Monday, May 20, 2013

ಹನಿಗಳೆಂದು


ಮನದಿ ಏಕೋ ಮೋಡ ಕವಿದು
ಕತ್ತಲಾಗಿದೆ
ಮೋಡ ಕರಗಿ ಹನಿಗಳೆಂದು
ಜಾರುವುದೋ ಕಾಣದಾಗಿದೆ
ಮೂಢ ಮನವು ಹತ್ತು ಹಲವು
ಚಿಂತೆಯಿಂದ ತುಂಬಿ ಹೋಗಿದೆ
ತುಂಬಿ ತುಳುಕಿ ಚೆಲ್ಲಿ ಹೋದರೂ 
ಕತ್ತಲಲ್ಲಿದೆ !!

ಮೊನ್ನೆ , ನಿನ್ನೆ , ಇಂದು ಕೂಡ
ಅದೇ ರೀತಿ
ನಾಳೆ ಕೂಡ ಮುಂದುವರೆಯುವುದೋ
ಇದೆ ಸ್ಥಿತಿ
ಆಗಾಗ ಬೀಸುವ ತಂಗಾಳಿಯು ಕೂಡ
ಕಾರ್ಮೋಡವ ಚದುರಿಸದಾಗಿದೆ
ಹನಿಗಳೆಂದು ಜಾರುವುದೋ ಕಾಣದಾಗಿದೆ

ಒಂಟಿತನವು ಬಿಟ್ಟು ಬಿಡದೆ
ತಂಟೆ ಮಾಡಿದೆ
ಏಕೆ ಹೀಗೆ ನನ್ನ ಬಿಡದೆ ಕಾಡಿ ಹಿಂಡಿದೆ
ಬರು ಬರುತ್ತಾ ಕಾರ್ಮೋಡ ಇನ್ನೂ
ದಟ್ಟವಾಗಿದೆ
ಹನಿಗಳೆಂದು . . . . . . . . 

Thursday, April 25, 2013


अच्छे दिन थे वो , सुनहरे पल
जब मे काम करती थी
कुछ पैसे कमाती थी !!

फिर एक दिन गुस्ताक़ दिल ने सोचा
एम.टेक करू तो करियर होगा और भी अच्छा !!

बाद मे ली मैने एंट्रेन्स परीक्षा
रिज़ल्ट का करती रही प्रतीक्षा !!

इन्ही दीनो मे किया मैने गूगल
जानने के लिए कौन सा कॉलेज हे अव्वल !!

फिर रिज़ल्ट आया रॅंकिंग भी ठीक ठाक था
काफ़ी सारे कारणों से पास वाला कॉलेज जाना ही समाझधारी था !!

फिर मैने आस पास के कोल्लेजोंकी बोहोत एंक्वाइरी किया
क्या फाय्दा जब मेरे नसीब मे था एट्रीया !!

उसी प्रेशर कुक्कर मे १स्‍ट सेम हॉगेया, २न्ड सेम ख़तम होंनेको आया
अब कुछ माँगूंगी नही भगवान से ज़्यादा
जल्द से जल्द ४त सेम ख़तम करके कहना चाहती हू अलविदा !!

Thursday, April 18, 2013

ಊರಲ್ಲೇ ಕಳೆದು ಹೋಯಿತು


ಬಿರು ಬೇಸಿಗೆಯ
ಸುಡು ಬಿಸಿಲಲಿ
ಏನೋ ಮೋಡಿಯಿದೆ
ಎಷ್ಟೋ ನೆನಪುಗಳಿವೆ

ಬಾಲ್ಯದ ಆ ತುಂಟಾಟ
ಮೋಜಿನ ಆ ಒಡನಾಟ
ಆಗಿತ್ತು ಬೇಸಿಗೆಗೆ ಸೀಮಿತ
ಬೇಸಿಗೆಗೇ ಕಾದಿತ್ತು ಮನ

ಅಜ್ಜಿಯ ಮನೆಯದು ಭವ್ಯ
ಅಲ್ಲಿಯೇ ನಮ್ಮ ಸಾಮ್ರಾಜ್ಯ
ಇರುಳು ಸಾಲದು ಹಗಲು ಸಾಲದು
ಆ ಅನುಭವ ದಿವ್ಯ

ತೋಟ ಗದ್ದೆ ಕೆರೆ ಸಮುದ್ರ
ಎಲ್ಲೆಲ್ಲೂ ನಾವು
ಆಟ ಊಟ ನೋಟ ತುಂಟಾಟ
ಚಟುವಟಿಕೆಗಳು ಹಲವು

ಇರಲಿಲ್ಲ ಬೇರೆ ಯಾವ ಚಿಂತೆ
ಬಾಲ್ಯವದು ಹುಡುಗಾಟಿಕೆಯ ಕಂತೆ
ಕ್ಷಣದಲ್ಲಿ ಮರೆಯುತಿತ್ತು ಎಲ್ಲ ನೋವು
ಅಲ್ಲಿದ್ದದ್ದು ಕೇವಲ ನಲಿವು

ಇನ್ನಿಲ್ಲ ಆ ಕಾಲ
ಇನ್ನಿಲ್ಲ ಆ ಮೋಜು
ಆ ಮನೆಯೇ ಇನ್ನಿಲ್ಲ
ಮುಗಿಯಿತದರ ಋಣ

ಕಳೆದು ಹೋಯಿತು ಬಾಲ್ಯ
ದೂರ ಸರಿಯಿತು ಆ ಸುಂದರ ಕಾವ್ಯ
ಇನ್ನು ಆ ಸಂತೋಷ ಎಂದೆಂದಿಗೂ ಅಲಭ್ಯ
ಎಂದಿಗೂ ಅಸಾಧ್ಯ

कॉलेज मे लेक्चरर्स का मुझपे ज़ोर
घर मे मेरी बेटी का शोर
होती हू लाइब्ररी मे बोर
फिर भी वही जाती हू
क्यू की मे हू मजबूर


दोस्तो, क्यू जाय्न किया हमने एम.टेक
सेम ख़तम होने को आया फिर भी नही चैन अब तक
पड़ते रहो पड़ते रहो
होश उड़ जाए तब तक