ನಿನಗೆ ಗೊತ್ತೇ ಪಾಪು ಇವರೇ ನಮ್ಮ ಬಾಪು ಸ್ವಾತಂತ್ರ್ಯ ಚಳವಳಿಯಲ್ಲಿ ಇವರೂ ನಾಯಕರು ಸತ್ಯ ಅಹಿಂಸೆ ಎಂದು ಸಾರಿದ ಮಹಾತ್ಮರು ದೇಶದ ಏಳಿಗೆಗಾಗಿ ಶ್ರಮಿಸಿದ ಪುಣ್ಯಾತ್ಮರು ಸ್ವಾತಂತ್ರ್ಯ ಬಂದ ಮರು ವರ್ಷವೇ ಆದರು ಹುತಾತ್ಮರು
ಇಷ್ಟ ಇಷ್ಟ ನನಗೆಲ್ಲರು ಇಷ್ಟ ತಿಂಡಿ ಕೊಡುವ ಅಮ್ಮನು ಇಷ್ಟ ಐಸ್ಕ್ರೀಮ್ ಕೊಡಿಸುವ ಅಪ್ಪನು ಇಷ್ಟ ಚಾಕ್ಲೇಟ್ ಕೊಡಿಸುವ ತಾತನು ಇಷ್ಟ ಮುದ್ದು ಮಾಡುವ ಅಜ್ಜಿಯು ಇಷ್ಟ ತರಲೆ ಮಾಡುವ ಅಣ್ಣನು ಇಷ್ಟ ಆದರೆ , ಇವರೆಲ್ಲ ಶಾಲೆಗೆ ಹೋಗು ಎನ್ನಲು ಬಲು ಕಷ್ಟ