ನಾವು ಕಸಿನ್ಸ್ ಎಲ್ಲ ಪ್ರತಿ ವರ್ಷದ ಬೇಸಿಗೆಯಂತೆ ಅಜ್ಜಿ ಮನೆಯಲ್ಲಿ ಸೇರಿದ್ದೆವು. ಅಂದು ೧ ಏಪ್ರಿಲ್ ೧೯೯೭. ಎಲ್ಲರನ್ನೂ ಏಪ್ರಿಲ್ ಫೂಲ್ ಮಾಡಬೇಕೆಂದು ನಾನು ನಿರ್ಧರಿಸಿದ್ದೆ. ಹಿರಿಯರು, ಮಕ್ಕಳು ಯಾರನ್ನೂ ಬಿಡಲಿಲ್ಲ. ನಿನ್ನ ಬಟ್ಟೆ ಹರಿದಿದೆ, ತಲೆಯ ಮೇಲೆ ಏನೋ ಇದೆ, ಬೆನ್ನ ಮೇಲೆ ಏನೋ ಇದೆ, ಯಾರೋ ಕರೆಯುತ್ತಿದ್ದಾರೆ, ಹೀಗೆ ಏನೇನೋ ಹೇಳಿ ಫೂಲ್ ಮಾಡಿ ಮಜಾ ತೆಗೆದುಕೊಂಡೆ. ಅಕ್ಕ ಪಕ್ಕದ ಮನೆಯ ಸ್ನೇಹಿತರನ್ನೂ ಬಿಡಲಿಲ್ಲ. ನನ್ನನ್ನು ಫೂಲ್ ಮಾಡಲು ಅವರಾರಿಗೂ ಆಗಲಿಲ್ಲ. ನನ್ನ ಜಂಬ ಇನ್ನೂ ಹೆಚ್ಚಾಯಿತು.
ರಾತ್ರಿ ನಾವೆಲ್ಲ ಜಗುಲಿಯಲ್ಲಿ ಕುಳಿತು ಇಸ್ಪೀಟಿನಲ್ಲಿ ಸೆಟ್ ಆಟ ಆಡುತ್ತಿದ್ದೆವು. ಎದುರಿನ ಜಗುಲಿಯಲ್ಲಿ ಸುಮ್ಮನೆ ಕೂತಿದ್ದ ಅತ್ತೆ ಮಗ 'ಕೆಳಗೆ ಬಿದ್ದಿರೋ ಇಸ್ಪೀಟ್ ಎಲೆ ನಿಂದಾ?' ಎಂದ. ಆಟದ ಗುಂಗಿನಲ್ಲಿದ್ದ ನಾನು ಕೆಳಗೆ ಬಗ್ಗಿದೆ. ಕೂಡಲೇ 'ಏಪ್ರಿಲ್ ಫೂಲ್' ಎಂದು ಕಿರುಚಿದ. 'ಬೆಳಗ್ಗಿನಿಂದ ಎಲ್ಲರನ್ನೂ ಫೂಲ್ ಮಾಡಿ ಮೆರೀತಿದ್ದೆ ಅಲ್ವಾ' ಎಂದು ವಿಜಯದ ನಗೆ ಬೀರಿದ. ನಾನು ಪೆಚ್ಚಾಗಿ ನಕ್ಕೆ.

No comments:
Post a Comment