕೆ ಮೂರೇ ಗೇಣು. ರೈಲಿನಲ್ಲಿ ಒಂಟಿಯಾಗಿ ಪ್ರಯಾಣ ಮಾಡುವಾಗಲೂ ಪುಸ್ತಕವೇ ನೆಚ್ಚಿನ ಸಂಗಾತಿ. ಭಾನುವಾರದ ಮಧ್ಯಾಹ್ನಗಳಲ್ಲಿ ಹೊತ್ತು ಹೋಗದಿದ್ದಾಗ ಒಳ್ಳೆಯ ಪುಸ್ತಕ ಓದುವುದೆಂದರೆ ಏನೋ ಒಂದು ಸಂತೋಷ.
ಬಾಲ್ಯದಲ್ಲಿ ಆಟ ಪಾಠಗಳ ನಡುವೆ ಸಮಯ ಸಿಕ್ಕಾಗಲೆಲ್ಲ ಪುಸ್ತಕ ಓದುವುದು ಹವ್ಯಾಸವಾಗಿತ್ತು. ಆಗ ಮೊಬೈಲ್ ಅಥವಾ ಟಿವಿಯ ಆಕರ್ಷಣೆ ಇರಲಿಲ್ಲ. ವಾರಪತ್ರಿಕೆಯಲ್ಲಿ ಬರುತ್ತಿದ್ದ ಸಣ್ಣ ಸಣ್ಣ ಮಕ್ಕಳ ಕಥೆ ಓದುವುದರಿಂದ ಶುರುವಾದ ಗೀಳು ಮುಂದೆ ಲೇಖನಗಳು, ಕಾದಂಬರಿ, ಕಥೆ, ಕವನಗಳು ಓದಲು ಸ್ಫೂರ್ತಿ ನೀಡಿತು. ಓದುವುದರ ಜೊತೆಗೆ ಬರೆಯುವ ಹವ್ಯಾಸಕ್ಕೂ ಕಾರಣವಾಯಿತು. ಅಜ್ಜಿಯಿಂದ ಅಮ್ಮನಿಗೆ ಹಾಗೂ ಅಮ್ಮನಿಂದ ನನಗೆ ಬಳುವಳಿಯಾಗಿ ಬಂದ ಈ ಓದುವ ಹವ್ಯಾಸ ನನ್ನ ಮಗಳಿಗೂ ಬರಬೇಕೆಂದು ನನ್ನ ಆಸೆಯಾಗಿತ್ತು. ಈಗಿನ ಕಾಲದಲ್ಲಿ ಮಕ್ಕಳಿಗೆ ಓದುವ ಹವ್ಯಾಸ ಬೆಳೆಸುವುದು ಖಂಡಿತ ಸುಲಭವಲ್ಲ ಆದ್ರೆ ಅದು ಅಸಾಧ್ಯವೂ ಅಲ್ಲ.
ನನ್ನ ಮಗಳಿಗೆ ೨ ವರ್ಷ ತುಂಬುತ್ತಿದ್ದಂತೆ ಪುಸ್ತಕಗಳನ್ನು ತರಲು ಶುರು ಮಾಡಿದೆವು. ಚಿತ್ರಗಳಿರುವ ಪುಸ್ತದಿಂದ ಶುರುವಾದ ಈ ಪ್ರಯಾಣ ನಿಧಾನವಾಗಿ ಬಣ್ಣ ತುಂಬುವ ಪುಸ್ತಕಗಳು, ಅಕ್ಷರಮಾಲೆ ಹಾಗೂ ಸಣ್ಣ ಪದಗಳ ಕಲಿಯುವ ಪುಸ್ತಕಗಳು, ವಿವಿಧ ಚಟುವಟಿಕೆ ಪುಸ್ತಕಗಳು, ಹೀಗೇ ಮುಂದುವರೆಯಿತು. ಅವಳು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಲಿಯುತ್ತಿರುವುದರಿಂದ ಮೊದಲು ಆಂಗ್ಲ ಪುಸ್ತಕಗಳನ್ನು , ನಂತರ ಕನ್ನಡ ಪುಸ್ತಕಗಳನ್ನು ತರಲು ಶುರು ಮಾಡಿದೆವು. ಈಗ ಅವಳಿಗೆ ೭ ವರ್ಷ, ೨ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಅವಳಿಗಾಗಿ ೧ ಆಂಗ್ಲ ೧ ಕನ್ನಡ ಭಾಷೆಯ ವಾರಪತ್ರಿಕೆ ತರಿಸುತ್ತಿದ್ದೇವೆ. ಇಂಗ್ಲಿಷ್ ಪುಸ್ತಕ ಸರಾಗವಾಗಿ ಅವಳೇ ಓದುತ್ತಾಳೆ, ಕನ್ನಡ ಅವಳ ಪಕ್ಕದಲ್ಲೇ ಕೂತು ನಾನು ಓದಿಸುತ್ತೇನೆ. ಪ್ರತಿ ವಾರ ಈ ೨ ವಾರಪತ್ರಿಕೆಗಾಗಿ ಅವಳು ಕಾತರದಿಂದ ಕಾಯುತ್ತಾಳೆ. ಸಮಯ ಸಿಕ್ಕಾಗಲೆಲ್ಲ ಓದುತ್ತಾಳೆ. ಅಲ್ಲದೆ ಎರಡೂ ಭಾಷೆಯ ಕಥೆ ಪುಸ್ತಕಗಳನ್ನು ಓದುತ್ತಾಳೆ. ಓದುವುದು ಅವಳ ನೆಚ್ಚಿನ ಹವ್ಯಾಸವಾಗಿದೆ. ಮೊಬೈಲ್ ಹಾಗೂ ಟಿವಿಯಿಂದ ಸಂಪೂರ್ಣ ದೂರವಾಗಿದ್ದಾಳೆ. ನನ್ನ ಶ್ರಮ ಸಾರ್ಥಕವಾಗಿದೆ.
ನಿಮ್ಮ ಮಗುವಿನಲ್ಲಿ ಓದುವ ಹವ್ಯಾಸ ಬೆಳೆಯಲು ಈ ರೀತಿ ಮಾಡಿ
ಕೇವಲ ಆಂಗ್ಲ ಭಾಷೆಯ ಸಾಹಿತ್ಯವಲ್ಲದೆ ಮಾತೃಭಾಷೆಯಾದ ಕನ್ನಡದ ಸಾಹಿತ್ಯ ಓದಲು ಹುರಿದುಂಬಿಸಿ. ಏಕೆಂದರೆ ಕೇವಲ ಆಂಗ್ಲ ಸಾಹಿತ್ಯ ಮಾತ್ರ ಓದುವುದು ಈಗಿನ ಹೆಚ್ಚಿನ ಯುವಜನರಲ್ಲಿ ಕಂಡುಬರುತ್ತಿದೆ. ಕನ್ನಡ ಪುಸ್ತಕ ಓದುವುದು ಅವಮಾನ ಎನ್ನುವಂತಾಗಿದೆ. ಎಷ್ಟೋ ಮಂದಿ ಕನ್ನಡಿಗರು ಯಾವುದೋ ಪ್ರಖ್ಯಾತ ಕನ್ನಡ ಪುಸ್ತಕದ ಆಂಗ್ಲ ಅನುವಾದ ಓದುವುದನ್ನು ಕಂಡಿದ್ದೇನೆ.
ದಯವಿಟ್ಟು, ನಿಮ್ಮ ಮಕ್ಕಳಿಗೆ ಕನ್ನಡ ಸಾಹಿತ್ಯ ಎಷ್ಟು ಶ್ರೀಮಂತವಾಗಿದೆ ಎಂದು ಮನದಟ್ಟು ಮಾಡಿ. ಆಂಗ್ಲ ಭಾಷೆಯ ಪುಸ್ತಕಗಳ ಜೊತೆಗೆ ಕನ್ನಡ ಪುಸ್ತಕಗಳನ್ನು ಕೊಂಡು ಓದಲು ಹುರಿದುಂಬಿಸಿ.

- ಸಣ್ಣ ವಯಸ್ಸಿನಲ್ಲಿಯೇ (೨-೩ ವರ್ಷ) ಆಯಾ ವಯಸ್ಸಿಗೆ ಹೊಂದುವಂತಹ ಪುಸ್ತಕಗಳನ್ನು ತರಲು ಶುರು ಮಾಡಿ.
- ಹುಟ್ಟಿದ ಹಬ್ಬದಂತಹ ವಿಶೇಷ ಸಂಧರ್ಭಗಳಲ್ಲಿ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಿ.
- ಆಗಾಗ ಹತ್ತಿರದ ಗ್ರಂಥಾಲಯಕ್ಕೆ ಕರೆದೊಯ್ಯಿರಿ, ಅಲ್ಲಿ ವಿವಿಧ ಮಕ್ಕಳ ಪುಸ್ತಕಗಳ ಪರಿಚಯ ಮಾಡಿಸಿ.
- ಬಿಡುವಿದ್ದಾಗಲೆಲ್ಲ ನೀವೂ ಪುಸ್ತಕಗಳನ್ನು ಓದಿ ಏಕೆಂದರೆ ದೊಡ್ಡವರನ್ನು ನೋಡಿಯೇ ಮಕ್ಕಳು ಅನುಕರಣೆ ಮಾಡುತ್ತಾರೆ.
- ಪುಸ್ತಕಗಳ ಮಹತ್ವ, ಓದುವುದರಿಂದ ಸಿಗುವ ಲಾಭಗಳನ್ನು ಅವರಿಗೆ ಕ್ರಮೇಣ ಮನದಟ್ಟು ಮಾಡಿ.
- ಮಕ್ಕಳಿಗಾಗಿ ಕನಿಷ್ಠ ಒಂದಾದರೂ ವಾರಪತ್ರಿಕೆ, ಮಾಸಪತ್ರಿಕೆ ಅಥವಾ ದಿನಪತ್ರಿಕೆ ತರಿಸಿ.
ಕೇವಲ ಆಂಗ್ಲ ಭಾಷೆಯ ಸಾಹಿತ್ಯವಲ್ಲದೆ ಮಾತೃಭಾಷೆಯಾದ ಕನ್ನಡದ ಸಾಹಿತ್ಯ ಓದಲು ಹುರಿದುಂಬಿಸಿ. ಏಕೆಂದರೆ ಕೇವಲ ಆಂಗ್ಲ ಸಾಹಿತ್ಯ ಮಾತ್ರ ಓದುವುದು ಈಗಿನ ಹೆಚ್ಚಿನ ಯುವಜನರಲ್ಲಿ ಕಂಡುಬರುತ್ತಿದೆ. ಕನ್ನಡ ಪುಸ್ತಕ ಓದುವುದು ಅವಮಾನ ಎನ್ನುವಂತಾಗಿದೆ. ಎಷ್ಟೋ ಮಂದಿ ಕನ್ನಡಿಗರು ಯಾವುದೋ ಪ್ರಖ್ಯಾತ ಕನ್ನಡ ಪುಸ್ತಕದ ಆಂಗ್ಲ ಅನುವಾದ ಓದುವುದನ್ನು ಕಂಡಿದ್ದೇನೆ.
ದಯವಿಟ್ಟು, ನಿಮ್ಮ ಮಕ್ಕಳಿಗೆ ಕನ್ನಡ ಸಾಹಿತ್ಯ ಎಷ್ಟು ಶ್ರೀಮಂತವಾಗಿದೆ ಎಂದು ಮನದಟ್ಟು ಮಾಡಿ. ಆಂಗ್ಲ ಭಾಷೆಯ ಪುಸ್ತಕಗಳ ಜೊತೆಗೆ ಕನ್ನಡ ಪುಸ್ತಕಗಳನ್ನು ಕೊಂಡು ಓದಲು ಹುರಿದುಂಬಿಸಿ.
No comments:
Post a Comment