Thursday, August 27, 2020

ಹಾಸ್ಟೆಲ್ ಜೀವನ

 ಸಾಕಾಗಿದೆ ಈ ಹಾಸ್ಟೆಲ್ ಜೀವನ

ಇಲ್ಲಿದ್ದು ಬಹಳ ನೊಂದಿದೆ ಮನ

ಸರಿಯಿಲ್ಲ ಇಲ್ಲಿರುವ ಜನ

ಇವರೊಂದಿಗೆ ಇರುವುದೇ ನನಗೆ ಅವಮಾನ

ಇಲ್ಲ ನನಗಿಲ್ಲಿ ಯಾವ ಸ್ಥಾನಮಾನ

ಸದಾ ನೆನಪಾಗುವುದು ಮನೆಯ ಭೋಜನ

ಅಪ್ಪ ಅಮ್ಮ ತಮ್ಮನ ಪ್ರೀತಿಯ ಸಿಂಚನ

ಮನೆಯಲಿಲ್ಲ ನನಗೆ ಯಾವ ಬಿಗುಮಾನ

ಆದರಿಲ್ಲಿ ಆಗುತ್ತಿದೆ ತಾಳ್ಮೆಯ ಪತನ

ಆಪ್ತ ಗೆಳತಿಯಿಲ್ಲದೆ ಒಂಟಿ ಪಯಣ

ಅಲ್ಲದೆ ಇಲ್ಲಿರುವುದು ತೊಂದರೆಗಳಿಗೆ ಆಹ್ವಾನ

ಇದಕ್ಕಿಂತ ವಾಸಿ ಘೋರ ಕಾನನ

No comments: