ನಿಧಾನಿಸು ಮನವೇ ನಿಧಾನಿಸು ಓಡದಿರು ಶರವೇಗದಿ ಎಡವಿ ಬೀಳದಿರು ಎಡರು ತೊಡರುಗಳ ದಾರಿಯಿದು ನೀ ನಿಧಾನಿಸು
ಕಟ್ಟದಿರು ಕನಸುಗಳ ಆಶಾಗೋಪುರ ಬಹಳ ಎತ್ತರಕ್ಕೆ ಬಿರುಗಾಳಿ ಬೀಸುವ ಕಾಲವಿದು ಉರುಳಿ ಹೋದೀತು ಒಂದೇ ಕ್ಷಣದಿ ನೀ ನಿಧಾನಿಸು
ಹಕ್ಕಿಯಂತೆ ಬಹಳ ಎತ್ತರ ಹಾರದಿರು ಹುಚ್ಚು ಕಲ್ಪನೆಗಳೊಂದಿಗೆ ರೆಕ್ಕೆ ಮುರಿದೀತು ಕೆಳಗೆ ಪಾತಾಳವಿರುವಾಗ ಸ್ವಲ್ಪ ನಿಧಾನಿಸು
No comments:
Post a Comment