Tuesday, July 10, 2012

ಕೋಗಿಲೆ


ಕುಹು ಕುಹು ಎನ್ನುವ ಕೋಗಿಲೆಯೇ
ನನ್ನ ಮೆಚ್ಚಿನ ಕೋಗಿಲೆಯೇ
ಮಾಮರದಲ್ಲಿ ಕುಳಿತಿರುವ
ಚಿನ್ನದ ಕಂಠದ ಐಸಿರಿಯೆ
ಮರದಲಿ ನೀನು ಕುಳಿತಿರಲು
ನಿನ್ನಯ ಸುತ್ತಲು ಎಲೆ ಎಲೆಯೇ
ಮೊಟ್ಟೆಯನಿಕ್ಕಲು ಕಾಗೆಯ ಗೂಡನು
ಏತಕೆ ನೀನು ಹುಡುಕಿರುವೆ
ನನ್ನ ಮೆಚ್ಚಿನ ಕೋಗಿಲೆಯೇ
ಕಂದು ವರ್ಣದ ಕೋಗಿಲೆಯೇ
ಹೊಗಳಲು ಜಂಬ ಪಡಬೇಡವೇ
ನೀನೇನು ಸುಂದರಿಯೇ?
ನಮ್ಮ ಸರೋಜಿನಿ ನಾಯ್ಡು ಕೂಡ
ನಿನ್ನಂತೆಯೇ ಕೋಗಿಲೆಯೇ ! !

1 comment:

ಶ್ವೇತ ಕೃಪಾನಿಧಿ ಉಡುಪ said...

ಕೋಗಿಲೆ ಹಾಗೂ ನೇಚರ್ ಕವಿತೆಗಳು ೧೦ನೇ ತರಗತಿಯಲ್ಲಿ ಬರೆದದ್ದು ಎಂದು ನೆನಪು. ಶಾಲಾ ದಿನಗಳಲ್ಲಿ ಬರೆದ ಕವಿತೆಗಳಲ್ಲಿ ಚುಟುಕಗಳೆ ಹೆಚ್ಚು. ಮತ್ತು ಹೆಚ್ಚು ಪ್ರಾಸ ಪದಗಳ ಬಳಕೆ ಇದೆ. ಮುಗ್ಧತೆಯಿಂದ ಕೂಡಿರುವ ಕವಿತೆಗಳೇ ಹೆಚ್ಚು. ನಂತರ ಕಾಲೇಜ್ ದಿನಗಳಿಂದ ಎಲ್ಲ ತರಹದ ಕವಿತೆಗಳನ್ನು ಬರೆಯಲು ಶುರು ಮಾಡಿದೆ.