ನಿನ್ನ ಮಾತುಗಳಿಂದ ನಾ ಬಹಳ ನೊಂದೆ
ಮಾತನಾಡಲಾರೆ ನಿನ್ನ ಬಳಿ ಇನ್ನು ಮುಂದೆ
ಇಂದು ನಾ ಅಶ್ರುಧಾರೆಯಲ್ಲಿ ಮಿಂದೆ
ನಮ್ಮಿಬ್ಬರ ಸ್ನೇಹ ಬಹಳ ಗಟ್ಟಿಯೆಂದು ನಂಬಿದ್ದೆ
ಹಾಗೆಯೇ ಇದ್ದೆವು ನಾವು ಹಿಂದೆ
ಆದರೆ, ನೀ ಇಂದು ಮಾಡಿದೆ ನಿಂದೆ
ನನ್ನ ಭಾವಣೆಗಳನ್ನೆಲ್ಲ ಒಮ್ಮೆಲೇ ಕೊಂದೆ
ನಿನ್ನ ಬಗ್ಗೆ ನನಗೆ ದ್ವೇಷವ ತಂದೆ
ನೀ ನನ್ನ ಬಾಳಿನ ಮುಳ್ಳಾಗಿ ಬಂದೆ
ಕೊನೆಗೆ ನಾ ನಿನ್ನಿಂದ ದೂರ ಸರಿದೆ
ಮತ್ತೆ ಒಬ್ಬಂಟಿಗಳು ನಾನಾದೆ
ಬದುಕಿನಲ್ಲಿ ನನಗೆ ಇನ್ನೇನು ಉಳಿದಿದೆ
No comments:
Post a Comment