Saturday, November 21, 2020

ಗೋಂಕರ ಕಪ್ಪೆ



ಅನಘ ಬರೆದದ್ದು - 5/11/2020


ಕಪ್ಪೆ ಕಪ್ಪೆ ಗೋಂಕರ ಕಪ್ಪೆ

ದಪ್ಪಕ್ಕೆ ಕಂದು ಬಣ್ಣದಲ್ಲಿ

ಸಂಜೆಯು ಕಳೆದ ನಂತರ

ಹೊರಗಡೆ ಮೆಟ್ಟಿಲ ಮೇಲೆ ಇರುವೆ ನೀ


ನಿನ್ನನು ನೋಡಿ ಕಿರಿಚುವ ನಾವು

ಬಾಗಿಲ ಒಳಗೆ ಓಡುವೆವು

ಒಳಗೆ ಬಂದ ತತ್ಕ್ಷಣವೇ 

ಬಾಗಿಲನ್ನು ಮುಚ್ಚುವೆವು


ನೀನು ಇಲ್ಲದಿದ್ದರೂ 'ಗೋಂಕರ ಕಪ್ಪೆ'

ಎಂದು ಕಿರಿಚುವವರು ನಾವು

ನೀನು ಬಂದರೆ ಹೆದರಿಕೆ ನಮಗೆ

ನಿನ್ನನ್ನು ಸಾವಿರ ಸಾರಿ ನೋಡಿದ್ದೇವೆ ನಾವು


ನಮಗೆ ನೀನೆಂದರೆ 

ಇಷ್ಟವಿಲ್ಲ 

ಇದನ್ನು ಕೇಳಿ ನೀನು

ಬೇಜಾರು ಮಾಡಿಕೊಳ್ಳಬೇಕಾಗಿಲ್ಲ

             - ಅನಘ.ಕೆ. ಉಡುಪ 

FLOWER


POEM WROTE ON - 03/11/2020

 A pretty little flower

Growing on a plant

Sitting there calmly

And doing what it want [1]

 

When there’s much sunlight

You fade away

You could come back

If you were planted again [2]

 

I love your

Colourful petals

Which will be

Moving in the wind [3]

 

Your fragrance is

An amazing smell

I see, your beauty

Could easily tell [4]

 

The bees- honey producers

Collect nectar from you

Which is made into honey

In some days though [5]

 

Your sepals protect you

When you are small

And when you grow up

You’ll be so tall [6]


                           -Anagha K Udupa

Monday, November 2, 2020

ಮತ್ತೆ ಹೋಗಿಬಿಡಲೇ?


ಬಾಲ್ಯದ ಆ ದಿನಗಳಿಗೆ ಮತ್ತೆ ಹೋಗಿಬಿಡಲೇ ಬಸ್ಸು ಹತ್ತಿ?

ಅಂಕದಕಟ್ಟೆಯಲ್ಲಿ ಇಳಿದು ಆಟೋದವನಿಗೆ 'ಮೂಡ ಹಂಗಳೂರು ನಾರ್ಣಪ್ಪಯ್ಯನ ಮನೆ' ಎಂದಷ್ಟೇ ಹೇಳಿದರೆ ಸಾಕು ರೊಯ್ಯನೆ ನಿಮಿಷಗಳೆರಡರಲ್ಲಿ ತಂದು ಬಿಡುವ ದೊಡ್ಡ ಹೆಬ್ಬಾಗಿಲ ಉದ್ದ ಕಂಬಗಳ, ಹೆಂಚಿನ ಆ ಉಪ್ಪರಿಗೆಯ  ಮನೆಯ ಮುಂದೆ

ಎದರುಗಡೆ ತೋಟದಲ್ಲಿರುವ ಅಮ್ಮನವರ ಗುಡಿಗೆ ಕಣ್ಣಲ್ಲೇ ವಂದಿಸುತ್ತ ಈ ಕಡೆ ತಿರುಗಲು ದೇವರಂತಹ ದೊಡ್ಡಮ್ಮ ಪ್ರತ್ಯಕ್ಷ

ಸಂಭ್ರಮದಿ ಮೈದಡವಿ ಒಳಗೆ ಕರೆದೊಯ್ಯಲು ದೂರದ ಅಡಿಗೆಮನೆಯಿಂದ ಕೊಟ್ಟೆ ಕಡುಬು ಬೇಯುವ ಪರಿಮಳ

ಕೈ ಕಾಲು ಮುಖ ತೊಳೆಯಲು ಬಚ್ಚಲು ಮನೆಗೆ ಹೋಗಲು ಪಕ್ಕದ ಕೊಟ್ಟಿಗೆಯಿಂದ 'ಅಂಬಾ' ಎಂಬ ಕರುವಿನ ಕೂಗು

ಹಸು ಕರುಗಳ ಮೈದಡವಿ ಅಡಿಗೆಮನೆಗೆ ಕಾಲಿಡುತ್ತಿದ್ದಂತೆ ನೊರೆಹಾಲ ಬಿಸಿ ಕಾಪಿ ಲೋಟ ಕೈಗೆ

ಬೇಸಿಗೆಯ ರಜೆಗೆಂದು ಹೆಣ್ಮಕ್ಕಳು ಮೊಮ್ಮಕ್ಕಳು ಒಬ್ಬರಾದ ಮೇಲೆ ಒಬ್ಬರು ಬರಲು, ಮನೆ ತುಂಬಾ ಜನ, ಮಾತು ಹರಟೆ ನಗು ಕೇಕೆ, ಮನೆಯ ಹಿರಿಯರಿಗೆ ಸಂಭ್ರಮದ ಹೊನಲು

ಬೆಳಗೆದ್ದು ಮಿಂದು ಅಮ್ಮನವರ ಗುಡಿ, ಗೋಪಾಲಕೃಷ್ಣನ ಗುಡಿ, ಅಶ್ವತ್ಥ ಕಟ್ಟೆ, ನಾಗರ ಬನ ಸುತ್ತಿಬಂದು, ತಿಂಡಿ ತಿಂದ ಮೇಲೆ ಮಕ್ಕಳಾದ ನಮಗೆಲ್ಲ ಬಿಡುವಿಲ್ಲದಷ್ಟು ಆಟ, ತೋಟ ಗದ್ದೆ ಹಾಡಿಗಳಲ್ಲಿ ಮೈಬೆವರುವಷ್ಟು ಸುತ್ತಾಟ 

ನೇರಳೆ, ಗ್ವಾಯ್ ಹಣ್ಣು, ಅಡಿಕೆ ಹಣ್ಣು, ಕಿಸ್ಕಾರ, ಹಾಯ್ನ ಹಣ್ಣಿನ ಸಂಗ್ರಹಣೆ ಕೊಟ್ಟೆ ತುಂಬೆಲ್ಲ, ಅಂಗಳದ ಮುಂಡು ಮಾವಿನಮರದ ಹಣ್ಣಿಗೋ ಗದ್ದೆಯ ಬಳಿಯ ಕಾಟು ಮಾವಿನಮರದ ಹಣ್ಣಿಗೋ ಸ್ಪರ್ಧೆ ನಮ್ಮ ನಮ್ಮಲ್ಲೇ

ತೋಟದ ಅಡಿಕೆ ಮರಗಳಿಗೆ ಹಗ್ಗ ಕಟ್ಟಿ ಜೋಕಾಲಿಯಾಟ, ಕಣ್ಣ ಮುಚ್ಚಾಲೆ, ಇಸ್ಪೀಟು, ಕವಡೆ, ಚಪ್ಪಾಳೆ ಆಟ, ಗದ್ದೆಯಲೆಲ್ಲ ಓಡುವಾಟ, ಮನೆ ಮನೆ ಆಟ 

ಚನ್ನೆಮಣೆ, ನಾಲ್ಕು ಕಂಬ, ಕಲ್ಲುಕೋಟೆ ಆಟ, ಗದ್ದೆಯ ಮಣ್ಣಿಗೆ ಕೆರೆಯಿಂದ ತೆಂಗಿನ ಕರಟದಲ್ಲಿ ತಂದ ನೀರು ಹಾಕಿ ಹದ ಮಾಡಿ ಮನೆ ಕಟ್ಟುವ ಆಟ, ನಮ್ಮ ನಮ್ಮಲ್ಲೇ ಆಟ, ಬೆಟ್ಟಿನ ಮಕ್ಕಳ ಜೊತೆಗೂ ಆಟ

ಕೋಲಿನಿಂದ ಟಯರ್ ಮುಂದೆ ತಳ್ಳಿ ಓಡಿಸುತ್ತ ಊರ ಓಣಿಯಲ್ಲಿ ಜಿಂಕೆಯಂತೆ ನಾವೂ ಓಡುತ್ತ, ತೆಂಗಿನ ಮಡಲ ಬ್ಯಾಟ್ ಮಾಡಿ ಕ್ರಿಕೆಟ್ ಆಡುತ್ತ, ತೋಟದ ದರಳೆ ರಾಶಿಯ ಮೇಲೆ ಜಿಗಿಯುತ್ತ, ಎಷ್ಟು ಆಡಿದರೂ ಕುಣಿದರೂ ದಣಿವಿಲ್ಲ ತೃಪ್ತಿಯಿಲ್ಲ

ಮಕ್ಕಳು ನಾವೆಲ್ಲ ಸಾಲಾಗಿ ತಟ್ಟೆ ಇಟ್ಟುಕೊಂಡು ಕೊಚ್ಚಕ್ಕಿ ಗಂಜಿ ಮಿಡಿ ಉಪ್ಪಿನಕಾಯಿ ಊಟ ಉಂಡು, ಐಸ್ಕ್ಯಾಂಡಿಯವನಿಗೆ ಕಾದು ಮನೆಯ ಹಿರಿಯರ ಕಾಡಿ ಬೇಡಿ ದುಡ್ಡು ಪಡೆದು ಪೆಪ್ಸಿ, ಬೆಲ್ಲದ ಕ್ಯಾಂಡಿ ತಿಂದು ತೇಗಿ 

ತೋಟದ ಗಾಳಿಗೆ ಕಣ್ಣು ಬಾಡಿ ಹೆಬ್ಬಾಗಿಲಲ್ಲೋ ಛಾವಡಿಯಲ್ಲೋ ಉರುಡಿಕೊಂಡರೂ ಉಂಟು, ಆಡಿದ್ದು ಸಾಲದೆ ಮತ್ತೆ ತೋಟಕ್ಕೆ ಓಡಿದರೂ ಉಂಟು

ಪೇರಲೆಯ ಮರ ಹತ್ತಿ ಗಿಳಿ ತಿಂದ ಹಣ್ಣು ಕಿತ್ತು ತಿಂದು, ಕೊಕ್ಕೆ ತಂದು ಬಾದಾಮಿ ಮರದ ಮಾವಿನಕಾಯಿ ಕಿತ್ತು ಕತ್ತರಿಸಿ ಉಪ್ಪು ಮೆಣಸು ಜಜ್ಜಿ ಸವಿದು

ಸಂಜೆಯಾಗುತ್ತಲೇ ಹುರಿದ ನೆನಗಡಲೆ, ಖಾರದ ಕಡ್ಡಿಯ ಪೊಟ್ಟಣದ ಹಿಡಿದು ಹೊರಟರೆ, ಸೂರ್ಯ ಮುಳುಗಿ ಬಾನು ಕೆಂಪಾಗಿ ಕತ್ತಲಾಗುವವರೆಗೂ ಸಾರದಲ್ಲಿ ತೋಡಿನಲ್ಲಿ ಗದ್ದೆಯ ಅಂಚಿನಲ್ಲಿ ಕೆರೆಯ ಕಟ್ಟೆ ಮೇಲೆ ಎಲ್ಲೆಲ್ಲೂ ನಾವೇ, ಕೊನೆಗೆ ಮೇಯಲು ಹೋದ ಮನೆಯ ದನಗಳ ಹಿಂದೆ ನಾವೂ ಪುನಃ ಮನೆಗೆ

ಮನೆಗೆ ಬಂದು ಕೈಕಾಲು ಮುಖ ತೊಳೆದು, ಕೆಲವೊಮ್ಮೆ ಒಬ್ಬರ ಜೊತೆಗೊಬ್ಬರು ಮತ್ತೆ ಮಿಂದು, ದೇವರಮನೆಗೆ ಹೋಗಿ ನಮಿಸಿ, ಮತ್ತೆ ಊಟದ ತನಕ ಬರೀ ಆಟ, ನಡುವೆ ಕರೆಂಟು ಹೋದಾಗ ಚಿಮಣಿಬುಡ್ಡಿ ದೀಪದ ಬೆಳಕಲ್ಲೇ ಕಿರುಚಾಟ

ಬೆಳದಿಂಗಳ ರಾತ್ರಿಯಲಿ ಅಂಗಳದ ಹುಲ್ಲುಗುತ್ರಿಯ ಬಳಿ ಕುಳಿತು ದೊಡ್ಡಮ್ಮ ನೀಡುವ ಕೈತುತ್ತಿನ ರುಚಿ, ರಾತ್ರಿ ಹೆಬ್ಬಾಗಿಲಲ್ಲಿ ಮಕ್ಕಳೆಲ್ಲ ಸೇರಿ, ಅಭಿನಯ ಸಹಿತ ಅಜ್ಜಯ್ಯ ಹೇಳುವ 'ಪಾತಾಳ ಭೈರವಿ'ಯ ಕಥೆ ಕೇಳುವ ಪರಿ ಎಲ್ಲವೂ ಸೊಗಸು 

ಮದರಂಗಿ ಗಿಡದಿಂದ ಕಿತ್ತು ತಂದಿದ್ದ ಎಲೆಯ ರುಬ್ಬುವ ಗುಂಡಲ್ಲಿ ರುಬ್ಬಿ, ಸಣ್ಣ ಪೊರಕೆ ಕಡ್ಡಿಯಿಂದ ಕೈಗೆಲ್ಲ ಚಿತ್ತಾರ ಬಳಿದು ರಾತ್ರಿ ಪೂರ ಇಟ್ಟಾಗ ಮರುದಿನ ಕೈಯೆಲ್ಲ ಕೇಸರಿಮಯ 

ಊರ ದೇವಸ್ಥಾನದ ವರ್ಧಂತಿ ದಿನ, ಹಗಲು ಹೋಮ-ಹವನ, ರಾತ್ರಿ ಭಜನೆ, ಪಾನಕ ಕೋಸಂಬರಿ ವಿತರಣೆ ನಮಗೆಲ್ಲ ಸಂಭ್ರಮ

ಸಮುದ್ರಕ್ಕೆ ಹೋಗುವ ದಿನ ಇನ್ನೂ ಮಜಾ, ತೋಡುಗಳ ದಾಟಿ ನಡೆದು, ರಸ್ತೆ ದಾಟಿ, ಬಸ್ಸ ಹತ್ತಿ ಕೋಡಿ ಬೀಚಲ್ಲಿ ಇಳಿದು, ಸಮುದ್ರಕ್ಕೆ ಲಗ್ಗೆ ಇಟ್ಟು, ಬಿದ್ದು ಎದ್ದು ಉರುಳಾಡಿ ಉಪ್ಪು ನೀರ ಸ್ನಾನ ಮಾಡಿ ಮನೆಗೆ ಬಂದು ಹಂಡೆ ನೀರಲ್ಲಿ ಮತ್ತೊಮ್ಮೆ ಮಹಾಮಜ್ಜನ 

ಆನೆಗುಡ್ಡೆ ಸಾಲಿಗ್ರಾಮದ ದೇವರ ದರ್ಶನ, ದಕ್ಷಿಣೆಯ ಆಸೆಗೆ ಆಗಾಗ ಊಟದ ಮನೆಗಳಿಗೆ ನಮ್ಮ ಪ್ರಸ್ಥಾನ, ಮಂಡಕ್ಕಿ ಉಪ್ಕರಿ, ಐಸ್ಕ್ರೀಮ್ ತಿನ್ನಲು ಪೇಟೆ ಕಡೆಗೆ ಪಯಣ, ನೀರೋಣಿ ದಾಟಿ ಹೋಗಿ ಮ್ಯಾಣಿ ಅಂಗಡಿಯಲ್ಲಿ ಒಂದು ರೂಪಾಯಿ ಫ್ರೂಟಿ ಪಾನ, ಬಿಡುವಿಲ್ಲದಷ್ಟು ಕೆಲಸ ಊರಲ್ಲಿ

ಮೆಟ್ಟುಕತ್ತಿಮಣೆಯಲ್ಲಿ ದೊಡ್ಡಮ್ಮ ಕೂತು ಹಲಸಿನಹಣ್ಣು ಹೆಚ್ಚಲು, ಕೈಗೆಲ್ಲ ತೆಂಗಿನೆಣ್ಣೆ ಸವರಿ ಅವರ ಸುತ್ತಲೂ ನಾವು ಕೂತು ತೊಳೆ ಬಿಡಿಸಲು ಕಾಯುವುದು, ಹಂಡೆ ಒಲೆ ಕೆಂಡದಲಿ ಗೊಂಚಲು ನೀರುಳ್ಳಿ ಸುಟ್ಟು ತಿನ್ನುವುದು

ದೊಡ್ಡಮ್ಮ ಆಗಾಗ ಬೀಸುವಕಲ್ಲಿನಲ್ಲಿ  ಅಕ್ಕಿಯ ಬೀಸುವುದ ನೋಡುವುದು, ಆಳುಗಳು ತೋಟದ ತೆಂಗಿನ ಸಿಪ್ಪೆಯ ಸುಲಿಯುವುದನ್ನೋ, ಹುಲ್ಲು ಜಪ್ಪುವುದನ್ನೋ ನೋಡುವುದು, ಅವರೊಂದಿಗೆ ಊರ ಭಾಷೆಯಲಿ ಹರಟುವುದು, ಬಾವಿಯಿಂದ ನೀರು ಸೇದಿ ತಂದು ನಾವುಗಳು ಅಡಿಗೆಮನೆಯ ಆ ಡ್ರಮ್ಮು ತುಂಬುವುದು 

ಮಳೆಗಾಲದಲ್ಲಿ ಚಪ್ಪರದ ಮೇಲೆ ಬೀಳುವ ಮಳೆಹನಿಯ ಸದ್ದು ಆಲೈಸುವುದು, ಗದ್ದೆಯಿಂದ ಅವಡೆಕೋಡು ಕಿತ್ತು ತಂದು ಬೇಯಿಸಿ ತಿನ್ನುವುದು, ಗದ್ದೆಯ ಹಸಿರು ಬತ್ತದ ಪೈರುಗಳ ಮೇಲೆ ಮಲಗುವುದು

ದೀಪಾವಳಿಯ ದಿನ ದೇವರ ಮುಂದೆ ನಮ್ಮನ್ನು ಕೂರಿಸಿ ದೊಡ್ಡಮ್ಮ ಎಣ್ಣೆ ಬಳಿಯುವುದು, ಹಿಂದಿನ ದಿನ ಜಾಗಂಟೆ ಬಡಿಯುತ್ತ ಹಂಡೆಗೆ ನೀರು ತುಂಬುವುದು

 ಇವೆಲ್ಲ ಅನುಭವಗಳು ಬೇರೆಲ್ಲೂ ಮತ್ತೆ ಸಿಗಲೇ ಇಲ್ಲವಲ್ಲ!! 

ಹಾಗಾದರೆ , ಬಾಲ್ಯದ ಆ ದಿನಗಳಿಗೆ ಮತ್ತೆ ಹೋಗಿಬಿಡಲೇ?

Sunday, November 1, 2020

I WISH TO FLY

 

                                                       

                         WRITTEN DATE - 01/11/2020

 I wish to fly

In the sky so high

But you know,

I’m a penguin [1]

 

I don’t have wings

I can only swim,

I only catch fish

And make it my dish [2]

 

I really want to fly

Like the other birds do,

They have pretty wings

And colors in them too [3]

 

But what to do,

I live where there’s snow

Anywhere else

Can’t I go [4]

 

Why can’t I fly?

Should I really try?

Maybe I should,

But I’m little shy [5]

 

If I could really fly,

Then will I be famous?

Because I’ll be the only

Penguin to fly [6]

 

Alas! I tried,

But I couldn’t fly

Instead I fell to the ground

And hurt my knee [7]

 

Now I know that 

Penguins can’t fly,

They don’t have wings

And that is why [8]

                                     - ANAGHA K UDUPA