Monday, November 26, 2012

सेंचुरी


आज सचिन का शर्ट है हरा
इसलिये उसने सेंचुरी मारा

Wednesday, August 29, 2012

ಪ್ರೀತಿ

ಪ್ರೀತಿ ಇಲ್ಲದ ಜೀವನ ಬಹಳ ಬೇಸರ 
ಪ್ರೀತಿ ಮೂಡಿಸುವುದು ಬಾಳಲಿ ನೇಸರ 
ಪ್ರೀತಿಯಲಿ ಇರದೆಂದು ಮತ್ಸರ 

ಪ್ರೀತಿಯಲ್ಲಿರುವುದು ಕಾತರ 
ಎಲ್ಲದರಲ್ಲೂ ಆತುರ 
ಪ್ರೀತಿಯ  ಮಹಿಮೆ ಅಪಾರ 

ಪ್ರೀತಿಯೇ ಹೃದಯದ ಝೇಂಕಾರ 
ಪ್ರೀತಿಯ ದಾರಿ ಬಲು ವಿಸ್ತಾರ 
ಪ್ರೀತಿಯೇ ಬದುಕಿಗೆ ಆಧಾರ 

ಪ್ರೀತಿಯಿಲ್ಲದ ಬದುಕು ನಿಸ್ಸಾರ 
ಏಕೆಂದರೆ ಪ್ರೀತಿಯೇ ಆ ತರ 

ಪರಿಣಾಮ

ನಲ್ಲೆ , ನಿನ್ನ ಕಣ್ಣಲ್ಲಿ
ಕಡಲಾಳದಷ್ಟು ಪ್ರೀತಿ ಕಂಡೆನು
ಕಂಡು ಮನಸು ಸೋತೆನು
ಅಂದೇ ಮಾರು ಹೋದೆನು
ಆ ಕಡಲಿನಲ್ಲಿ ಜಿಗಿದೆನು
ಈಜಿ ದಡವ ಸೇರಿದೆನು
ನಿನ್ನ ಪ್ರೀತಿಯ ಪಡೆದೆನು
ನಾನು ನಿನ್ನವನಾದೆನು
ನಿನ್ನೊಳಗೊಂದಾದೆನು 
ಕೈ ಹಿಡಿಯಲು ಮುಂದಾದೆನು
ಈ ಜಾಗವನೆ ಮರೆತೆನು
ಪ್ರೀತಿಯ ಬಿಂದುವಾದೆನು
ಪ್ರೇಮದ ಚಿಲುಮೆಯಾದೆನು 
ಕೊನೆಗೆ ಕವಿಯೂ ಆದೆನು
ಇಗೋ ಇದ ನಿನಗಾಗಿ ಗೀಚಿದೆನು

ಸ್ವರ್ಗ ಸುಖ


ಇನಿಯ , ನಿನ್ನೀ ಕಣ್ಣುಗಳು 
ಆಡುತ್ತಿವೆ ನೂರಾರು ಮಾತುಗಳು 
ಮುರಿಯುತ್ತಿದೆ ಈ ಮೌನವು 

ಇನಿಯ , ನಿನ್ನೀ ಅದರಗಳು 
ನೀಡುತ್ತಿದೆ ಸಿಹಿ ಜೇನನು 
ಮರೆಸುತ್ತಿದೆ ಈ ಜಗವನು 

ಇನಿಯ , ನಿನ್ನೀ ನಾಲಿಗೆಯು 
ಜಪಿಸುತ್ತಿದೆ ನನ್ನದೇ ಹೆಸರನು 
ಮಾಡುತ್ತಿದೆ ಕರ್ಣಾನಂದವನು 

ಇನಿಯ , ನಿನ್ನೀ ಬಾಹುಗಳು 
ಆಗಿದೆ ಬೆಚ್ಚನೆಯ ಹೊದಿಕೆಯು 
ನೀಡುತ್ತಿದೆ ಪ್ರೀತಿಯ ಸವಿಯನು  


ಇನಿಯ , ನಿನ್ನೀ ಹೃದಯವು
ನೀಡಿದೆ ಪ್ರೀತಿಯ ಸಿಂಹಾಸನವನು
ಉಣಿಸುತ್ತಿದೆ ಪ್ರೇಮದ ಸವಿಯನು

Friday, August 24, 2012

ಸತ್ಯ

ಈ ಜೀವನ ಬಹಳ ಬೇಸರ 
ದಿನವೂ ಬದುಕು ಬಹಳ ದುಸ್ತರ 
ಮೂಡಬಾರದೇ  ಆಶಾಕಿರಣದ ನೇಸರ 
ಎಂದು ಮೂಡುವನೋ ಎಂದು ಕಾತರ 
ಕಾತರಕ್ಕಿಂತ ಹೆಚ್ಚು ಆತುರ 
ಕಾಲನ ವೇಗ ತುಂಬಾ ವಿಸ್ತಾರ 
ತಾಳ್ಮೆಯೊಂದೆ  ಇದಕ್ಕೆ ಪರಿಹಾರ

Friday, July 27, 2012

ಸೀರೆ

ಸೀರೆ ಸೀರೆ ಸೀರೆ 
ಸೀರೆ ಉಟ್ಟ ನೀರೆ 
ಬಾನಿಂದ ಧರೆಗೆ 
ಇಳಿದು ಬಂದ ಅಪ್ಸರೆ 

ಕವಲುದಾರಿ

ಗೆಳೆಯ , ಜೀವನದಲ್ಲಿ 
ನನ್ನ ದಾರಿ ಬೇರೆ 
ನಿನ್ನ ದಾರಿ ಬೇರೆ 
ಬಿಡಿಸಿ ಬೇರೆ ಹೇಳಬೇಕೇ ?
ನಮ್ಮಿಬ್ಬರದು ಕವಲುದಾರಿ 

ವಾಸ್ತವ

ಜೀವನವೆಂಬು ಒಂದು ಹೋರಾಟ 
ನಾವು ಮಾಡಲೇಬೇಕಿಲ್ಲಿ ಕಾದಾಟ 
ಆಗ ಮಾತ್ರ ಸಾಧ್ಯ ಹಾರಿಸಲು 
ನಮ್ಮ ಗೆಲುವಿನ ಬಾವುಟ 

ಬಯಕೆ

ಇನಿಯ ,
ನಾನೆಂದೂ ಇರಬೇಕು ನಿನ್ನ ಸನಿಹ 
ಇದರಲ್ಲಿ ಕಿಂಚಿತ್ತಾದರೂ ಆದರೆ ವ್ಯತ್ಯಯ 
ಆಗುವುದು ನನ್ನ ಸ್ಥಿತಿ ಅಯೋಮಯ 

ನೆನಪು


ನೆನಪುಗಳ ಬುತ್ತಿ ಬಿಚ್ಚಿ ನೋಡಿದರೆ
ಬಲು ವಿಶಾಲವದರ ವಿಸ್ತಾರ 
ಆ ಸವಿ ನೆನಪುಗಳ ಸಿಹಿಯೇ
ಮುಂದಿನ ಬದುಕಿಗೆ ಆಧಾರ

ನೆನಪುಗಳು ಮಧುರ, ಅತಿ ಮಧುರ
ಅದರ ಸ್ಪರ್ಶ ಸುಂದರ ಸುಮಧುರ
ಅದರ ಅನುಭವ ಮನೋಹರ
ಆದರೆ ಕೆಲವೊಮ್ಮೆ ಮೂಡುವುದು ಬೇಸರ

ಓ ನೆನಪೇ, ನೀ ನನ್ನ ಕಾದದಿರು
ತಿಳಿಯಾದ ಈ ವಾಸ್ತವ ಕಾದಾಡದಿರು
ಈ ಒಂಟಿ ಬಾಳಿನಲ್ಲಿ, ನೀ
ಕೇವಲ ಸಂಗಾತಿಯಾಗಿರು

Friday, July 20, 2012

ಸ್ವಯಾರ್ಜಿತ

ಕಾಲವೆಂದೂ ಚಲಿಸದೆ ನಿಲ್ಲದು 
ಅದನ್ನರಿತರೆ ಗೆಲುವು ನಮ್ಮದು 
ಜ್ಞಾನವೆಂದೂ ಸಿಗದೇ ಉಳಿಯದು 
ಅದನ್ನರಿತರೆ ಬದುಕು ನಮ್ಮದು 

ಅನಾಹುತ

ಗೆಳೆಯ ನಿನಗಾಗಿ ನಾನೆಷ್ಟು ದಿನ ಕಾದೆ 
ಆದರೆ , ನೀ ಬಹಳ ತಡವಾಗಿ ಬಂದೆ 
ಅಷ್ಟರಲ್ಲಿ ಜೀವನದ ರೈಲು ಬಂಡಿ ಹೋಗಿತ್ತು ಮುಂದೆ 
ಟಿಕೆಟ್ಟು ಖರೀದಿಯಲ್ಲಿ ನೀ ಉಳಿದೆ ಹಿಂದೆ 

ವ್ಯತ್ಯಾಸ

ನನ್ನಾಕೆಯ ಹೆಸರು ಭಾರತಿ 
ಮದುವೆಯ ಹೊಸದರಲ್ಲಿ ನಾ ಅವಳನ್ನು
 ಕರೆಯುತ್ತಿದ್ದೆ  ಬಾ ರತಿ 
ಈಗಾಗಿದೆ ಅವಳ ಭಾರ ಅತಿ 

ಕನ್ನಡಾಭಿಮಾನ

ಬಂದಿತೆಂದರೆ ನವೆಂಬರ್ ಒಂದು 
ಕನ್ನಡ ಕನ್ನಡ ಎನ್ನುವವರಿಗಿಲ್ಲ ಕುಂದು 
ಮುಗಿಯಿತೆಂದರೆ ನವೆಂಬರ್ ತಿಂಗಳು 
ಆಗುವುದು ಕನ್ನಡವು ತಂಗಳು 

ವಿಪರ್ಯಾಸ

ಮನದ ಮೂಲೆಯಲ್ಲೆಲ್ಲೋ ಅಡಗಿದ್ದ 
ಆ ಪಿಸು ಮಾತುಗಳು 
ಹೊರಗೆ ಬಂದದ್ದು ಮಾತ್ರ 
ಕಂಬನಿಯ ಮೂಲಕ 

ಮೊರೆ

ಎತ್ತ ಹೋದರತ್ತ ಕತ್ತಲೆ 
ಇನ್ನೆತ್ತ ಸಾಗಲಿ ನಾ ?
ಕತ್ತಲೆಯ ಬದಿಗೊತ್ತಿ ನಿನ್ನತ್ತ ಕರೆದುಕೋ 
ಕೃಪೆಯಿರಲಿ  ಓ ವಿಧಾತಾ 

ಕನಸು


ಎಲ್ಲರೂ ಕಾಣುವುದು
ಒಂದೇ ಕನಸು
ತಾವು ಕಂಡ ಕನಸು
ಆಗಬೇಕೆಂದು ನನಸು

Wednesday, July 18, 2012

ನಾಮಕರಣದ ಕರೆಯೋಲೆ


ನಮ್ಮ ಮನೆಗೊಬ್ಬಳು
ವಿಶೇಷ ಅತಿಥಿ ಬಂದಿರುವಳು
ನಮ್ಮ ಕುಟುಂಬಕ್ಕೆ ಹೊಸ ಸೇರ್ಪಡೆ ಇವಳು
ಶ್ವೇತ ಮತ್ತು ಕೃಪಾನಿಧಿಯ ಮಗಳು
                   ಪುಟ್ಟಿ,ಪುಟಾಣಿ ಗಿಣಿ,ಚಿನ್ನಿ,ಗುಂಡು,ಬಂಗಾರು
                   ಹೀಗೆ ಇವಳಿಗೆ ಮುದ್ದು ಹೆಸರುಗಳು ಹಲವಾರು
                   ಆದರೂ ಇವಳಿಗೊಂದು ವ್ಯವಹಾರ ನಾಮ ಕೊಡಲು ಇಚ್ಛಿಸಿದೆವು
                   ಅದಕ್ಕಾಗಿ ನಿಮಗೀ ಕರೆಯೋಲೆ  ಕಳಿಸಿದೆವು
26-01-2012 ರಂದು ನಡೆಯುವ ನಾಮಕರಣ ಮಹೋತ್ಸವಕ್ಕೆ
ಚಾಮರಾಜಪೇಟೆಯ ಕೃಷ್ಣ ವಾದಿರಾಜವೇ ನಾವಾರಿಸಿದ ಸ್ಥಳ
ಅಂದು ನೀವುಗಳೆಲ್ಲ ತಪ್ಪದೇ ಅಲ್ಲಿಗೆ ಬಂದು
ಸೇರಬೇಕೆಂದು ನಮ್ಮ ಹಂಬಲ
                   ಸಮಾರಂಭದಲ್ಲಿ ಪಾಲ್ಗೊಂಡು ಮಗುವಿನ
                   ಆಯುರಾರೋಗ್ಯಕ್ಕಾಗಿ ಆಶೀರ್ವದಿಸಿ
                   ಹೀಗೆಂದು ಕೋರುವ 
                   ನಿಮ್ಮೆಲ್ಲರ ವಿಶ್ವಾಸಿ 

ವೈದ್ಯ ಕುಟುಂಬ                                         ಉಡುಪ ಕುಟುಂಬ

Wednesday, July 11, 2012

ಮರೀಚಿಕೆ

ಜೀವನವೆಂಬುದು ಬರೀ ಮರೀಚಿಕೆ 
ಮರೀಚಿಕೆಯೆಂಬ ಈ ಜಿಂಕೆ 
ಕರೆದೊಯ್ಯುವುದು ನಮ್ಮನು ಪ್ರಪಾತಕೆ 
ಇಲ್ಲವಿದಕೆ ಯಾವ ಅಂಕೆ ಶಂಕೆ 

ಪುಟ್ಟ

ನನ್ನಯ ತಮ್ಮ ಪುಟ್ಟ 
ಅಬ್ಬಾ! ಇವನದೆಂತಹ ಹಠ 
ಆಡುವನು ಚಿನ್ನಿ ದಾಂಡಿನಾಟ 
ಪಕ್ಕದ್ಮನೆ ಕಿಟಕಿ ಗಾಜು ಒಡೆಯಲು 
ಒಂದೇ ಏಟಿಗೆ ಓಡುವನು  ಓಟ  

ಮರೆತ ಕವಿತೆ

ನಾ ಅದನ್ನು ಅಂದು 
ಬರೆಯಲು ಮರೆತೆ 
ಅದಿಂದು ಹೊಸ ರೂಪ ತಾಳಿ 
ಆಯಿತೊಂದು ಕವಿತೆ 

ಕಂಬನಿ

ಬಾನಿಂದ ಬಿದ್ದ ಮುತ್ತು 
ಇಬ್ಬನಿ 
ಕಣ್ಣಿಂದ ಬಿದ್ದ ಮುತ್ತು 
ಕಂಬನಿ 

Tuesday, July 10, 2012

ಇಬ್ಬನಿ

ಬಾನಿಂದ ಧರೆಗೆ ಬಿತ್ತೊಂದು ಮುತ್ತು 
ಮುತ್ತಲ್ಲವದು ಬಿದ್ದ ನೀರ ಹನಿಯು 
ನೀರಲ್ಲವದು ಒಂದು ಸಣ್ಣ ಬಿಂದು 
ಬೆರಲ್ಲವದು ಮುಂಜಾನೆಯ ಇಬ್ಬನಿಯು 

ವಿಪರ್ಯಾಸ

ಏನೂ ಇಲ್ಲದಿದ್ದಾಗ 
ಬಹಳ ಇತ್ತು ಆಸೆ 
ಎಲ್ಲವೂ ಇರಲೀಗ 
ಅದೇಕೋ ಜಿಗುಪ್ಸೆ 

ಕೋಗಿಲೆ


ಕುಹು ಕುಹು ಎನ್ನುವ ಕೋಗಿಲೆಯೇ
ನನ್ನ ಮೆಚ್ಚಿನ ಕೋಗಿಲೆಯೇ
ಮಾಮರದಲ್ಲಿ ಕುಳಿತಿರುವ
ಚಿನ್ನದ ಕಂಠದ ಐಸಿರಿಯೆ
ಮರದಲಿ ನೀನು ಕುಳಿತಿರಲು
ನಿನ್ನಯ ಸುತ್ತಲು ಎಲೆ ಎಲೆಯೇ
ಮೊಟ್ಟೆಯನಿಕ್ಕಲು ಕಾಗೆಯ ಗೂಡನು
ಏತಕೆ ನೀನು ಹುಡುಕಿರುವೆ
ನನ್ನ ಮೆಚ್ಚಿನ ಕೋಗಿಲೆಯೇ
ಕಂದು ವರ್ಣದ ಕೋಗಿಲೆಯೇ
ಹೊಗಳಲು ಜಂಬ ಪಡಬೇಡವೇ
ನೀನೇನು ಸುಂದರಿಯೇ?
ನಮ್ಮ ಸರೋಜಿನಿ ನಾಯ್ಡು ಕೂಡ
ನಿನ್ನಂತೆಯೇ ಕೋಗಿಲೆಯೇ ! !

ನೇಚರ್


ನೇಚರ್ ನೇಚರ್ ನೇಚರ್
ಇದೇ ನಮ್ಮ ಟೀಚರ್
ಈ ಸುಂದರ ಕ್ರಿಯೇಚರ್
ರೂಪಿಸುವುದು ನಮ್ಮ ಫ್ಯೂಚರ್
ನಾವು ಮಾಡಲು ಹೊರಟಿಹೆವು ಅಡ್ವೆಂಚರ್
ಆದ್ದರಿಂದ ಅದರ ಸ್ಥಿತಿಯೀಗ ಡೇಂಜರ್
ನಮ್ಮ ಕಣ್ಣ ಮುಂದೆಯೇ ಇದೆ ಅದರ ಪಿಕ್ಚರ್
ಅದನ್ನು ರೂಪಿಸುವುದರಿಂದ ಬೆಳೆಯುವುದು ನಮ್ಮ ಕಲ್ಚರ್

ಕಾಮನಬಿಲ್ಲು


ಧೋ ಎಂದು ಮಳೆಯು ಸುರಿಯುತಿರಲು
ಆಗಸದಿ ಮೋಡ ಮುಸುಕಿರಲು
ಪ್ರಶಾಂತವಾದ ವಾತಾವರಣವಿರಲು
ಕಾಣಿಸಿತ್ತು ಸಪ್ತ ವರ್ಣದ ಕಾಮನಬಿಲ್ಲು

ಹಕ್ಕಿ


ಹಕ್ಕಿ ಹಕ್ಕಿ ಬಣ್ಣದ ಹಕ್ಕಿ
ಆಗಸದೆತ್ತರದಿ ಹಾರುವ ಹಕ್ಕಿ
ಪಟ ಪಟ ಎಂದು ರೆಕ್ಕೆಯ ಬಡಿಯುತ
ಮುಗಿಲೆತ್ತರದಿ ಹಾರುವ ಹಕ್ಕಿ
ಹಕ್ಕಿ ಹಕ್ಕಿ ಬಣ್ಣದ ಹಕ್ಕಿ
ಅಂಗಳಕ್ಕೆ ಬಂದು ತಿನ್ನುವುದು ಅಕ್ಕಿ
ಭವಿಷ್ಯವ ಹೇಳುವ ಸುಂದರ ಹಕ್ಕಿ
ಅದೇ ನನ್ನ ನೆಚ್ಚಿನ ಹಾಲಕ್ಕಿ

Monday, July 9, 2012

ಹೀಗೊಂದು ಕನಸು


ಅಲ್ಲೊಂದು ಭಯಾನಕ ಕಾಡು
ಅಲ್ಲಿ ಪ್ರಾಣಿಗಳ ಹಿಂಡು
ಆನೆಯು ಘೀಳಿಟಿತ್ತು
ಸಿಂಹ ಹುಲಿಗಳು ಘರ್ಜಿಸಿತು
ಗೂಬೆಯು ದುರುಗುಟ್ಟಿ ನೋಡಿತು
ಹಾವು ಬುಸ್ಸೆಂದಿತು
ನಾನು ಕಿಟಾರನೆ ಕಿರುಚಿದ್ದೆ
ಮಂಚದಿಂದ ಬಿದ್ದಿದ್ದೆ
ಆಗ ತಿಳಿಯಿತು
ನಾ ಕಂಡದ್ದು ಕನಸು
ಆಗದಿದ್ದರೆ ಸಾಕಾದು ನನಸು

ಕವಿತೆ


ನಾನು ಬರೆದೆ ಸುಂದರ ಕವಿತೆ
ನನ್ನ ನಲ್ಲೆಗೆ
ಅದನ್ನು ಓದಿ ಬಿಸಾಡಿದಳು
ಕಸದ ತೊಟ್ಟಿಗೆ

ಭ್ರಮೆ-ಮರೀಚಿಕೆ


ಜಿಂಕೆಯು ನೆಗೆದಾಡುತಿದೆ
ಕೋಗಿಲೆಯು ಹಾಡುತಿದೆ
ನವಿಲು ನರ್ತಿಸುತಿದೆ
ನದಿಯು ಝುಳು ಝುಳು ಹರಿಯುತಿದೆ
ಗಾಳಿಯು ತಂಪಾಗಿ ಬೀಸುತಿದೆ
ಹಕ್ಕಿಗಳು ಗಗನದೆತ್ತರದಿ ಹಾರುತಿದೆ
ಪುಷ್ಪಗಳು ಅರಳುತಿವೆ
ದುಂಬಿಯು ಝೇಂಕರಿಸುತಿದೆ
ಜೇನು ಮಕರಂದ ಹೀರುತಿದೆ
ಅಗೋ! ಮೀನು ಈಜುತಿದೆ
ಹಲವು ಮನೋಹರ ದೃಶ್ಯ!!
ಇವೆಲ್ಲವೂ ಸಾಧ್ಯ ಕಾಡಿನಲಿ
ಆದರೆ ಇದು ಅಸಾಧ್ಯ ನಾಡಿನಲಿ

ರೊಕ್ಕ


ನನ್ನ ಗೆಳತಿ ರೇಖಾ
ಹಾಕ್ತಾಳ ತರತರಹದ ಫ್ರಾಕ
ನಂಗೂ ಇಷ್ಟ ಹಾಕಾಕ
ಆದರೆ ಯಾರು ಕೊಡ್ತಾರ ರೊಕ್ಕ? 

ಹೊಗಳಿ(ಟೀ)ಕೆ


ನಲ್ಲೆ ನೀನು ತುಂಬಾ white
ಮಾತು ತುಂಬಾ sweet sweet
ಆದರೆ ನೀನು ತುಂಬಾ short
ಪರ್ವಾಗಿಲ್ಲ ಮಾಡ್ಕೋತೀನಿ adjust
ಹೆಚ್ಚುತ್ತಿದೆ ಏಕೆ ನಿನ್ನ weight
ಮಾಡಬಾರದೇ ಸ್ವಲ್ಪ diet ?
ಏನಾದರೂ ಸರಿ ನೀ ತುಂಬಾ great
ಏಕೆಂದರೆ ಕೊಟ್ಟಿರುವೆಯಲ್ಲ ನನಗೆ ನಿನ್ನ heart <3

ಆ ತಂಪು ಸಂಜೆ


ಸಂಜೆಯಾಗಲು ಮುಳುಗಿದನು ಸೂರ್ಯ
ಆಹಾ!! ಎಂತಹ ಮನೋಹರ ದೃಶ್ಯ
ಸಂಜೆಯ ತಂಪು ಗಾಳಿ ಬೀಸುತಿರಲು
ಮೈ ಮನ ನವಿರೇಳುತಿರಲು
ಹುಲ್ಲುಗಾವಲಿನಲ್ಲಿ ಗೋವುಗಳು ಮೇಯುತಿರಲು
ಗೋಪಾಲಕನು ಕೊಳಲನ್ನು ಊದುತಿರಲು
ಎಲ್ಲೆಲ್ಲೂ ಸಂತೋಷವೇ ತುಂಬಿತ್ತು

ಮಾತಿನ ಮತ್ತು


ಎಲ್ಲೆಲ್ಲೂ ತುಂಬಿತ್ತು ಮಾತು
ಅದರಿಂದ ತಿಳಿಯಲಿಲ್ಲ ಹೊತ್ತು
ಆದ್ದರಿಂದ ಹಿರಿಯರು ಹೇಳುವರು
ಮಾತು ಮನೆ ಕೆಡಿಸಿತು 
ತೂತು ಒಲೆ ಕೆಡಿಸಿತು

Tuesday, June 12, 2012

ಮನುಷ್ಯ (ಮಂಗ )

ವಿಜ್ಞಾನಿ ಗಳು  ಹೇಳುವರು 
ಮಂಗನಿಂದ ಮಾನವ 
ನನ್ನ ತರಲೆ ತಮ್ಮನನ್ನು ಕಂಡು 
ನಾ ಹೇಳುವೆ 
ಅಲ್ಲಲ್ಲ !! ಮಾನವನಿಂದ ಮಂಗ 

ಮೀಯಾ೦


ನಮ್ಮ ಮನೆಯ ಬೆಕ್ಕು
ಅದರ ಹೆಸರು ರುಕ್ಕು
ಎಲ್ಲರ ಮುದ್ದಿನಿಂದ
ಈಗ ಅದಕೆ ಸೊಕ್ಕು

ಸಮ ಪಾಲು


ಗಿಡದಲ್ಲಿ ಹೂ ಜೋಡಿಕೊಂಡಿರಲು
ಅದರ ಅಂದವನ್ನು ಸಂತಸದಿಂದ ಅನುಭವಿಸು
ಕಷ್ಟದೊಂದಿಗೆ ಸುಖವಿರಲು
ತೃಪ್ತಿಯಿಂದ ಅನುಭವಿಸು

ಗಾಂಧೀಜಿ


ನಿನಗೆ ಗೊತ್ತೇ ಪಾಪು
ಇವರೇ ನಮ್ಮ ಬಾಪು
ಸ್ವಾತಂತ್ರ್ಯ ಚಳವಳಿಯಲ್ಲಿ
ಇವರೂ ನಾಯಕರು
ಸತ್ಯ ಅಹಿಂಸೆ ಎಂದು
ಸಾರಿದ ಮಹಾತ್ಮರು
ದೇಶದ ಏಳಿಗೆಗಾಗಿ
ಶ್ರಮಿಸಿದ ಪುಣ್ಯಾತ್ಮರು
ಸ್ವಾತಂತ್ರ್ಯ ಬಂದ ಮರು ವರ್ಷವೇ
ಆದರು ಹುತಾತ್ಮರು

ತಂಗಿ


ನನ್ನ ತಂಗಿ ಆಶಾ
ಅವಳಿಗಿಷ್ಟ ಸಮೋಸ
ಮಾಡಿದ್ರೆ ಆಟದಲ್ಲಿ ಮೋಸ
ಕೊಡುವೆ ಸಕತ್ತಾಗಿ ಗೂಸ

Wednesday, June 6, 2012

ಚಿಂತೆಯ ಕಂತೆ


ಇಂದಿಗೆ ಮುಗಿಯಿತು ಟೆಸ್ಟ್
ನಾಳೆಯಿಂದ ರೆಸ್ಟ್
ಮುಂದಿನ ತಿಂಗಳು ಇದೆ  ಎಗ್ಜ಼ಾಮ್
ನನ್ನ ತಲೆ ಆಗುವುದು ಟೆನ್ಶನ್ನಿಂದ ಜಾಮ್    

ಇಷ್ಟ - ಕಷ್ಟ


ಇಷ್ಟ ಇಷ್ಟ ನನಗೆಲ್ಲರು ಇಷ್ಟ
ತಿಂಡಿ ಕೊಡುವ ಅಮ್ಮನು ಇಷ್ಟ
ಐಸ್ಕ್ರೀಮ್ ಕೊಡಿಸುವ ಅಪ್ಪನು ಇಷ್ಟ
ಚಾಕ್ಲೇಟ್ ಕೊಡಿಸುವ ತಾತನು ಇಷ್ಟ
ಮುದ್ದು ಮಾಡುವ ಅಜ್ಜಿಯು ಇಷ್ಟ
ತರಲೆ ಮಾಡುವ ಅಣ್ಣನು ಇಷ್ಟ
ಆದರೆ , ಇವರೆಲ್ಲ ಶಾಲೆಗೆ ಹೋಗು
ಎನ್ನಲು ಬಲು ಕಷ್ಟ

ನಲ್ಲೆ


ನಲ್ಲೆ ,
ನಿನಗಾಗಿ ನಾನಿಲ್ಲೇ
ಕಾಯುತಿರುವೆನಲ್ಲೇ
ನಿನ್ನ ಮರೆವಿಗಿಲ್ಲ ಎಲ್ಲೆ

ಗುಂಡ




ಪಕ್ಕದ್ಮನೆ ಗುಂಡ
ಅವನೋ ಪೋಲಿ ಪುಂಡ
ಕೊಟ್ಟರೆ ಬಿಸಿ ಬಿಸಿ ಬೋಂಡ
ಹೂಡುವ ನಮ್ಮನೇಲೇ ಝಾಂಡ
ಅಬ್ಬಬ್ಬ !! ಇವನೆಂತಹ ಮೊಂಡ

ನಲ್ಲೆ


ನಿನ್ನ ನಗುವೆಷ್ಟು ಚೆಂದ
ಅದರ ಮುಂದಿಲ್ಲ ಈ ಹೂವಿನ ಅಂದ

ಬಾಳು


ಜೀವನವೆಂಬ ಕಡಲಿನಲ್ಲಿ
ತೊಂದರೆಯ ಸುಳಿ ಇರುವುದು ಸಹಜ
ಆದರೆ ನೀನು ನಿನ್ನ ಜಾಣ್ಮೆಯಿಂದ
ಅದನ್ನು ದಾಟು ಮನುಜ

ಜ್ಞಾನ



ಬಾಳೆಂಬ ಕತ್ತಲೆಯಲ್ಲಿ
ಶಾಲೆಯೆಂಬ ಎಣ್ಣೆ ತುಂಬಿದ ಹಣತೆಯಿಂದ
ವಿದ್ಯೆಯೆಂಬ ಬತ್ತಿ ಇಟ್ಟು
ಜ್ಞಾನವೆಂಬ ದೀಪ ಬೆಳಗಿಸಲು
ನಮ್ಮ ಭವಿಷ್ಯ ಪ್ರಕಾಶಮಾನ

Wednesday, May 30, 2012

ಮಳೆ



ಮಳೆ ಬಂತು ಮಳೆ
ಊರು ತುಂಬಾ ಹೊಳೆ
ಬೀದಿಯಲಿಲ್ಲ ಕಳೆ
ಎಲ್ಲರ ಬಟ್ಟೆ ಕೊಳೆ
ಮಕ್ಕಳಿಗುಂಟು ರಜೆ
ಆದರೂ ಇದು ಒಂದು ಸಜೆ

Tuesday, May 29, 2012

ಪುಟ್ಟಿ - ಬುತ್ತಿ


ಬಂದಳು ನಮ್ಮಯ ಪುಟ್ಟಿ
ಕೈಯಲಿ ಹಿಡಿಡಳು ಬುಟ್ಟಿ
ಮಾಡಲು ಅಮ್ಮನು ರೊಟ್ಟಿ
ಕಟ್ಟಿದಲೊಂದು ಬುತ್ತಿ
ಗದ್ದೆಗೆ ಒಯ್ದಳು ಬುತ್ತಿ
ತಿನಿಸಿದಲಪ್ಪಗೆ ರೊಟ್ಟಿ

ರೊಟ್ಟಿ

ರೊಟ್ಟಿ ರೊಟ್ಟಿ ಬಿಸಿ ಬಿಸಿ ರೊಟ್ಟಿ
ಅಮ್ಮನು ಮಾಡಿದ ಪುಟಾಣಿ ರೊಟ್ಟಿ
ಕೈಯಲಿ ಅದನು ತಟ್ಟಿ ತಟ್ಟಿ 
ಮಾಡಿದಳಮ್ಮ ರುಚಿ ರುಚಿ ರೊಟ್ಟಿ

ಅಪ್ಪನು ಮೆಚ್ಚುವ ರಾಗಿ ರೊಟ್ಟಿ 
ತಮ್ಮನು ಹೋಗಳುವ ಅಕ್ಕಿ ರೊಟ್ಟಿ
ಕಾವಲಿ ಮೇಲೆ ತಟ್ಟಿ ತಟ್ಟಿ
ಮಾಡಿದಳಮ್ಮ ರುಚಿ ರುಚಿ ರೊಟ್ಟಿ

ಅಜ್ಜಿಯು ಮೆಚ್ಚದ ತಿಂಡಿ ರೊಟ್ಟಿ
ತಾತನು ಜಗಿಯಾದ ಗಟ್ಟಿ ರೊಟ್ಟಿ
ಕೈಯಲಿ ಅದನು ತಟ್ಟಿ ತಟ್ಟಿ
ಮಾಡಿದಳಮ್ಮ ರುಚಿ ರುಚಿ ರೊಟ್ಟಿ

ತಿನ್ನೆನು ಎಂದಿಗೂ ಗಟ್ಟಿ ರೊಟ್ಟಿ
ಅಮ್ಮ ಮಾಡುವಳು ಮೃದು ಮೃದು ರೊಟ್ಟಿ
ನನ್ನಯ ನೆಚ್ಚಿನ ತಿಂಡಿ ರೊಟ್ಟಿ
ಆಹಾ! ಘಮ ಘಮ ಪರಿಮಳದ ರೊಟ್ಟಿ

ತಾತ


ನನ್ನಯ ಮುದ್ದಿನ ಮಿಲಿಟ್ರೀ ತಾತ
ಡಿಸಿಪ್ಲೀನ್ ಎನ್ನುವರು ಸದಾ ಈತ
ಆದರೆ ದೊಡ್ಡ ತಿಂಡಿ ಪೋತ
ಯಾವಾಗಲೂ ಹೇಳುವರು ಜೈ ಭಾರತ್ ಮಾತಾ

ಟೋಪಿ

ಬಹಳ ಹಿಂದೆ ಜನರು ತೊಡುತಿದ್ದರು
ಗಾಂಧೀಜಿ ಟೋಪಿ
ಇಂದಿನ ಜನರು ತೊಡದಿದ್ದರೂ
ಹಾಕುವರು ಇತರರಿಗೆ ಟೋಪಿ !!!

ಅಂತರ

  ಮಾತು ಮೌನಗಳ ನಡುವೆ
ಇರುವುದೊಂದೇ ಅಂತರ
ಮಾತು ಭಾಷೆಯ ಕೊಂಡಿಯಾದರೆ
ಮೌನ ಭಾವನೆಗಳ ಕೊಂಡಿ