ಬಹಳ ನಿಗೂಢ ಜಗತ್ತು ಈ ಕನಸುಗಳ ಲೋಕ
ಭೂತ ಭವಿಷ್ಯ ವರ್ತಮಾನಗಳೆಲ್ಲವೂ ಇಲ್ಲಿ ಸಮಪಾಕ
ಒಂದಕ್ಕೊಂದು ಸಂಬಂಧವಿರದ ವಿಚಿತ್ರ ಘಟನೆಗಳು
ಆದರೆ, ವಾಸ್ತವಕ್ಕೂ ಇದಕ್ಕೂ ಕೆಲವು ಹೋಲಿಕೆಗಳು
ಮುಂಜಾನೆಯಲ್ಲಿ ಬಿದ್ದರಂತೂ ಇಂತಹ ಕನಸುಗಳು
ಮೈ ನಡುಗುವುದು ನಿಜವಾಗುವುದೆಂದು ಆ ಸತ್ಯಗಳು
ಕೆಲವೊಮ್ಮೆ ತೋರಬಹುದಿವು ನಮಗೆ ಹೊಸಲೋಕ
ಮತ್ತೊಮ್ಮೆ ಅನ್ನಿಸುವುದು ಇವೆಲ್ಲವೂ ಅತಿರೇಕ
No comments:
Post a Comment