Thursday, August 27, 2020

ಕಂಬನಿ

 ಕಣ್ಣಂಚಿನಲ್ಲಿ ಇಣುಕುತ್ತಿದ್ದ ಕಂಬನಿ ಹೇಳುತ್ತಿದ್ದವು ನೂರಾರು ಕಥೆಗಳು ಬದುಕಿನಲ್ಲಾದ ವ್ಯಥೆಗಳು ಬತ್ತಿಹೋದ ನೂರಾರು ಆಸೆಗಳು

ಮನಃಪಟಲದಿಂದ ಮರೆಯಾದವು ಕಂಡಂತಹ ಎಲ್ಲ ಕನಸುಗಳು ತೇಲಿಹೋದವು ಬಯಕೆಗಳು ಬೀಸಿದ ಬಿರುಗಾಳಿಯಲಿ

ಮರೀಚಿಕೆಯ ಬೆನ್ನ ಹಿಡಿದು ಹೋದಷ್ಟೂ ಹೆಚ್ಚು ನೋವುಗಳು ಮಾಸದೇ ಹಾಗೆಯೇ ಉಳಿದಿದೆ ಮನಸಿನ ಮೇಲಾದ ಗಾಯಗಳು

ಕೊನೆಯೆಂತು ಈ ದುಃಖಕೆ

ವಿಸ್ತಾರವಾಗುತ್ತಿದೆ ಇದರ ಪರಿಧಿ

ನಾ ಅರಿಯದೇ ಇರುವೆನೇ? ಇವೆಲ್ಲ ಕಾಲನ ಆಟಗಳು

No comments: