ರೊಟ್ಟಿ ರೊಟ್ಟಿ ಬಿಸಿ ಬಿಸಿ ರೊಟ್ಟಿ
ಅಮ್ಮನು ಮಾಡಿದ ಪುಟಾಣಿ ರೊಟ್ಟಿ
ಕೈಯಲಿ ಅದನು ತಟ್ಟಿ ತಟ್ಟಿ
ಮಾಡಿದಳಮ್ಮ ರುಚಿ ರುಚಿ ರೊಟ್ಟಿ
ಅಪ್ಪನು ಮೆಚ್ಚುವ ರಾಗಿ ರೊಟ್ಟಿ
ತಮ್ಮನು ಹೋಗಳುವ ಅಕ್ಕಿ ರೊಟ್ಟಿ
ಕಾವಲಿ ಮೇಲೆ ತಟ್ಟಿ ತಟ್ಟಿ
ಮಾಡಿದಳಮ್ಮ ರುಚಿ ರುಚಿ ರೊಟ್ಟಿ
ಅಜ್ಜಿಯು ಮೆಚ್ಚದ ತಿಂಡಿ ರೊಟ್ಟಿ
ತಾತನು ಜಗಿಯಾದ ಗಟ್ಟಿ ರೊಟ್ಟಿ
ಕೈಯಲಿ ಅದನು ತಟ್ಟಿ ತಟ್ಟಿ
ಮಾಡಿದಳಮ್ಮ ರುಚಿ ರುಚಿ ರೊಟ್ಟಿ
ತಿನ್ನೆನು ಎಂದಿಗೂ ಗಟ್ಟಿ ರೊಟ್ಟಿ
ಅಮ್ಮ ಮಾಡುವಳು ಮೃದು ಮೃದು ರೊಟ್ಟಿ
ನನ್ನಯ ನೆಚ್ಚಿನ ತಿಂಡಿ ರೊಟ್ಟಿ
ಆಹಾ! ಘಮ ಘಮ ಪರಿಮಳದ ರೊಟ್ಟಿ
1 comment:
ಇದು ನನ್ನ ಮೊದಲ ಕವಿತೆ . 9ನೇ ತರಗತಿಯಲ್ಲಿದ್ದಾಗ ಬರೆದಿದ್ದು . ಅದಕ್ಕೂ ಮುಂಚೆ ಬಹಳ ಚಿಕ್ಕವಳಿದ್ದಾಗಲಿಂದ ಪ್ರಾಸ ಪದಗಳನ್ನು ಹೇಳುವುದು , ಕವಿತೆ ಕಟ್ಟಿ ಹೇಳುವುದು , ಚಿಕ್ಕ ಮಕ್ಕಳಿಗೆ ಕಥೆಗಳನ್ನು ಅವರು ಮೆಚ್ಚುವ ರೀತಿಯಲ್ಲಿ ಹುಟ್ಟಿಸಿಕೊಂಡು ಹೇಳುವುದು ನನ್ನ ಹವ್ಯಾಸವಾಗಿತ್ತು
Post a Comment