Friday, October 9, 2020

ನೆನಪಿನರಮನೆ

ಹೊಕ್ಕೆ ನಾ ನೆನಪುಗಳ ಅರೆಮನೆಯ ಅಲ್ಲಿದ್ದದ್ದು ಎರಡೇ ಕೋಣೆಗಳು

ಮೊದಲ ಕೋಣೆಯಲಿ ಹಾಲ ಬೆಳದಿಂಗಳು ಸಂತಸದ ನಗೆಹೊನಲು ಮನಃಪಟಲದಲ್ಲಿ ಎಳೆ ಎಳೆಯಾಗಿ ಬಿಡಿಸಿಕೊಂಡಿತು ಸಿಹಿ ನೆನಪುಗಳು ಮೆಲುಕು ಹಾಕಿದಷ್ಟೂ ಸವಿ ನೆನಪುಗಳು ಹೃದಯ ಅರಳಿಸಿ ತಂಗಾಳಿ ಮೈಸೋಕಿಸಿ ತಂಪೆರೆಯಿತು

ಎರಡನೆಯ ಕೋಣೆಯಲಿ ಗಾಢಾಂಧಕಾರ ಅವಮಾನ ನೋವು ನಿರಾಸೆ ಜಿಗುಪ್ಸೆ ದುಃಖದ ಚೀರಾಟ ಕಹಿನೆನಪುಗಳು ಬೆಂಕಿಗೆ ಮೈಯೊಡ್ಡಿದಂಥ ಅನುಭವ ಹೃದಯ ಭಾರ 

ಆದರೆ, ಕಹಿನೆನಪುಗಳು ಕರಿನೆರಳಾಗಿ ಬೆಂಬಿಡದೆ ಕಾಡಿದರೂ ಸಿಹಿನೆನಪುಗಳ ತಂಗಾಳಿ ಆಗಾಗ ತಂಪಿತ್ತಿದೆ

ನೆನಪುಗಳಿರದ ಜೀವನವೆಲ್ಲಿ ನೆನಪೇ ಶಾಶ್ವತ ಕೊನೆಗಿಲ್ಲಿ

No comments: