Wednesday, July 18, 2012

ನಾಮಕರಣದ ಕರೆಯೋಲೆ


ನಮ್ಮ ಮನೆಗೊಬ್ಬಳು
ವಿಶೇಷ ಅತಿಥಿ ಬಂದಿರುವಳು
ನಮ್ಮ ಕುಟುಂಬಕ್ಕೆ ಹೊಸ ಸೇರ್ಪಡೆ ಇವಳು
ಶ್ವೇತ ಮತ್ತು ಕೃಪಾನಿಧಿಯ ಮಗಳು
                   ಪುಟ್ಟಿ,ಪುಟಾಣಿ ಗಿಣಿ,ಚಿನ್ನಿ,ಗುಂಡು,ಬಂಗಾರು
                   ಹೀಗೆ ಇವಳಿಗೆ ಮುದ್ದು ಹೆಸರುಗಳು ಹಲವಾರು
                   ಆದರೂ ಇವಳಿಗೊಂದು ವ್ಯವಹಾರ ನಾಮ ಕೊಡಲು ಇಚ್ಛಿಸಿದೆವು
                   ಅದಕ್ಕಾಗಿ ನಿಮಗೀ ಕರೆಯೋಲೆ  ಕಳಿಸಿದೆವು
26-01-2012 ರಂದು ನಡೆಯುವ ನಾಮಕರಣ ಮಹೋತ್ಸವಕ್ಕೆ
ಚಾಮರಾಜಪೇಟೆಯ ಕೃಷ್ಣ ವಾದಿರಾಜವೇ ನಾವಾರಿಸಿದ ಸ್ಥಳ
ಅಂದು ನೀವುಗಳೆಲ್ಲ ತಪ್ಪದೇ ಅಲ್ಲಿಗೆ ಬಂದು
ಸೇರಬೇಕೆಂದು ನಮ್ಮ ಹಂಬಲ
                   ಸಮಾರಂಭದಲ್ಲಿ ಪಾಲ್ಗೊಂಡು ಮಗುವಿನ
                   ಆಯುರಾರೋಗ್ಯಕ್ಕಾಗಿ ಆಶೀರ್ವದಿಸಿ
                   ಹೀಗೆಂದು ಕೋರುವ 
                   ನಿಮ್ಮೆಲ್ಲರ ವಿಶ್ವಾಸಿ 

ವೈದ್ಯ ಕುಟುಂಬ                                         ಉಡುಪ ಕುಟುಂಬ

8 comments:

ಶ್ವೇತ ಕೃಪಾನಿಧಿ ಉಡುಪ said...

ಪುಟ್ಟಿಯ ನಾಮಕರಣಕ್ಕೆ ಆಹ್ವಾನ ಪತ್ರಿಕೆ ಮಾಡಿಸಲು ಪುಟ್ಟಿಯ ಅಪ್ಪ ಅದರ ಸಾರಾಂಶ ಬರೆಯಲು ನನಗೆ ಹೇಳಿದಾಗ ಬಾಣಂತನದಲ್ಲಿ ಯೋಚಿಸಿ ಪೋಣಿಸಿದ ಕವಿತೆ ಇದು. ಕೇವಲ 10 ನಿಮಿಷದಲ್ಲಿ ಯೋಚಿಸಿದ್ದು. ಕಾರಣಾಂತರಗಳಿಂದ ಪತ್ರಿಕೆ ಬೇಡ ಎಲ್ಲರನ್ನೂ ದೂರವಾಣಿ ಮೂಲಕ ಆಹ್ವಾನಿಸುವುದು ಎಂದು ತೀರ್ಮಾನ ಆಯಿತು. ಆದರೆ ಈ ಕವಿತೆ ಮಾತ್ರ ಎಂದೆಂದೂ ನನ್ನ ಪುಟ್ಟಿಗಾಗಿ :)

Anonymous said...

Thank u so much SWHETHA madam.. ನಿಮ್ಮ ಈ ನಾಮಕರಣದ ಕರೆಯೋಲೆ ನನಗೆ ಬಹಳ ಉಪಯೋಗವಾಯಿತು. ನಮ್ಮ ಮಗುವಿನ ನಾಮಕರಣಕ್ಕೆ ತುಂಬಾ ಸಹಾಯವಾಯಿತು. ಧನ್ಯವಾದಗಳು

Shruthi said...

ಬಹಳ ಚೆನ್ನಾಗಿದೆ, ನಮ್ಮ ಮಗಳ ನಾಮಕರಣದ ಕರೆಯೋಲೆಗೆ ಇದರ ಆಯ್ದ ಭಾಗಗಳನ್ನ ಉಪಯೋಗಿಸ್ತೀವಿ, ನಿಮ್ಮ ಅಪ್ಪಣೆಯಿಂದ

Unknown said...

ತುಂಬ ಚೆನ್ನಾಗಿದೆ....ಹಿಡಿಸಿತು

ಶ್ವೇತ ಕೃಪಾನಿಧಿ ಉಡುಪ said...

ಮೆಚ್ಚುಗೆ ವ್ಯಕ್ತಪಡಿಸಿದ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು. ನಮ್ಮನೆ ಪುಟ್ಟಿಗಾಗಿ ಬರೆದ ಕರೆಯೋಲೆ ಹಲವರಿಗೆ ಉಪಯೋಗವಾಗಿದ್ದು ಕೇಳಿ ಖುಷಿಯಾಯಿತು.

Unknown said...

ತುಂಬಾ ಚೆನ್ನಾಗಿದೆ

Unknown said...

Very nicely narrated... Can I use some text to son naming ceremony

Anonymous said...

Super