Tuesday, October 20, 2020

THE RAINBOW SURPRISE



 Written Date - August 2018

Once upon a time there lived a girl in a colorful house in a village. One afternoon, she had gone to bed and she had the best dream ever. After sometime, it started raining heavily, so she woke up. She noticed that it was rainy and sunny. She looked at the sky from her window, as if she was searching for something and suddenly she saw it, a huge bright rainbow on a clear blue sky. She went to her mother and asked her, “Can I go out and play in the rain? Please? Because I saw a rainbow out there”. Mother said, “You can go. Well, if there is a rainbow, I will come and take a picture. But remember, if it is rainy, then you must carry an umbrella”. “ok. Now let’s go!”, the girl replied and  they went out with the umbrellas. Mother took a photo and then they saw that the rainbow had gone. So, they went inside the house. By the time it was night, the girl and her parents ate dinner, and went to bed.    

Monday, October 19, 2020

अरे खेलने केलिए तो 

बोहोत सारे खेल हे 

पर किसीके दिलसे मत खेलो 

क्यूंकि दिल कोई खिलोना नही 

जो एक बार टूट गयी 

तो फिर से जाके जोड़लो 

 ना दिल मे ख़ुशी है 

ना मन को शान्ति 

ना ही होठों पे है मुस्कुराहट 

जब भगवान् ने खुद 

मेरे तक़दीर में आँसू लिखे है 

तो किस्से करू शिखायत 

वो रिश्ता ही क्या जिस्मे छोटे मोटे झगडे ना हो 

गिले शिख्वे ना हो 

रूठना सताना मनाना ना हो 

लेकिन इन छोटी बातों से ही 

टूट जाए ऐसा कमज़ोर रिश्ता 

हमारा ना हो 

ಮಳೆಯ ಹನಿ

ಮಳೆಯ ಹನಿ ಮೊದಲ ಹನಿ ತೊದಲ ಹನಿ ಬಿತ್ತು ಬಾನಿಂದ ಧರೆಗೆ ಮುಂಗಾರಿನ ಮಿಂಚಿನೊಂದಿಗೆ ಆಯಿತೆಲ್ಲೆಲ್ಲೂ ತಂಪು ಪಸರಿಸಿತು ಒದ್ದೆಮಣ್ಣ ಕಂಪು

ಮಳೆಯ ಹನಿ ಎರಡನೆಯ ಹನಿ ಚಿಗುರಿಸಿತು ಎಲ್ಲ ಕಡೆ ಹಚ್ಚ ಹಸಿರು ಅದುವೇ ತಾನೇ ಭೂತಾಯಿಯ ಉಸಿರು

ಮಳೆಯ ಹನಿ ಮೂರನೆಯ ಹನಿ ತುಂಬಿಸಿತು ಹಳ್ಳ ಕೊಳ್ಳ ತೊರೆ ಕೆರೆ ನದಿ ಶರಧಿಗಳ ಧುಮ್ಮಿಕ್ಕುವ ಸುಂದರ ಜಲಪಾತಗಳ

ಹನಿ ಹನಿಗೂಡಿ ಸುರಿಯಿತು ಧಾರಾಕಾರವಾಗಿ ತಂದಿತೆಲ್ಲೆಲ್ಲೂ ಸಮೃದ್ಧಿ ಸುಖ ಶಾಂತಿ ಬಾಳಿಗೆ ನೆಮ್ಮದಿ

Thursday, October 15, 2020

ಮಲೆನಾಡು

ಕಂಡೆ ನಾ ಮಲೆನಾಡ ಭೂರಮೆಯ ಸಿರಿನಾಡ ಬೇರೆಲ್ಲೂ ಕಾಣೆ ನಾ ಇಂಥ ಸೊಬಗಿನಾ ಬೀಡ

ಪಚ್ಛೆತೆನೆ ಗದ್ದೆಯಲಿ ತೆಂಗು ಕಂಗುಗಳು ತೋಟದಲಿ ಏಲಕ್ಕಿ ಕಾಳುಮೆಣಸು ಚಿಗುರು ವೀಳೆಯದೆಲೆ ಕಂಪು ಜಿಟಿ ಜಿಟಿ ತುಂತುರು ಮಳೆ ಹವೆಯಂತೂ ತಂಪು

ಕಾಫಿ ತೋಟಗಳು ಹಲಸು ಕಿತ್ತಳೆ ವೆನಿಲ್ಲಾಗಳು ಸಂಪದ್ಭರಿತ ಮಲೆಯ ಬೆಳೆಗಳು

ಸಹ್ಯಾದ್ರಿಯ ಗಿರಿ ಸಾಲು ಆವರಿಸಿದೆ ಸುತ್ತಲು ಕಣ್ಣಿಗೆ ಹಸಿರಿನ ಹಬ್ಬ ಎಲ್ಲೆಲ್ಲೂ ಎಷ್ಟು ಚೆಂದ ಈ ನಿಸರ್ಗದ ಮಡಿಲು

ಜುಳು ಜುಳು ಹರಿವ ನದಿಗಳು ಧುಮ್ಮಿಕ್ಕಿವೆ ಜಲಪಾತಗಳು ಎತ್ತ ನೋಡಿದರೂ ಹಸಿರು ಕಾನನಗಳು

ಬೆಳ್ಮುಗಿಲಲಿ ಹಕ್ಕಿಗಳ ಚಿತ್ತಾರ ಮಲೆಗಳ ಮಧ್ಯೆ ರವಿಯು ಹೊರಡಲು ಬಹುದೂರ ಈ ನಾಡ ರಮ್ಯತೆ ಅಪಾರ

ಎಂಥ ಚೆಂದ ಈ ಮಲೆನಾಡು ಕವಿಗಳಿಗೆ ಸ್ಪೂರ್ತಿದಾಯಕ ನಾಡು ಕರುನಾಡ ತಾಯಿಯ ಕಿರೀಟದ ಚಿನ್ನದ ಗರಿ ಈ ಬೀಡು 

ಮನವು ನಿಂತ ನೀರಲ್ಲ

ಮನವು ನಿಂತ ನೀರಲ್ಲ ಅದು ಚಲಿಸುವ ಮೋಡ ಒಮ್ಮೊಮ್ಮೆ ಚದುರಿ ಶಾಂತ ಶುಭ್ರವಾಗಿ ಕೆಲವೊಮ್ಮೆ ದಟ್ಟೈಸಿ ಭಾರವಾಗಿ ಆದರೆ ಎಷ್ಟೋ ಬಾರಿ ಕರಗಿ ತಂಪನ್ನಿತ್ತಿದೆ 

ಅದು ಸಾಗರದ ಅಲೆಯಂತೆ ಒಮ್ಮೊಮ್ಮೆ ನೀರವತೆ ಕೆಲವೊಮ್ಮೆ ರೌದ್ರತೆ ಆದರೆ ಎಷ್ಟೋ ಬಾರಿ ಅಲ್ಲಿರುವುದು ಪ್ರಶಾಂತತೆ

ಮನವು ನಿಂತ ನೀರಲ್ಲ ಅದು ಹಾರುವ ಹಕ್ಕಿಯಂತೆ ಒಮ್ಮೊಮ್ಮೆ ರೆಕ್ಕೆ ಬಿಚ್ಚಿ ಸ್ವಚ್ಚಂದವಾಗಿ ಹಾರಿದರೆ ಕೆಲವೊಮ್ಮೆ ರೆಕ್ಕೆ ಮುದುರಿ ಕೂರುವುದು

ಮನವು ಗಾಳಿಯಂತೆ ಒಮ್ಮೊಮ್ಮೆ ತಂಪು ಕುಳಿರ್ಗಾಳಿ ಕೆಲವೊಮ್ಮೆ ಬಿರುಗಾಳಿ

ಮನವು ನಿಂತ ನೀರಲ್ಲ ಚಲಿಸುತ್ತಲೇ ಇರುವುದು ಒಮ್ಮೊಮ್ಮೆ ಹಿಂದೆ ಕೆಲವೊಮ್ಮೆ ಮುಂದೆ ಎಷ್ಟೋ ಬಾರಿ ವರ್ತಮಾನದಲ್ಲೇ

ಈ ವಿಚಿತ್ರ ಅಲ್ಲಲ್ಲ! ವಿಶಿಷ್ಟ ಮನಸ್ಸು

ನಿಧಾನಿಸು

ನಿಧಾನಿಸು ಮನವೇ ನಿಧಾನಿಸು ಓಡದಿರು ಶರವೇಗದಿ ಎಡವಿ ಬೀಳದಿರು ಎಡರು ತೊಡರುಗಳ ದಾರಿಯಿದು ನೀ ನಿಧಾನಿಸು

ಕಟ್ಟದಿರು ಕನಸುಗಳ ಆಶಾಗೋಪುರ ಬಹಳ ಎತ್ತರಕ್ಕೆ ಬಿರುಗಾಳಿ ಬೀಸುವ ಕಾಲವಿದು ಉರುಳಿ ಹೋದೀತು ಒಂದೇ ಕ್ಷಣದಿ ನೀ ನಿಧಾನಿಸು

ಹಕ್ಕಿಯಂತೆ ಬಹಳ ಎತ್ತರ ಹಾರದಿರು ಹುಚ್ಚು ಕಲ್ಪನೆಗಳೊಂದಿಗೆ ರೆಕ್ಕೆ ಮುರಿದೀತು ಕೆಳಗೆ ಪಾತಾಳವಿರುವಾಗ ಸ್ವಲ್ಪ ನಿಧಾನಿಸು

Friday, October 9, 2020

ಗೆಳೆತನ

ಗೆಳತಿ, ನಾನಿಲ್ಲೋ ಇದ್ದೆ ನೀನಿಲ್ಲೋ ಇದ್ದೆ ಒಂದಾದೆವು ನಾವಿಬ್ಬರು ಗೆಳೆತನವೆಂಬ ನಾಲ್ಕಕ್ಷರದಿಂದ ಆ ದೇವರ ದಯೆಯಿಂದ

ಎಷ್ಟು ಸೊಗಸು ಈ ಗೆಳೆತನ ಇದರ ಮುಂದಿಲ್ಲ ಯಾವ ಸಿರಿತನ ಉಳಿಸಿಕೊಂಡಿದೆ ಇದು ಇಂದಿಗೂ ತನ್ನತನ

ವರ್ಷಗಳು ದಿನಗಳಂತೆ ದಿನಗಳು ಕ್ಷಣಗಳಂತೆ ಕಳೆದೇ ಹೋಯಿತು ನಾವಿಬ್ಬರು ದೂರಾಗುವ ಘಳಿಗೆ ಹತ್ತಿರ ಬಂದಿತಲ್ಲ

ಮರೆಯಲಾರೆ ನಾನೆಂದಿಗೂ ಆ ಮಧುರ ಕ್ಷಣಗಳ ಒಂದೇ ತಟ್ಟೆಯಲ್ಲಿ ಊಟ ತರಗತಿಯಲ್ಲಿ ಕೇಳದೆ ಪಾಠ ನಾವಾಡುತ್ತಿದ್ದ ಚೆಲ್ಲಾಟ ನಾ ಹೇಗೆ ಮರೆಯಲಿ

ಕ್ಯಾಂಪಸ್ಸಿನಲ್ಲಿ ನಮ್ಮ ತುಂಟಾಟ ಹಾಸ್ಟೆಲ್ಲಿನಲ್ಲಿ ನಮ್ಮ ಹುಡುಗಾಟ ಪೇಟೆಯಲ್ಲಿ ನಮ್ಮ ಸುತ್ತಾಟ ಇನ್ನು ಕೇವಲ ನೆನಪು ಮಾತ್ರ

ಹಂಚಿಕೊಂಡಿದ್ದೆವು ನಾವು ನಮ್ಮ ದುಃಖ ದುಮ್ಮಾನ ಒಬ್ಬರಿಗೊಬ್ಬರು ನೀಡುತ್ತಿದ್ದೆವು ಸಾಂತ್ವನ ಆಗ ಹಗುರಾಗುತ್ತಿದ್ದ ಮನ ಎಲ್ಲ ಇನ್ನೆಲ್ಲಿ?

ಗೆಳತಿ, ನಮ್ಮ ಗೆಳೆತನ ಎಂದೆಂದೂ ಚಿರವಾಗಿರಲಿ ನಮ್ಮ ಮುಂದಿನ ಪೀಳಿಘೆಗೆ ಮಾದರಿಯಾಗಲಿ ನಾವಿಬ್ಬರೂ ದೂರಾದರೂ ಒಬ್ಬರ ಮನದಲ್ಲಿ ಒಬ್ಬರಿರಲಿ ಈ ಗೆಳೆತನ ಶಾಶ್ವತವಾಗಲಿ

ನೆನಪಿನರಮನೆ

ಹೊಕ್ಕೆ ನಾ ನೆನಪುಗಳ ಅರೆಮನೆಯ ಅಲ್ಲಿದ್ದದ್ದು ಎರಡೇ ಕೋಣೆಗಳು

ಮೊದಲ ಕೋಣೆಯಲಿ ಹಾಲ ಬೆಳದಿಂಗಳು ಸಂತಸದ ನಗೆಹೊನಲು ಮನಃಪಟಲದಲ್ಲಿ ಎಳೆ ಎಳೆಯಾಗಿ ಬಿಡಿಸಿಕೊಂಡಿತು ಸಿಹಿ ನೆನಪುಗಳು ಮೆಲುಕು ಹಾಕಿದಷ್ಟೂ ಸವಿ ನೆನಪುಗಳು ಹೃದಯ ಅರಳಿಸಿ ತಂಗಾಳಿ ಮೈಸೋಕಿಸಿ ತಂಪೆರೆಯಿತು

ಎರಡನೆಯ ಕೋಣೆಯಲಿ ಗಾಢಾಂಧಕಾರ ಅವಮಾನ ನೋವು ನಿರಾಸೆ ಜಿಗುಪ್ಸೆ ದುಃಖದ ಚೀರಾಟ ಕಹಿನೆನಪುಗಳು ಬೆಂಕಿಗೆ ಮೈಯೊಡ್ಡಿದಂಥ ಅನುಭವ ಹೃದಯ ಭಾರ 

ಆದರೆ, ಕಹಿನೆನಪುಗಳು ಕರಿನೆರಳಾಗಿ ಬೆಂಬಿಡದೆ ಕಾಡಿದರೂ ಸಿಹಿನೆನಪುಗಳ ತಂಗಾಳಿ ಆಗಾಗ ತಂಪಿತ್ತಿದೆ

ನೆನಪುಗಳಿರದ ಜೀವನವೆಲ್ಲಿ ನೆನಪೇ ಶಾಶ್ವತ ಕೊನೆಗಿಲ್ಲಿ

Tuesday, October 6, 2020

ಮರೆತೆನೇಂದ್ರ ಮರೆಯಲಿ ಹ್ಯಾಂಗ

ಮರೆತೆನೇಂದ್ರ ಮರೆಯಲಿ ಹ್ಯಾಂಗ ನಿನ್ನ ಈ ಮನದ ತುಂಬ ನೀನೇ ತುಂಬಿರುವಾಗ ನಾ ಮರೆಯಲಿ ಹ್ಯಾಂಗ

ನಿನ್ನ ನೆನೆಯದ ದಿನವಿಲ್ಲ ನಿನ್ನ ನೆನೆಯದ ಕ್ಷಣವಿಲ್ಲ ಕಣ್ಣು ಮುಚ್ಚಿದರೂ ಕನಸಿನಲೂ ನೀನೇ ನಿನ್ನ ಮರೆಯಲಿ ಹ್ಯಾಂಗ

ಬಾನಲ್ಲೂ ನೀನೇ ಚಂದ್ರನ ರೂಪದಾಗ ಬುವಿಯಲ್ಲೂ ನೀನೇ ಒಲವಿನ ನಗಿ ಸೂಸುತ ನನ್ನ ಹೃದಯದಲಿ ಅಡಗಿರುವೆ ನಾ ಮರೆಯಲಿ ಹ್ಯಾಂಗ ನಿನ್ನ

ನೀನಿರದ ನನ್ನ ಬದುಕು ಕಲ್ಪನೆಗೂ ಮೀರಿದ್ದು ನೀನಿದ್ದರೆ ಮಾತ್ರ ನಾನು ನಿನ್ನ ನಾ ಹ್ಯಾಂಗ ಮರೆಯಲಿ