Thursday, January 9, 2025

ಮಳೆ ಸುರಿಯುವಾಗ


ಮಳೆ ಸುರಿಯುವಾಗ 

ಮಲೆನಾಡಿನಲ್ಲಿರಬೇಕು 

ಬೇರೆ ಕಡೆಯ ಮಳೆಯಂತಿಲ್ಲ 

ಈ ಮಲೆನಾಡ ಮಳೆ 

ಭುವಿಯೊಡಲಿಗೇ ತಂಪು ಸುರಿದಂತಿದೆ


ಗಿಡ ಮರಗಳಿಗೆ ಇನ್ನಷ್ಟು ಜೀವ ಬಂದು 

ಗಾಳಿಗೆ ತೊನೆದಾಡುತ್ತ

ಒಂದಕ್ಕೊಂದು ಮಾತನಾಡುತ್ತಿವೆ 

ತೊರೆಗಳು ಮೈದುಂಬಿ ಉಕ್ಕಿವೆ 


ಕುಂಭ-ದ್ರೋಣ ಸುರಿತ 

ಜೊತೆಗಲ್ಲಿ ಜುಗಲ್ಬಂದಿಯಂತೆ 

ಗುಡುಗು-ಮಿಂಚು ಸಿಡಿಲಿನ ಮೊರೆತ 

ಮಧ್ಯೆ ಮಧ್ಯೆ ತೋಟದೊಳಗಿಂದ 

ಜೀರುಂಡೆಗಳ ಕೂಗಾಟದ ಸೆಳೆತ 


ಕಾರ್ಮೋಡ ದಟ್ಟಯಿಸಲು 

ಹಗಲೂ ಸಂಜೆಗತ್ತಲು 

ತಂಪೇರುವುದು ಸುತ್ತಲೂ 

ಮಂಜು ತೇಲುವುದು ಸಾಗುತ್ತ 

ಮುಂದೆ ಮುಂದೆ 


ಭುವಿಯು ಆಗಸವು 

ಕಾಣುವುದು ಒಂದಾದಂತೆ 

ಕೈ ಕೈ ಹಿಡಿದು ಕುಣಿದಂತೆ 


ಮೋಡ ತಿಳಿಯದಂತೆ 

ಮಳೆಯ ರಭಸವು ಕಮ್ಮಿ 

ಮಂದವಾಗಿ ಹನಿ ಹನಿ 

ಬೀಳುವುದು ಅದೆಷ್ಟೋ ಹೊತ್ತು


Tuesday, January 7, 2025

ಕೊರಗದಿರು ಮನವೇ

 ಕೊರಗದಿರು ಮನವೇ 

ಸೊರಗಿ ಮರುಗದಿರು 

ಮೌನದಿ ಮುದುಡದಿರು 

ಬಾಡದಿರು 

ಬಿಕ್ಕಳಿಸಿ ರೋದಿಸದಿರು 

ಕುಗ್ಗಿ ಬಾಗದಿರು 


ದುಃಖವ ತಡೆದು ಹಿಡಿ

ಅದು ಜಾರಿ ಹೊರ ಹೋಗದಿರಲಿ 

ಕಣ್ಣೀರಾಗಿ ಹರಿಯದಿರಲಿ 

ಎದೆಯಿಂದ ಹೊರಟು ನಿಟ್ಟುಸಿರು 

ಮೂಗಿನ ಹೊಳ್ಳೆಯಿಂದ 

ಹೊರ ಬಾರದಿರಲಿ 

 

ಉದರದೊಳಗಡೆಯ ಸಂಕಟ 

ಕರುಳ ಕಿವುಚದಿರಲಿ 

ಎದೆಗೆ ಹೊಡೆದು 

ಬಡಿತ ಹೆಚ್ಚಿಸದಿರಲಿ 

ತುಟಿಗಳು 

ಕೈ ಬೆರಳುಗಳು 

ಅದುರದಿರಲಿ 


ಜಂಘಾಬಲ ಉಡುಗಿ 

ಹೋಗದಿರಲಿ 

ಪಾದಗಳಿಗೆ ನಿಶಕ್ತಿ 

ತಾಕದಿರಲಿ 

ಭೂಮಿಯೇ ಬಾಯಿ ಬಿರಿದಂತ 

ಅನುಭವ ಮನಸಿಗೆ 

ಮುಟ್ಟದಿರಲಿ

Monday, January 6, 2025

ನನ್ನ ನೆನಪಿನಾಳದಲ್ಲಿ ಅಜ್ಜಯ್ಯ

 


ಪ್ರಾತಃಸ್ಮರಣೀಯರ ಮನ ಮರೆಯದು ಬೇಗ 

ನೆನಪಾಗುವರು ನನ್ನ ಅಜ್ಜಯ್ಯ ಆಗಾಗ


ಲಕ್ಷಣವಾದ ದುಂಡು ಮುಖ,  

ಬಿಳಿ-ಕಪ್ಪು ಮಿಶ್ರಿತ ಕೂದಲು 

ಗುಂಡಾದರೂ ಗಟ್ಟಿ ಮೈಕಟ್ಟು, 

ಬಿಳಿ ಜುಬ್ಬಾ ಕಚ್ಚೆ ಪಂಚೆ 

ಕೆಲವೊಮ್ಮೆ ಅದರ ಮೇಲೊಂದು 

ಕಪ್ಪು ಕೋಟು 


ಮಾತು ಕಮ್ಮಿ, ಆಡಿದರೆ ಮಾತ್ರ 

ಬಹಳ ತೀಕ್ಷ್ಣ 

ಆದರೆ ಯಾರ ಮನಸೂ 

ನೋಯಿಸದಿರುವುದು ಅವರ ಗುಣ 


ಮನೆಯ ಹಾಲಿನಲ್ಲಿ ನಾವು 

ಮಕ್ಕಳು ಆಡುತ್ತಿದ್ದರೆ ಆಟ 

ಬೆಂಚಿನ ಮೇಲೆ ಕುಳಿತು,

ಶಾಂತ ಮುಖಾರವಿಂದದಲ್ಲಿ 

ಪ್ರೀತಿ ತುಂಬಿದ ಕಣ್ಣಲ್ಲಿ

ಮೌನದ ಅವರ ನೋಟ


ಹೊರಗೆ ಹೊರಟಾಗ 

ಕಾಲಿಗೆ ಕಪ್ಪು ಬೂಟು 

ಬರುವಾಗ ಜುಬ್ಬಾ ಜೇಬಿನಲಿ 

ನಮಗಾಗಿ ಹಸಿರು ಕವರಿನ 15 ಪೈಸೆ 

ತುಪ್ಪದ ಚಾಕಲೇಟು 


ನಮ್ಮ ಅಜ್ಜಯ್ಯ 

ಕುಂದಾಪುರ ತಾಲ್ಲೂಕಿನವರು 

ಕೋಟೇಶ್ವರ ಮಾಗಣೆಯ 

ತೆಕ್ಕಟ್ಟೆಯ ಕೊಮೆಯ ಶೇಷಗಿರಿ ವೈದ್ಯರು 

ಟಿ ಶೇಷಗಿರಿ ರಾವ್ ಎಂದೇ ಪ್ರಸಿದ್ಧರು 


ತಂದೆ ತಾಯಿಗೆ ಹಿರಿ ಮಗ 

ಊರು ಬಿಟ್ಟು 

ಹಾಸನಕ್ಕೆ ಹೊರಟಾಗ 

ಬರೀ 8 ವರ್ಷ ಅವರಿಗಾಗ 


ಹೋಟೆಲ್ ಒಂದರಲ್ಲಿ 

ಮಾಣಿಯಾಗಿ ಸೇರಿ 

ಕ್ಲೀನರ್ ಸಪ್ಲೈರ್ ಎಲ್ಲ ಆಗಿ ದುಡಿದರು 

ಒಂದು ದಿನ ತನ್ನದೇ 

ಹೋಟೆಲ್ ಸ್ಥಾಪಿಸಿದರು 

ಅದರ ಹೆಸರೂ ಎಷ್ಟು ಚೆನ್ನ 

ಹೋಟೆಲ್ ಲಕ್ಷ್ಮೀ ಪ್ರಸನ್ನ 


ದೊಡ್ಡ ಜಾಗ ತೆಗೆದರು 

ಲಕ್ಷ್ಮೀ ನಿಲಯ ಕಟ್ಟಿಸಿದರು 

ಜೊತೆಗಿನ್ನೊಂದ್ನಾಲ್ಕು ಮನೆಗಳು, 

ಮೆಡಿಕಲ್ ಸ್ಟೋರನ್ನು ಮಾಡಿ 

ಮಕ್ಕಳ ಮುಂದಿನ ಬದುಕಿಗೆ 

ಭದ್ರ ಬುನಾದಿ ಹಾಕಿದರು


ದುರಾಸೆ ಇರದ

ವಿಶಾಲ ಹೃದಯಿ ಅಜ್ಜಯ್ಯನವರು 

ಊರಿನ ಆಸ್ತಿ ಪೂರ 

ತಮ್ಮನಿಗೇ ಬಿಟ್ಟುಕೊಟ್ಟರು 


ಎಷ್ಟೋ ಓದುವ ಹುಡುಗರಿಗೆ, 

ಮನೆಯಲ್ಲಿ ವಾರಾನ್ನ, ಉಳಿಯಲು ಜಾಗ

ಹೋಟೆಲ್ನಲ್ಲೂ ಉಚಿತ ಊಟದ 

ವ್ಯವಸ್ಥೆ ಹಲವರಿಗಾಗ 


ಕುಟುಂಬದವರಿಗೆ 

ಒಡಹುಟ್ಟಿದವರಿಗೆ 

ಊರಿನವರಿಗೆ 

ಎಲ್ಲರಿಗೂ ಬೇಕಾಗಿದ್ದವರು 

ಎಷ್ಟೋ ಸಹಾಯ ಮಾಡಿದವರು 


ಅವರು ತೀರಿಕೊಂಡಾಗ 

ಅರ್ಧ ಹಾಸನ ಸೇರಿತ್ತು 

ಕೊನೆಯ ದರ್ಶನ ಪಡೆಯಲು,

ಅವರು ಅಜಾತಶತ್ರು 

ಇದ್ದಾಗಲೂ ಹೋದ ಮೇಲೂ 

ಹೋಗಿ ಇಷ್ಟು ವರ್ಷ ಆದರೂ 

ಜನ ನೆನೆವರು ಅವರನ್ನು ಈಗಲೂ 


ಮಿತಭಾಶಿ ಸರಳಜೀವಿ 

ಮೃದು ಹೃದಯಿ ಉದಾರಿ 

ಮಂದಸ್ಮಿತ ಅಜ್ಜಯ್ಯ 

ಹಾಸನದ ಮನೆಯಲ್ಲಿ 

ಅವರ ಫೋಟೋ ನೋಡಿದಾಗಲೆಲ್ಲ 

ಅವರ ಧೀಮಂತ ವ್ಯಕ್ತಿತ್ವದ ಅನುಭವ,

ಅವರ ನೆನಪು ಮತ್ತೆ ಮೂಡುವುದು ಮೆಲ್ಲ 



Sunday, January 5, 2025

Realization

I wonder why I always felt -

inferior, guilty, weird, shameful, low, worthless, egoist, embarrassed, ignorant, a failure, cheap, immature, rude, imperfect, inhumane

about self


As if all others are -

superior, great, wise, worthy, egoless, humble, achievers, respectable, matured, soft, perfect, humans


But lately, I realize how arrogant actually people are,

they live in an illusion that- 

they are perfect, 

their life is perfect!!

without any guilt they pass loose comments 

they shamelessly cross any limits


I get amazed -

by the kind of brazen disregard they have for other's feelings,

they forget empathy 

they get way too comfortable insulting others, 


For enjoying a moment of sadistic pleasure, they can stoop to any low

I wonder how egoistic people are!!!

they often get offended by little things 

but conveniently hurt others with their words and actions 


I now understand how weird and rude people are

They choose to ignore you very casually,

But can't take the taste of their own medicine when you do the same


People behave as if they are superior,

In terms of knowledge, money, beauty

and make others feel inferior, 

they forget to be a human first and behave inhumanely 


Though they actually are a failure in life and not achieved anything,

they never make an effort to appreciate your little success and achievements,

their cheap taunts can be very expensive for your mental health,

and their embarrassing questions, many a times do not have any answers


Now I keep telling myself, 

"You are better than most of them out there!!! Be happy with what ever you are."