ಮಳೆಯ ಹನಿ ಮೊದಲ ಹನಿ ತೊದಲ ಹನಿ ಬಿತ್ತು ಬಾನಿಂದ ಧರೆಗೆ ಮುಂಗಾರಿನ ಮಿಂಚಿನೊಂದಿಗೆ ಆಯಿತೆಲ್ಲೆಲ್ಲೂ ತಂಪು ಪಸರಿಸಿತು ಒದ್ದೆಮಣ್ಣ ಕಂಪು
ಮಳೆಯ ಹನಿ ಎರಡನೆಯ ಹನಿ ಚಿಗುರಿಸಿತು ಎಲ್ಲ ಕಡೆ ಹಚ್ಚ ಹಸಿರು ಅದುವೇ ತಾನೇ ಭೂತಾಯಿಯ ಉಸಿರು
ಮಳೆಯ ಹನಿ ಮೂರನೆಯ ಹನಿ ತುಂಬಿಸಿತು ಹಳ್ಳ ಕೊಳ್ಳ ತೊರೆ ಕೆರೆ ನದಿ ಶರಧಿಗಳ ಧುಮ್ಮಿಕ್ಕುವ ಸುಂದರ ಜಲಪಾತಗಳ
ಹನಿ ಹನಿಗೂಡಿ ಸುರಿಯಿತು ಧಾರಾಕಾರವಾಗಿ ತಂದಿತೆಲ್ಲೆಲ್ಲೂ ಸಮೃದ್ಧಿ ಸುಖ ಶಾಂತಿ ಬಾಳಿಗೆ ನೆಮ್ಮದಿ
No comments:
Post a Comment