Thursday, July 23, 2020

ಕೋರಿಕೆ

ನನ್ನ ಕವನಗಳಿಗೆ ಸ್ಫೂರ್ತಿ ನೀನು
ಈ ಬದುಕಿಗೆ ಸ್ಪೂರ್ತಿಯಾಗಲಾರೆಯಾ?

ಈ ಕತ್ತಲೆಯ ಹೊಡೆದೋಡಿಸಿದವ ನೀನು
ನನ್ನ ಬಾಳಿಗೆ ಬೆಳಕಾಗಲಾರೆಯಾ?

ನನ್ನ ಮೌನಕ್ಕೆ ಕಾರಣ ನೀನು
ಈ ನಿಶ್ಶಬ್ದವ ದೂರವಾಗಿಸಲಾರೆಯಾ?

ಪ್ರತಿ ಸಂತಸಕ್ಕೂ ಮೂಲ ನೀನು
ಅದನ್ನು ಶಾಶ್ವತಗೊಳಿಸಲಾರೆಯಾ?

ಈ ಹೃದಯದ ಮಿಡಿತ ನೀನು
ಅದರ ತುಡಿತವ ತಿಳಿಯಲಾರೆಯಾ?

ನನ್ನ ಉಸಿರಿನ ಹೆಸರು ನೀನು
ಇದು ಪ್ರೀತಿಯೆಂದು ಅರಿಯಲಾರೆಯಾ?

ನನ್ನ ಕನಸಿನ ಇನಿಯ ನೀನು
ಮನದ ಆಸೆಯ ನನಸಾಗಿಸಲಾರೆಯಾ?

No comments: