ಗೆಳತಿ, ನಾನಿಲ್ಲೋ ಇದ್ದೆ ನೀನಿಲ್ಲೋ ಇದ್ದೆ ಒಂದಾದೆವು ನಾವಿಬ್ಬರು ಗೆಳೆತನವೆಂಬ ನಾಲ್ಕಕ್ಷರದಿಂದ ಆ ದೇವರ ದಯೆಯಿಂದ
ಎಷ್ಟು ಸೊಗಸು ಈ ಗೆಳೆತನ ಇದರ ಮುಂದಿಲ್ಲ ಯಾವ ಸಿರಿತನ ಉಳಿಸಿಕೊಂಡಿದೆ ಇದು ಇಂದಿಗೂ ತನ್ನತನ
ವರ್ಷಗಳು ದಿನಗಳಂತೆ ದಿನಗಳು ಕ್ಷಣಗಳಂತೆ ಕಳೆದೇ ಹೋಯಿತು ನಾವಿಬ್ಬರು ದೂರಾಗುವ ಘಳಿಗೆ ಹತ್ತಿರ ಬಂದಿತಲ್ಲ
ಮರೆಯಲಾರೆ ನಾನೆಂದಿಗೂ ಆ ಮಧುರ ಕ್ಷಣಗಳ ಒಂದೇ ತಟ್ಟೆಯಲ್ಲಿ ಊಟ ತರಗತಿಯಲ್ಲಿ ಕೇಳದೆ ಪಾಠ ನಾವಾಡುತ್ತಿದ್ದ ಚೆಲ್ಲಾಟ ನಾ ಹೇಗೆ ಮರೆಯಲಿ
ಕ್ಯಾಂಪಸ್ಸಿನಲ್ಲಿ ನಮ್ಮ ತುಂಟಾಟ ಹಾಸ್ಟೆಲ್ಲಿನಲ್ಲಿ ನಮ್ಮ ಹುಡುಗಾಟ ಪೇಟೆಯಲ್ಲಿ ನಮ್ಮ ಸುತ್ತಾಟ ಇನ್ನು ಕೇವಲ ನೆನಪು ಮಾತ್ರ
ಹಂಚಿಕೊಂಡಿದ್ದೆವು ನಾವು ನಮ್ಮ ದುಃಖ ದುಮ್ಮಾನ ಒಬ್ಬರಿಗೊಬ್ಬರು ನೀಡುತ್ತಿದ್ದೆವು ಸಾಂತ್ವನ ಆಗ ಹಗುರಾಗುತ್ತಿದ್ದ ಮನ ಎಲ್ಲ ಇನ್ನೆಲ್ಲಿ?
ಗೆಳತಿ, ನಮ್ಮ ಗೆಳೆತನ ಎಂದೆಂದೂ ಚಿರವಾಗಿರಲಿ ನಮ್ಮ ಮುಂದಿನ ಪೀಳಿಘೆಗೆ ಮಾದರಿಯಾಗಲಿ ನಾವಿಬ್ಬರೂ ದೂರಾದರೂ ಒಬ್ಬರ ಮನದಲ್ಲಿ ಒಬ್ಬರಿರಲಿ ಈ ಗೆಳೆತನ ಶಾಶ್ವತವಾಗಲಿ
1 comment:
Last poem during engineering course days. Appreciated by all friends from college and hostel and it was also dedicated to them
Post a Comment