Tuesday, August 11, 2020

ಚಡಪಡಿಕೆ

 ಮನವು ನೂರು ಮಾತನಾಡಲು ಇಚ್ಚಿಸಿದೆ

ಆದರಿಲ್ಲಿ ಮೌನ ಸಾಮ್ರಾಜ್ಯ ನೆಲೆಸಿದೆ

ನಿನ್ನೆವರೆಗೂ ನೀನೆಲ್ಲೋ ಇದ್ದೆ

ಇಂದು ನನ್ನ ಹೃದಯ ಕದ್ದೆ

ನನ್ನೊಳಗೆ ನಾ ಇರದಾದೆ

ನೀ ನನ್ನೊಳಗೊಂದಾದೆ

ಸದಾ ಚಿಂತೆಯಾಗಿದೆ ನಿನ್ನದೇ

ಮನಕೆ ವಿಶ್ರಾಂತಿ ಇಲ್ಲದೆ

ಹಳೆಯ ನೆನಪುಗಳು ಕಾಡಿವೆ ನಿಲ್ಲದೆ

ಈ ದೂರ ಮನಸಿಗೆ ಸಲ್ಲದೆ

ಕಲ್ಲಾಗಿಹೆನು ನಾ ದಾರಿ ಕಾಣದೆ

ಮುಂದೇನು ಮಾಡಲಿ? ಏನೂ ತೋಚದೆ!

ತಡಮಾಡದೆ ಬಾ ಗೆಳೆಯ

ಈ ಜೀವನ ನಮಗಾಗಿ ಕಾದಿದೆ

ನೀ ಎನ್ನ ಜೊತೆಯಿರಲು ಗೆಲುವು

ಎಂದಿಗೂ ನಮ್ಮದೇ!

No comments: