ರಾತ್ರಿ ಇಡೀ ಕುಂಭ-ದ್ರೋಣ ಮಳೆ
ತೋಟದ ಒಳಗೊಂದು ಮನೆ
ಬೆಳಗಾದರೂ ನಿಲ್ಲದ ಹನಿಗಳು
ಚದುರಿ ಹೋದರೂ ಕಾರ್ಮೋಡಗಳು
ಅಂಗಳದ ತುಂಬೆಲ್ಲ ನೀರು
ಸ್ನಾನ ಮುಗಿಸಿ ನಿಂತಂತಿರುವ ಗಿಡ-ಮರಗಳು
ತಂಪಾದ ಮುಂಜಾನೆಯಲಿ
ಮಳೆಯಲಿ, ಆದ್ಯ-ಗುಂಡ ಜೊತೆಯಲಿ