ಅನಘ ಬರೆದದ್ದು - 5/11/2020
ಕಪ್ಪೆ ಕಪ್ಪೆ ಗೋಂಕರ ಕಪ್ಪೆ
ದಪ್ಪಕ್ಕೆ ಕಂದು ಬಣ್ಣದಲ್ಲಿ
ಸಂಜೆಯು ಕಳೆದ ನಂತರ
ಹೊರಗಡೆ ಮೆಟ್ಟಿಲ ಮೇಲೆ ಇರುವೆ ನೀ
ನಿನ್ನನು ನೋಡಿ ಕಿರಿಚುವ ನಾವು
ಬಾಗಿಲ ಒಳಗೆ ಓಡುವೆವು
ಒಳಗೆ ಬಂದ ತತ್ಕ್ಷಣವೇ
ಬಾಗಿಲನ್ನು ಮುಚ್ಚುವೆವು
ನೀನು ಇಲ್ಲದಿದ್ದರೂ 'ಗೋಂಕರ ಕಪ್ಪೆ'
ಎಂದು ಕಿರಿಚುವವರು ನಾವು
ನೀನು ಬಂದರೆ ಹೆದರಿಕೆ ನಮಗೆ
ನಿನ್ನನ್ನು ಸಾವಿರ ಸಾರಿ ನೋಡಿದ್ದೇವೆ ನಾವು
ನಮಗೆ ನೀನೆಂದರೆ
ಇಷ್ಟವಿಲ್ಲ
ಇದನ್ನು ಕೇಳಿ ನೀನು
ಬೇಜಾರು ಮಾಡಿಕೊಳ್ಳಬೇಕಾಗಿಲ್ಲ
- ಅನಘ.ಕೆ. ಉಡುಪ

1 comment:
ಅನಘಳ ಮೊದಲ ಕನ್ನಡ ಪದ್ಯ. ಅವಳ ಚಿಕ್ಕಪ್ಪ ಈ 'ಗೋಂಕರ ಕಪ್ಪೆ' (Indian Bull Frog) ಫೋಟೋ ಕಳಿಸಿ ಅದರ ಮೇಲೆ ಕವನ ಬರಿ ಎಂದು challenge ಮಾಡಿದಾಗ ಬರೆದದ್ದು.
Post a Comment