ಕೊರಗದಿರು ಮನವೇ
ಸೊರಗಿ ಮರುಗದಿರು
ಮೌನದಿ ಮುದುಡದಿರು
ಬಾಡದಿರು
ಬಿಕ್ಕಳಿಸಿ ರೋದಿಸದಿರು
ಕುಗ್ಗಿ ಬಾಗದಿರು
ದುಃಖವ ತಡೆದು ಹಿಡಿ
ಅದು ಜಾರಿ ಹೊರ ಹೋಗದಿರಲಿ
ಕಣ್ಣೀರಾಗಿ ಹರಿಯದಿರಲಿ
ಎದೆಯಿಂದ ಹೊರಟು ನಿಟ್ಟುಸಿರು
ಮೂಗಿನ ಹೊಳ್ಳೆಯಿಂದ
ಹೊರ ಬಾರದಿರಲಿ
ಉದರದೊಳಗಡೆಯ ಸಂಕಟ
ಕರುಳ ಕಿವುಚದಿರಲಿ
ಎದೆಗೆ ಹೊಡೆದು
ಬಡಿತ ಹೆಚ್ಚಿಸದಿರಲಿ
ತುಟಿಗಳು
ಕೈ ಬೆರಳುಗಳು
ಅದುರದಿರಲಿ
ಜಂಘಾಬಲ ಉಡುಗಿ
ಹೋಗದಿರಲಿ
ಪಾದಗಳಿಗೆ ನಿಶಕ್ತಿ
ತಾಕದಿರಲಿ
ಭೂಮಿಯೇ ಬಾಯಿ ಬಿರಿದಂತ
ಅನುಭವ ಮನಸಿಗೆ
ಮುಟ್ಟದಿರಲಿ
No comments:
Post a Comment