Thursday, July 23, 2020

ಕೋರಿಕೆ

ನನ್ನ ಕವನಗಳಿಗೆ ಸ್ಫೂರ್ತಿ ನೀನು
ಈ ಬದುಕಿಗೆ ಸ್ಪೂರ್ತಿಯಾಗಲಾರೆಯಾ?

ಈ ಕತ್ತಲೆಯ ಹೊಡೆದೋಡಿಸಿದವ ನೀನು
ನನ್ನ ಬಾಳಿಗೆ ಬೆಳಕಾಗಲಾರೆಯಾ?

ನನ್ನ ಮೌನಕ್ಕೆ ಕಾರಣ ನೀನು
ಈ ನಿಶ್ಶಬ್ದವ ದೂರವಾಗಿಸಲಾರೆಯಾ?

ಪ್ರತಿ ಸಂತಸಕ್ಕೂ ಮೂಲ ನೀನು
ಅದನ್ನು ಶಾಶ್ವತಗೊಳಿಸಲಾರೆಯಾ?

ಈ ಹೃದಯದ ಮಿಡಿತ ನೀನು
ಅದರ ತುಡಿತವ ತಿಳಿಯಲಾರೆಯಾ?

ನನ್ನ ಉಸಿರಿನ ಹೆಸರು ನೀನು
ಇದು ಪ್ರೀತಿಯೆಂದು ಅರಿಯಲಾರೆಯಾ?

ನನ್ನ ಕನಸಿನ ಇನಿಯ ನೀನು
ಮನದ ಆಸೆಯ ನನಸಾಗಿಸಲಾರೆಯಾ?

Tuesday, July 21, 2020

ಬಾಲ್ಯದ ನೆನಪು

ಬಾಲ್ಯದ ದಿನಗಳು ಬಹು ಸುಂದರ
ಅದರ ಅನುಭವ ಮಧುರಾತಿ ಮಧುರ

ಭೇದಭಾವ ಅರಿಯದ ಹೂಮನಸು
ಕಣ್ಣಂಚಿನಲ್ಲಿ ತುಂಬಿತ್ತು ಹೊಂಗನಸು

ಎಲ್ಲದರ ಬಗ್ಗೆ ಬಹಳ ಇತ್ತು ಆಸೆ
ಬಯಸಿದ್ದು ಸಿಗದಿರೆ ಅದೇನೋ ನಿರಾಸೆ

ಆಟದ ಬಗ್ಗೆ ಇತ್ತು ಅತಿ ಒಲವು
ಸಿಗಲೇಬೇಕೆಂದು ತನಗೇ ಗೆಲುವು

ಎಲ್ಲಾ ವಿಷಯದಲ್ಲೂ ಹುಡುಗಾಟ
ಜೀವನವು ಆಗಿತ್ತು ಚೆಲ್ಲಾಟ

ಚಿಂತೆಯೇ ಇರದ ಮನಸಾಗಿತ್ತು ನಿರಾಳ
ಜೀವನದ ಶೈಲಿಯು ಆಗಿತ್ತು ಸರಳ

ತೊದಲು ನುಡಿಗಳ ಆ ಭಾಷೆ ಮುಗ್ಧ
ಅಪರೂಪದಂತಿದ್ದ ಆ ಸೌಂದರ್ಯ ಸ್ನಿಗ್ಧ

ತೃಪ್ತಿ ನೀಡಿದ ಬಾಲ್ಯ ಮಾಡಿತ್ತು ಮರುಳ
ಇನ್ನು ಮುಂದೆ ಅಂತಹ ದಿನಗಳೇ ವಿರಳ

ಓ ದೇವ ಪುನಃ ಮಾನವ ಜನ್ಮ ಕರುಣಿಸು
ಮತ್ತೆ ಬಾಲ್ಯವೆಂಬ ಅಮೃತವ ಉಣಿಸು

ಬದುಕಿನ ನಿಯಮ

ಗಳಿಸುವುದು ನೂರಾರು
ಕಳೆದುಕೊಳ್ಳುವುದು ಸಾವಿರಾರು
ಎರಡರ ಮಧ್ಯೆ ಘಟನೆಗಳು ಹಲವಾರು
ಜೀವನದ ನೌಕೆಯಲಿ
ಕಾಲನದೇ ಕಾರುಬಾರು
ಅವನದೇ ದರ್ಬಾರು
ಮಾಡಬಾರದು ನಾವು ತಕರಾರು
ಇದೇ ಅವನ ಕರಾರು
ಅವನನ್ನು ಪ್ರಶ್ನಿಸಲು ನಾವ್ಯಾರು
ಏಕೆಂದರೆ ನಾವು ಹುಲುಮಾನವರು

ಮೆಚ್ಚುಗೆ

ಗೆಳತಿ,
ನೀ ಬರೆದ ಈ ಕಾವ್ಯ
ಆಹಾ! ಭವ್ಯಕ್ಕೂ ಭವ್ಯ
ಬಳಸಿರುವ ಶೈಲಿ ನವ್ಯ
ರಾಗವಾಗಿ ಹಾಡಿದರೆ
ಕೇಳಲು ಸುಶ್ರಾವ್ಯ
ಅದರ ಅನುಭೂತಿ ದಿವ್ಯ

ವ್ಯತ್ಯಾಸ

ಮಾತು ಮೌನಗಳ ನಡುವೆ
ಬಹಳ ಇದೆ ವ್ಯತ್ಯಾಸ
ಬರೀ ಮೌನವೇ ಇದ್ದರೆ
ಅದೊಂದು ರೀತಿಯ ನೀರಸ
ಮೌನವಿದ್ದ ಕಡೆ ಮಾತಿಗೆ
ಏನಿದೆ ಕೆಲಸ?
ಮಾತಿದ್ದರೆ ಅಲ್ಲಿರುವುದು ಸರಸ
ಜೊತೆಜೊತೆಗೆ ವಿರಸ
ಮಾತು ಮೌನಗಳೆರಡೂ
ಬೆರೆತರೆ ಮಾತ್ರ ಸಮರಸ

ವಿರಹ

ಎಲ್ಲಿರುವೆ ಓ ರಾಜಕುಮಾರ
ಇರುವೆ ನೀ ಏಕಿಷ್ಟು ದೂರ
ನೀ ಹೇಗಿರುವೆ ಎಂದು ಕಾತರ
ನಿನ್ನ ನೋಡಲು ಮನಕೆ ಆತುರ
ಆಗಿರದಿದ್ದರೂ ಅಡ್ಡಿಯಿಲ್ಲ ನೀ ಅಂದಗಾರ
ಆಗಿದ್ದರೆ ಸಾಕು ನೀ ಕನಸುಗಾರ
ಎಲ್ಲಕ್ಕಿಂತ ಮಿಗಿಲಾಗಿ ಒಳ್ಳೆ ಮನಸುಗಾರ
ಎಂದು ಬರುವೆಯೋ ನೀ ಹಮ್ಮೀರ
ನೀನಿರದ ಬಾಳು ನಿಸ್ಸಾರ
ನೀ ನನ್ನ ಹೃದಯದ ಪಾಳೇಗಾರ
ನಿನ್ನ ನೋಡದೆ ಈ ಹೃದಯ ಭಾರ
ಅದರ ನೋವು ಅಪಾರ
ಬಾರೋ ಬೇಗ ಓ ಚತುರ

Wednesday, July 1, 2020

RAINY RAINBOW



                                                                                                      

                                                                                    Poem Written On - 21/06/2020

Rainy, rainy, rainbow
Colourful and beautiful
Appears only when sun and rain
Are together. [1]

You appear,
You go,
But when is your birthday
No one knows. [2]

I had never seen you
But had a wish to see you
And one day I saw you
With a lot of excitement. [3]

Everyone can’t see 
All your colours
But I was a lucky girl
I saw all your colours. [4]

VIBGYOR is your short form
Do you feel sad?
Don’t be, because
You are indeed so lovely. [5]

All your colours are
Red, orange, yellow
Green, blue and indigo
Also lovely violet. [6]

Even if it’s cloudy or sunny
You will be seen
 I want to see you
One more time. [7]

I don’t want to see you
In the bright sun
Neither morning nor After noon
but only in the evening. [8]


       -        Anagha k udupa