Tuesday, September 4, 2018

ದಶಮಾನೋತ್ಸವ

ಈ ಬ್ಲಾಗ್ ಶುರು ಮಾಡಿ 10 ವರ್ಷ ಕಳೆಯಿತು. 10 ವರ್ಷದ ಸಂಭ್ರಮಕ್ಕಾಗಿ ಮೊದಲ ಬಾರಿಗೆ ಎಲ್ಲರೊಂದಿಗೆ ಈ ಬ್ಲಾಗ್ ಅನ್ನು ಹಂಚಿಕೊಳ್ಳುತ್ತಿದ್ದೇನೆ. ಈ ಬ್ಲಾಗ್ ಅನ್ನು ನನ್ನ ಪ್ರೀತಿಯ ದೊಡ್ಡಮ್ಮನಿಗೆ(ಅಜ್ಜಿ ) ಅರ್ಪಿಸುತ್ತೇನೆ . ನಾನು ಲೇಖಕಿ ಆಗಬೇಕೆಂದು ಸದಾ ಬಯಸಿದ ಅವರಿಗೆ ನಾನು ಬರೆಯುವ ವಿಷಯವೇ ತಿಳಿದಿರಲಿಲ್ಲ. ಇಂದು ಅವರಿದಿದ್ದರೆ ಖಂಡಿತ ಹೆಮ್ಮೆ ಪಡುತ್ತಿದ್ದರು.

ಸೆಪ್ಟೆಂಬರ್ 4, 2008 ರಂದು ನಾನು ಈ ಬ್ಲಾಗ್ ಶುರು ಮಾಡಿದ ಒಂದೇ ಉದ್ದೇಶ , ನನ್ನ ಕವನಗಳನ್ನು ಸಂಗ್ರಹಿಸಲು. ನೂರಾರು ಕವಿತೆಗಳು ಬರೆದಿದ್ದ ಡೈರಿ ಕಳೆದು ಹೋದಾಗ ಕಡೇ ಪಕ್ಷ ಮುಂದೆ ಹಾಗಾಗದಿರಲಿ , ಒಂದು E-Copy ಇರಲಿ ಎಂದು. ಚಿಕ್ಕವಳಿದ್ದಾಗ ಪ್ರಾಸ ಪದಗಳು ಹೇಳುತ್ತಿದ್ದೆನಂತೆ. ಹೈ ಸ್ಕೂಲ್ ನಲ್ಲಿ ಬರೆಯಲು ಶುರು ಮಾಡಿದೆ. ನಂತರ ಇಂಜಿನಿಯರಿಂಗ್, ಕೆಲಸಕ್ಕೆ ಸೇರಿದ ಮೇಲೂ ಬರೆದೆ . ಕನ್ನಡ ಅಲ್ಲದೆ ಹಿಂದಿಯಲ್ಲೂ ಕೆಲವು ಶಾಯರಿಗಳು ಬರೆದೆ. ಈಗ English ನಲ್ಲೂ ಬರೆಯುತ್ತಿದ್ದೇನೆ . ಹಲವು ಕಾರಣಗಳಿಂದ ಈ ಬ್ಲಾಗನ್ನು ಅಷ್ಟು Active ಆಗಿ ಬಳಸಿಲ್ಲ. ಮುಂದೆ ಇನ್ನೂ ಹೆಚ್ಚು ಬಳಸುವ ಉದ್ದೇಶ ಇದೆ. ಇದರಲ್ಲಿ ಕೇವಲ ಕೆಲವು ಕವಿತೆಗಳು, ಲೇಖನಗಳು ಹಾಗು ಶಾಯರಿ Upload ಮಾಡಿದ್ದೇನೆ .  ನನ್ನ ಕನ್ನಡ ಕಥೆಗಳು ಇನ್ನೂ Upload ಮಾಡಬೇಕಾಗಿದೆ.

No comments: